ಕೆಲಸವೂ ಹೋಯ್ತು, ಮದ್ವೆಯೂ ಮುರಿದು ಬಿತ್ತು, ಸೈಫ್ ಅಲಿ ಖಾನ್ ಸಹವಾಸ, ಮೂರೊತ್ತು ಉಪವಾಸ..!

ಕೆಲವೊಮ್ಮೆ ನಾವು ಮಾಡುವ ತಪ್ಪುಗಳಿಗೆ ಮಾತ್ರವಲ್ಲ. ಬೇರೆ ಯಾರೋ ಮಾಡಿದ ತಪ್ಪುಗಳಿಗೆ ಕೂಡ ನಾವೇ ಹೊಣೆಗಾರರಾಗಬೇಕಾಗುತ್ತೆ. ಶಿಕ್ಷೆಯನ್ನು ಅನುಭವಿಸಬೇಕಾಗುತ್ತೆ. ಇದಕ್ಕೆ ಸೈಫ್ ಅಲಿ ಖಾನ್ ಚೂರಿ ಇರಿತ ಪ್ರಕರಣದ ಸುತ್ತ ಮುತ್ತ ನಡೆಯುತ್ತಿರುವ ಪ್ರಹಸನ ಸದ್ಯದ ಉದಾಹರಣೆ.

ಹೌದು, ಸೈಫ್ ಅಲಿ ಖಾನ್ ಮೇಲೆ ಹಲ್ಲೆ ನಡೆದ ನಂತರ ಸಂಚಲನ ಸೃಷ್ಟಿಯಾಗಿತ್ತು. ಸ್ಟಾರ್ ಮನೆಗೆ ತೆರಳಿ ಚೂರಿ ಚುಚ್ಚುವುದು ಅಂದರೆ ಸಾಮಾನ್ಯ ಮಾತಾ ? ಉತ್ತರದಿಂದ ದಕ್ಷಿಣದವರೆಗೆ ಪೂರ್ವದಿಂದ ಪಶ್ಚಿಮದವರೆಗೆ ಈ ಸುದ್ದಿ ಕುರಿತು ಚರ್ಚೆಗಳಾದವು. ಇನ್ನು ಪೊಲೀಸರ ಮೇಲೆ ಕೂಡ ಗಂಟೆ ಉರುಳಿದಂತೆ ಒತ್ತಡ ಹೆಚ್ಚಾಗಲು ಶುರುವಾಯ್ತು. ಹೀಗಾಗಿಯೇ ಹಿಂದೆ-ಮುಂದೆ ನೋಡದ ಪೊಲೀಸರು ಆಕಾಶ್ ಕನೋಜಿಯಾ ಎಂಬ ವ್ಯಕ್ತಿಯನ್ನು ಬಂಧಿಸಿದರು. ಮರು ಮಾತನಾಡುವ ಅವಕಾಶವನ್ನು ಕೂಡ ನೀಡದೆ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದರು. ಸಾಲದಕ್ಕೆ ಸೈಫ್ ಅಲಿ ಖಾನ್ ಮೇಲೆ ಹಲ್ಲೆ ಮಾಡಿದ್ದು ಇದೇ ವ್ಯಕ್ತಿಯೆಂದು ಫೋಟೊವನ್ನು ಕೂಡ ತೇಲಿ ಬಿಟ್ಟರು.

Saif Ali Khan Incident Destroyed My Life I Lost Everything Says Akash Kailash Kanojia

ದುರ್ದೈವ ಅಂದರೆ ಕರೆದುಕೊಂಡು ಬಂದ ವ್ಯಕ್ತಿಗೂ ಈ ಪ್ರಕರಣಕ್ಕೂ ಸಂಬಂಧವೇ ಇರಲಿಲ್ಲ. ಈ ವಿಚಾರ ಗೊತ್ತಾಗುವಷ್ಟರಲ್ಲಿ ಅನಾಹುತ ನಡೆದು ಹೋಗಿತ್ತು. ಕಣ್ಣೇದುರೇ ಆಕಾಶ್ ಕನೋಜಿಯಾ ಬದುಕು ಸರ್ವ ನಾಶವೂ ಆಯ್ತು.

ಹೌದು, ಅಸಲಿಗೆ ಆಕಾಶ್ ಕನೋಜಿಯಾ ದುಡಿದು ತಿನ್ನುವ ಕಾರ್ಮಿಕ. ಹೊಟ್ಟೆಪಾಡಿಗಾಗಿ ಟೂರ್ಸ್ ಕಂಪನಿಯೊಂದರಲ್ಲಿ ಡ್ರೈವರ್ ಆಗಿ ಆಕಾಶ ಕೆಲಸ ಮಾಡುತ್ತಿದ್ದರು. ಹೇಗೋ ಬದುಕು ಕಟ್ಟಿಕೊಳ್ಳುತ್ತಿದ್ದ ಆಕಾಶ್ ಸದ್ಯದಲ್ಲಿಯೇ ಮದುವೆ ಕೂಡ ಆಗುವವರಿದ್ದರು. ಹುಡುಗಿಯನ್ನು ಕೂಡ ನೋಡಿದ್ದರು. ಮೊನ್ನೆಯ ದಿವಸ ತಮ್ಮ ಅಜ್ಜಿಯ ಆರೋಗ್ಯವನ್ನು ವಿಚಾರಿಸಿ ಮದುವೆಯಾಗಲಿರುವ ತನ್ನ ಹುಡುಗಿಯನ್ನು ಭೇಟಿಯಾಗಲು ತೆರಳುತ್ತಿದ್ದರು ಆಕಾಶ್ ಕನೋಜಿಯಾ.

