ಸೈಫ್ ಕೈ ಮೇಲಿದ್ದ ಕರೀನಾ ಟ್ಯಾಟೂ ಮಾಯ ; ಮೂರನೇ ಮದುವೆಗೆ ರೆಡಿನಾ ಚೋಟೆ ನವಾಬ್..?

ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್.. ಬಾಲಿವುಡ್‌ನ ಪ್ರಮುಖ ಜೋಡಿ. ಮದುವೆಯಾಗಿ ಹನ್ನೆರಡು ವರ್ಷವಾದರೂ ಇಬ್ಬರ ನಡುವೆ ಇರುವ ಪ್ರೇಮ ಇವತ್ತು ಕೂಡ ಮಾಸಿಲ್ಲ. ಇದು ಕೆಲವರ ಪಾಲಿಗೆ ಅಚ್ಚರಿ. ಇನ್ನೂ ಕೆಲವರ ಪಾಲಿಗೆ ವಿಶೇಷ.

ಯಾಕೆಂದರೆ.. ಸಿನಿ ತಾರೆಯರ ದಾಂಪತ್ಯ ಮುರಿದು ಬೀಳೋದು ಬಟ್ಟೆ ಬದಲಿಸುವಷ್ಟು ಸುಲಭ ಅನ್ನುವ ಮಾತು ಬಾಲಿವುಡ್‌ನಲ್ಲಿದೆ. ಈ ಕಾರಣಕ್ಕೆ.. ಸೈಫ್ ಮತ್ತು ಕರೀನಾ ದೂರವಾಗುವ ಘಳಿಗೆಗೆ ಸಾಕ್ಷಿಯಾಗಲು ಅನೇಕ ಜನ ಕಾದು ಕುಳಿತಿದ್ದಾರೆ. ಸದ್ಯಕ್ಕೆ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಇದೇ ಜನರ ಬಾಯಿಗೆ ಆಹಾರವಾಗಿದ್ದಾರೆ. ಅದಕ್ಕೆ ಕಾರಣವಾಗಿದ್ದು ಅದೊಂದು ಟ್ಯಾಟೂ.

Saif Ali Khan hides 16-year-old Kareena tattoo on forearm fans wonder if this is for a film

ಹೌದು, ಅಸಲಿಗೆ ಸೈಫ್ ಅಲಿ ಖಾನ್ ತಮ್ಮ ಪತ್ನಿ ಕರೀನಾ ಕಪೂರ್ ಅವರ ಮೇಲಿನ ಪ್ರೀತಿಗೆ ತಮ್ಮ ಕೈ ಮೇಲೆ ಕರೀನಾ ಹೆಸರನ್ನೇ ಹಚ್ಚೆ ಹಾಕಿಸಿಕೊಂಡಿದ್ದರು. ಕಳೆದ ಹದಿನಾರು ವರ್ಷಗಳಿಂದ ಈ ಟ್ಯಾಟೂ ಸೈಫ್ ಅಲಿ ಖಾನ್ ಅವರ ಕೈ ಮೇಲಿತ್ತು. ಆದರೆ ಈಗ ಕರೀನಾ ಹೆಸರು ಸೈಫ್ ಅಲಿ ಖಾನ್ ಕೈಯಿಂದ ಮಾಯವಾಗಿದೆ. ಆ ಜಾಗದಲ್ಲಿ ಈಗ ತ್ರಿಶೂಲಾಕಾರದ ಚಿಹ್ನೆ ಕಂಡು ಬಂದಿದೆ.

ಹೀಗಾಗಿಯೇ ಆಶ್ಚರ್ಯ ಚಕಿತಗೊಂಡಿರುವ ಸಾಮಾಜಿಕ ಜಾಲತಾಣದ ಅನೇಕ ಸಕ್ರಿಯ ಸದಸ್ಯರು ನಾನಾ ತರಹದ ಮಾತುಗಳನ್ನಾಡ್ತಿದ್ದಾರೆ. ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕರೀನಾ ಮತ್ತು ಸೈಫ್ ಅಲಿ ಖಾನ್ ಸದ್ಯದಲ್ಲಿಯೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವುದು ಖಾತ್ರಿ ಎಂಬ ಭವಿಷ್ಯವನ್ನ ಹೇಳುತ್ತಿದ್ದಾರೆ. ಇಷ್ಟೇ ಅಲ್ಲ ಮೂರನೇ ಮದುವೆಗೆ ಸೈಫ್ ಅಲಿ ಖಾನ್ ಸಿದ್ಧವಾದಂತೆ ಇದೆ ಎಂದು ಸೈಫ್ ಮತ್ತು ಕರೀನಾ ಇಬ್ಬರನ್ನೂ ಆಡಿಕೊಂಡು ನಗುತ್ತಿದ್ದಾರೆ.

