»   » ವಿಡಿಯೋ: ಮಾಧ್ಯಮಗಳಿಗೆ ಉತ್ತರ ಕೊಡಲಾರದೆ ಕಾರ್ ಡ್ರೈವರ್ ಗೆ ಆವಾಝ್ ಹಾಕಿದ ಸೈಫ್!

ವಿಡಿಯೋ: ಮಾಧ್ಯಮಗಳಿಗೆ ಉತ್ತರ ಕೊಡಲಾರದೆ ಕಾರ್ ಡ್ರೈವರ್ ಗೆ ಆವಾಝ್ ಹಾಕಿದ ಸೈಫ್!

Posted By:
Subscribe to Filmibeat Kannada

ಯಾರದ್ದೋ ಸಿಟ್ಟನ್ನ ಯಾರ ಮೇಲೋ ತೋರಿಸಲು ಹೋಗಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಇದೀಗ ವಿವಾದಕ್ಕೆ ಗ್ರಾಸವಾಗಿದ್ದಾರೆ. ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಲಾಗದೆ, ಕಾರ್ ಡ್ರೈವರ್ ಗೆ ಆವಾಝ್ ಹಾಕಿರುವ ಸೈಫ್ ಅಲಿ ಖಾನ್ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

''ಕಾರಿನ ಗಾಜನ್ನ ಮೇಲೆ ಮಾಡಿ, ಗಾಡಿಯನ್ನ ರಿವರ್ಸ್ ತಗೋ ಇಲ್ಲಾಂದ್ರೆ ಒಂದು ಕೊಡ್ತೀನಿ'' ಎಂದು ತಮ್ಮ ಕಾರ್ ಡ್ರೈವರ್ ಗೆ ಧಮ್ಕಿ ಹಾಕಿದ್ದಾರೆ ಸೈಫ್ ಅಲಿ ಖಾನ್.

ಈ ವಿಡಿಯೋವನ್ನ ಎ.ಎನ್.ಐ, ತನ್ನ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟ ಮಾಡಿದ್ದು, ವಿಡಿಯೋ ನೋಡಿ ಸಾವಿರಾರು ಜನರು ಸೈಫ್ ಅಲಿ ಖಾನ್ ಗೆ ಬೆಂಡೆತ್ತಿ ಬ್ರೇಕ್ ಹಾಕ್ತಿದ್ದಾರೆ. ಅಷ್ಟಕ್ಕೂ, ಸೈಫ್ ಅಲಿ ಖಾನ್ ಹೀಗೆ ನಡೆದುಕೊಂಡಿದ್ದು ಯಾಕೆ.? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ಓದಿರಿ...

ಜೋಧ್ ಪುರದಲ್ಲಿ ನಟ ಸೈಫ್ ಅಲಿ ಖಾನ್

ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧದ ಕೃಷ್ಣ ಮೃಗ ಬೇಟೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಜೋಧ್ ಪುರ ಕೋರ್ಟ್ ನಿಂದ ಇಂದು ತೀರ್ಪು ಪ್ರಕಟ ಆಗಲಿದೆ. ಈ ಹಿನ್ನಲೆಯಲ್ಲಿ ಜೋಧ್ ಪುರಕ್ಕೆ ಸೈಫ್ ಅಲಿ ಖಾನ್ ಆಗಮಿಸಿದರು.

ಸೈಫ್-ಕರೀನಾ ಮಗನ ಬರ್ತಡೇಗೆ ಅರಣ್ಯವನ್ನೇ ಗಿಫ್ಟ್ ಕೊಟ್ಟ ವ್ಯಕ್ತಿ

ಏರ್ ಪೋರ್ಟ್ ಮುಂದೆ ನವಾಬನ ನೌಟಂಕಿ

ಜೋಧ್ ಪುರದ ಏರ್ ಪೋರ್ಟ್ ಮುಂದೆ ಸೈಫ್ ಅಲಿ ಖಾನ್ ಗೆ ಮಾಧ್ಯಮದವರು ಪ್ರಶ್ನೆ ಕೇಳಲು ಮುಂದಾಗಿದ್ದಾರೆ. ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಲಾಗದೆ, ಅಲ್ಲಿಂದ ಬೇಗ ತಪ್ಪಿಸಿಕೊಳ್ಳಲು, ''ಕಾರಿನ ಗಾಜನ್ನ ಮೇಲೆ ಮಾಡಿ, ಗಾಡಿಯನ್ನ ರಿವರ್ಸ್ ತಗೋ ಇಲ್ಲಾಂದ್ರೆ ಒಂದು ಕೊಡ್ತೀನಿ'' ಎಂದು ಕಾರ್ ಡ್ರೈವರ್ ಗೆ ಸೈಫ್ ಅಲಿ ಖಾನ್ ಆವಾಝ್ ಹಾಕಿದ್ದಾರೆ.

ಮಗನಿಗೆ 1.3 ಕೋಟಿ ವೆಚ್ಚದ ಗಿಫ್ಟ್ ಕೊಟ್ಟ ಸೈಫ್ ಅಲಿ ಖಾನ್.!

ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ಸೈಫ್ ಆರೋಪಿ

1998 ರಲ್ಲಿ 'ಹಮ್ ಸಾಥ್ ಸಾಥ್ ಹೇ' ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಎರಡು ಕೃಷ್ಣ ಮೃಗ ಬೇಟೆ ಆಡಿದ ಪ್ರಕರಣದಲ್ಲಿ ಸಲ್ಮಾನ್ ಖಾನ್, ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ, ಟಬು ಹಾಗೂ ನೀಲಂ ಆರೋಪಿಗಳು.

ಅ ವಿಡಿಯೋ ಇಲ್ಲಿದೆ ನೋಡಿ..

ಕಾರ್ ಡ್ರೈವರ್ ಗೆ ಸೈಫ್ ಅಲಿ ಖಾನ್ ಆವಾಝ್ ಹಾಕಿರುವ ವಿಡಿಯೋ ಇಲ್ಲಿದೆ ನೋಡಿ...

English summary
Watch video: Bollywood Actor Saif Ali Khan lashes out at his car driver.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X