ಆದರೆ, ಇದೇ ಸಮಯದಲ್ಲಿ ಪೊಲೀಸರು ಆಕಾಶ್ ಅವರನ್ನು ಬಂಧಿಸಿದರು. ರಾಯಪುರಕ್ಕೆ ಕರೆದುಕೊಂಡು ಬಂದರು. ಈಗ ಸೈಫ್ ಅಲಿ ಖಾನ್ ಮೇಲೆ ಹಲ್ಲೆಯನ್ನು ಆಕಾಶ್ ಕನೋಜಿಯಾ ನಡೆಸಿದ್ದು ಎಂಬ ಸುದ್ದಿ ಫೋಟೊ ಸಮೇತ ಕಾಡ್ಗಿಚ್ಚಿನಂತೆ ಹಬ್ಬಿದ್ದ ಹಿನ್ನೆಲೆ ಆಕಾಶ್ ಇದ್ದ ಕೆಲಸವನ್ನು ಕೂಡ ಕಳೆದುಕೊಂಡಿದ್ದಾರೆ. ಮಾಲೀಕರಿಗೆ ಕರೆ ಮಾಡಿದರೆ ಆರೋಪಿಗಳಿಗೆ ನಮ್ಮ ಕಂಪನಿಯಲ್ಲಿ ಕೆಲಸ ಇಲ್ಲ ಎಂದು ಹೇಳಿ ಅಮಾನತ್ತು ಮಾಡಿರುವ ವಿಚಾರವನ್ನು ಹೇಳಿದ್ದಾರೆ. ಇದರಿಂದ ಮಾನಸಿಕ ಆಘಾತಕ್ಕೊಳಗಾದ ಆಕಾಶ್ ಕನೋಜಿಯಾಗೆ ಆ ನಂತರ ತನ್ನ ಮದುವೆ ಕೂಡ ಮುರಿದು ಬಿದ್ದಿದೆ ಎನ್ನುವ ಸುದ್ದಿ ಬರಸಿಡಲಿನಂತೆ ಬಂದೆರಗಿದೆ. ಹುಡುಗಿ ಮನೆಯವರನ್ನು ಭೇಟಿಯಾಗಿ ಪರಿಸ್ಥಿತಿ ವಿವರಿಸಲು ಆಕಾಶ್ ಕನೋಜಿಯಾ ಪ್ರಯತ್ನ ಮಾಡಿದ್ದರಾದರೂ ಅದು ಸಾಧ್ಯವಾಗಿಲ್ಲ.

ಹೀಗಾಗಿಯೇ ಈಗ ತಮ್ಮ ಆಕ್ರೋಶವನ್ನು ಹೊರ ಹಾಕಿರುವ ಆಕಾಶ್ ಕನೋಜಿಯಾ ಪೊಲೀಸರ ತಪ್ಪಿಂದ ನನ್ನ ಬದುಕೇ ಸರ್ವನಾಶವಾಗಿದೆ ಇದಕ್ಕೆಲ್ಲ ಯಾರು ಹೊಣೆ ಎಂದು ಪ್ರಶ್ನೆ ಮಾಡಿದ್ದಾರೆ. ಪ್ರಕರಣದಿಂದ ನನ್ನ ಕೆಲಸ ಹೋಯ್ತು, ಮದುವೆ ಮುರಿದು ಬಿತ್ತು, ನನ್ನ ಕುಟುಂಬದ ಮಾನ ಹಾನಿ ಆಯ್ತು ಎಂದು ಕಣ್ಣೀರು ಹಾಕಿದ್ದಾರೆ. ಸೈಫ್ ಅಲಿ ಖಾನ್ ಸಿಸಿಟಿವಿ ದೃಶ್ಯಾವಳಿಯಲ್ಲಿ ಕಾಣುವ ವ್ಯಕ್ತಿ ನಾನಲ್ಲ ಎಂದು ಹೇಳಿದರೂ, ಪರಿಪರಿಯಾಗಿ ಕೈ ಮುಗಿದು ಬೇಡಿಕೊಂಡರು ಕೂಡ ಪೊಲೀಸರು ನನ್ನ ಒಂದು ಮಾತನ್ನು ಕೂಡ ಕೇಳಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೈಫ್ ಅಲಿ ಖಾನ್ ಆಗಲಿ ಅಥವಾ ಪೊಲೀಸರಾಗಲಿ ಆಕಾಶ್ ಕನೋಜಿಯಾಗೆ ನ್ಯಾಯ ಒದಗಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X