ತಮ್ಮದೇ ಆತ್ಮಚರಿತ್ರೆ ಘೋಷಿಸಿದ ಸೈಫ್ ಅಲಿ ಖಾನ್, ವಿಶೇಷತೆ ಏನಿರಬಹುದು?

ಯಶ್ ಚೋಪ್ರಾ ನಿರ್ಮಾಣದ 1993ರಲ್ಲಿ ತೆರೆಕಂಡ 'ಪರಂಪರ' ಚಿತ್ರದ ಮೂಲಕ ಬಾಲಿವುಡ್‌ ಪ್ರವೇಶ ಮಾಡಿದ ಸೈಫ್ ಅಲಿ ಖಾನ್ ಅಲ್ಲಿಂದ ಇಲ್ಲಿಯವರೆಗೂ ಬಿಟೌನ್ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿದ್ದಾರೆ. ಸುಮಾರು 27 ವರ್ಷಗಳ ಕಾಲ ಬಣ್ಣದ ಜಗತ್ತಿನಲ್ಲಿ ತೊಡಗಿಕೊಂಡಿದ್ದಾರೆ.

Recommended Video

Brahma ಚಿತ್ರದ ಅಪಾಯಕಾರಿ ಕಾರು ಚೇಸಿಂಗ್ ದೃಶ್ಯ ತಯಾರಾಗಿದ್ದು ಹೀಗೆ | Car Crash Scenes | Filmibeat Kannada

1991ರಲ್ಲಿ ಅಮೃತಾ ಸಿಂಗ್ ಜೊತೆ ವಿವಾಹವಾದ ಸೈಫ್ 2004ರಲ್ಲಿ ವಿಚ್ಛೇದನ ಪಡೆದುಕೊಂಡರು. ಸೈಫ್ ಮತ್ತು ಅಮೃತಾ ದಂಪತಿಗೆ ಸಾರಾ ಅಲಿ ಖಾನ್ ಮತ್ತು ಓರ್ವ ಮಗ ಸಹ ಇದ್ದಾನೆ. ಬಳಿಕ 2012ರಲ್ಲಿ ಕರೀನಾ ಕಪೂರ್ ಜೊತೆ ಎರಡನೇ ವಿವಾಹ ಆದರು. ಇವರಿಬ್ಬರ ಪ್ರೀತಿಯ ಸಂಕೇತ ತೈಮೂರ್ ಅಲಿ ಖಾನ್ ಎಂಬ ಗಂಡು ಮಗು ಇದೆ. ಎರಡೂವರೆ ದಶಕಗಳ ಕಾಲ ಸಿನಿಪ್ರಪಂಚದ ಜೊತೆ ಹೆಜ್ಜೆ ಹಾಕಿರುವ ನಟ ಇದೀಗ, ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ಮುಂದೆ ಓದಿ...

ಆತ್ಮಚರಿತ್ರೆ ಘೋಷಿಸಿದ ನಟ ಸೈಫ್!

ಆತ್ಮಚರಿತ್ರೆ ಘೋಷಿಸಿದ ನಟ ಸೈಫ್!

ಸೈಫ್ ಅಲಿ ಖಾನ್ ತಮ್ಮ ಆತ್ಮಚರಿತ್ರೆ ಬರೆಯವುದಾಗಿ ಘೋಷಿಸಿದ್ದಾರೆ. ಎರಡೂವರೆ ದಶಕಕ್ಕೂ ಹೆಚ್ಚು ಕಾಲದ ಸಿನಿಮಾ ಜರ್ನಿ, ಖಾಸಗಿ ಬದುಕು, ಯಶಸ್ಸು, ಸೋಲು ಸೇರಿದಂತೆ ಜೀವನದ ಅನೇಕ ಘಟನೆಗಳನ್ನು ಸಾರ್ವಜನಿಕವಾಗಿ ತೆರೆದಿಡಲು ಮುಂದಾಗಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೆ, ಮುಂದಿನ ವರ್ಷದಲ್ಲಿ ಸೈಫ್ ಆತ್ಮಚರಿತ್ರೆ ಓದುಗರ ಕೈ ಸೇರಲಿದೆ.