ಅಂದ್ಹಾಗೇ 2008ರಲ್ಲಿ ಸೈಫ್ ಅಲಿ ಖಾನ್, ಕರೀನಾ ಕಪೂರ್ ಅವರ ಹೆಸರನ್ನ ತಮ್ಮ ಕೈ ಮೇಲೆ ಹಾಕಿಸಿಕೊಂಡಾಗ ವರ್ಲ್ಡ್ ಫೇಮಸ್ ಫುಟ್ಭಾಲ್ ಪ್ಲೇಯರ್ ಡೆವಿಡ್ ಬೆಕ್‌ಹ್ಯಾಮ್ ಅವರ ಜೊತೆ ಇವರನ್ನ ಹೋಲಿಸಿದ್ದರು. ತಮ್ಮ ಪತ್ನಿ ವಿಕ್ಟೋರಿಯಾ ಹೆಸರನ್ನ ಡೆವಿಡ್ ತಮ್ಮ ಎಡಗೈ ಮೇಲೆ ಹಾಕಿಕೊಂಡಂತೆ, ಸೈಫ್ ಅಲಿ ಖಾನ್ ಕರೀನಾ ಕಪೂರ್ ಅವರ ಹೆಸರನ್ನ ಹಾಕಿಸಿಕೊಂಡಿದ್ದಾರೆ ಎಂದು ಟ್ಯಾಟೂಗಳನ್ನ ಹೋಲಿಕೆ ಮಾಡಿದ್ದರು.

Saif Ali Khan hides 16-year-old Kareena tattoo on forearm fans wonder if this is for a film

ಇನ್ನೂ ತೀರಾ ಇತ್ತೀಚೆಗಷ್ಟೇ ಕರೀನಾ ಕಪೂರ್ ಕೂಡ ಸೈಫ್ ಕೈ ಮೇಲಿರುವ ತಮ್ಮ ಹೆಸರಿನ ಹಚ್ಚೆಯ ಬಗ್ಗೆ ಮಾತನಾಡಿದ್ದರು. ನಮ್ಮ ಮಗ ತೈಮೂರ್ ತಂದೆ ಕೈ ಮೇಲಿನ ಹಚ್ಚೆಯತ್ತ ಹೆಚ್ಚು ಆಕರ್ಷಿತವಾಗಿರುವುದನ್ನ ಹೇಳಿದ್ದರು. ಆ ಟ್ಯಾಟೂವನ್ನೇ ತೈಮೂರು ದಿಟ್ಟಿಸಿ ನೋಡುವಾಗೆಲ್ಲ, ಸೈಫ್, 'ಇದು ನಿಮ್ಮ ಅಮ್ಮನ ಹೆಸರು' ಎಂದು ಹೇಳುವ ಕ್ಷಣ ನನ್ನ ಪಾಲಿಗೆ ತುಂಬಾನೇ ವಿಶೇಷವಾಗಿರುತ್ತೆ ಎಂದು ಕೂಡ ಕರೀನಾ ಕಪೂರ್ ಹೇಳಿದ್ದರು

ಆದರೆ ಈಗ ಕರೀನಾ ಹೆಸರು ಸೈಫ್ ಕೈ ಮೇಲಿಲ್ಲ. ಕಾರಣವನ್ನೂ ಸೈಫ್ ಅಲಿ ಖಾನ್ ಹೇಳಿಲ್ಲ. ಹೀಗಾಗಿ ಸೈಫ್ ಮತ್ತು ಕರೀನಾ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ಊಹಾಪೋಹ ಎದ್ದಿದೆ. ನೀವು ಅಂದುಕೊಂಡತೆ ಏನು ಇಲ್ಲ ತಮ್ಮ ಮುಂದಿನ ಚಿತ್ರಕ್ಕೆ ಸೈಫ್ ಟ್ಯಾಟೂ ಬದಲಿಸಿದ್ದಾರೆ ಎಂಬ ಮಾತು ಕೂಡ ಇದೇ ವೇಳೆ ಕೇಳಿ ಬರುತ್ತಿದೆ.

More from Filmibeat

English summary
Bollywood Star Saif Ali Khan hides his 16-year-old tattoo of Kareena on his forearm, leaving fans curious if it's for a movie role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X