ಹೆಸರು ಅಂತಿಮಗೊಳಿಸಿಲ್ಲ

ಹೆಸರು ಅಂತಿಮಗೊಳಿಸಿಲ್ಲ

ಸೈಫ್ ಅಲಿ ಖಾನ್ ಅವರ ಆತ್ಮಚರಿತ್ರೆಗೆ ಶೀರ್ಷಿಕೆ ಅಂತಿಮವಾಗಿಲ್ಲ. ಇತ್ತೀಚಿಗಷ್ಟೆ ಟೈಮ್ಸ್ ಆಫ್ ಇಂಡಿಯಾದ ಜೊತೆ ಸಂದರ್ಶನ ನೀಡಿದ ಸೈಫ್ ತಮ್ಮ ಆತ್ಮಚರಿತ್ರೆ ಕುರಿತು ಖಚಿತಪಡಿಸಿದ್ದಾರೆ. ''ತನ್ನ ಜೀವನದ ಘಟನೆಗಳನ್ನು ದಾಖಲಿಸುವುದು ಒಂದು ರೀತಿ ಸ್ವಾರ್ಥ. ಪರವಾಗಿಲ್ಲ, ಇತರರಿಗೆ ಅದರಲ್ಲಿ ಒಳ್ಳೆಯ ಅನುಭವ ಸಿಗಬಹುದು' ಎಂದು ತಿಳಿಸಿದ್ದಾರೆ.

ರೆಕಾರ್ಡ್ ಮಾಡುವುದರಿಂದ ನೆನಪಿಟ್ಟುಕೊಳ್ಳಬಹುದು

ರೆಕಾರ್ಡ್ ಮಾಡುವುದರಿಂದ ನೆನಪಿಟ್ಟುಕೊಳ್ಳಬಹುದು

''ಬಹಳಷ್ಟು ವಿಷಯಗಳು ಬದಲಾಗಿದೆ. ಅವುಗಳನ್ನು ನಾವು ಸಂಗ್ರಹಿಸಿ ಇಡದಿದ್ದರೆ ಅದು ಸಮಯದೊಂದಿಗೆ ಕಳೆದು ಹೋಗುತ್ತದೆ. ರೆಕಾರ್ಡ್ ಮಾಡುವುದರಿಂದ ನೆನಪಿಟ್ಟುಕೊಳ್ಳಲು ಮತ್ತು ಹಿಂತಿರುಗಿ ನೋಡಲು ಚೆನ್ನಾಗಿರುತ್ತದೆ. ಇದು ತಮಾಷೆಯಾಗಿರಬಹುದು. ಆದರೆ, ಇದೊಂದು ಸ್ವಾರ್ಥ ಪ್ರಯತ್ನ ಎಂದು ನಾನು ಹೇಳುತ್ತೇನೆ. ಇತರರು ಈ ಪುಸ್ತಕವನ್ನು ಆನಂದಿಸುತ್ತಾರೆ'' ಎಂದು ಸೈಫ್ ಹೇಳಿಕೊಂಡಿದ್ದಾರೆ.

ಎರಡನೇ ಮಗು ನಿರೀಕ್ಷೆಯಲ್ಲಿ ಸೈಫ್ ದಂಪತಿ

ಎರಡನೇ ಮಗು ನಿರೀಕ್ಷೆಯಲ್ಲಿ ಸೈಫ್ ದಂಪತಿ

ಕಳೆದ ವಾರವಷ್ಟೇ ಸೈಪ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು. ಈ ಕುರಿತು ಸೈಪ್ ಮತ್ತು ಪತ್ನಿ ಕರೀನಾ ಸಹ ಸಂತಸ ಹಂಚಿಕೊಂಡಿದ್ದರು. ಡಿಸೆಂಬರ್ ತಿಂಗಳಲ್ಲಿ ಎರಡನೇ ಮಗುವಿಗೆ ಕರೀನಾ ಜನ್ಮ ನೀಡುವ ಸಾಧ್ಯತೆ ಇದೆ.

More from Filmibeat

English summary
Saif Ali Khan is all set to write his very own autobiography. The book is expected to be out in 2021.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X