ಬಾರಿನಲ್ಲಿ ಗ್ಲಾಸ್‌ನಿಂದ ತಲೆಗೆ ಹೊಡೆದಿದ್ದರು: ಸೈಫ್ ಅಲಿ ಖಾನ್ ಹಳೆ ನೆನಪು

ಸೈಫ್ ಅಲಿ ಖಾನ್ ಅಪರೂಪಕ್ಕೆ ವಿವಾದದಲ್ಲಿ ಸಿಲುಕುತ್ತಿರುತ್ತಾರೆ. ಸೈಫ್ ಸಿನಿಮಾಕ್ಕೆ ಬಂದ ಆರಂಭದಲ್ಲಿ ತಮ್ಮ ಹುಡುಕುತನದಿಂದ ಕೆಲವಾರು ವಿವಾದಗಳನ್ನು ಮಾಡಿಕೊಂಡಿದ್ದುಂಟು.

Recommended Video

ರಚಿತಾ ರಾಮ್ ಜೊತೆ ರಾಧಾ ರಮಣ | Filmibeat Kannada

ಶಾಂತ ಮುಖಭಾವದ ಸೈಫ್ ಅಲಿ ಖಾನ್ ಗೆ ಸಿಟ್ಟು ಬೇಗನೇ ಬರುತ್ತದೆ. ಹಾಗಾಗಿಯೇ ಅವರು ಆಗಾಗ್ಗೆ ಗಲಾಟೆಗಳಲ್ಲಿಯೂ ತೊಡಗಿಕೊಳ್ಳುವುದುಂಟು. ಬಾರ್‌ ಒಂದರಲ್ಲಿ ಒಮ್ಮೆ ನಡೆದಿದ್ದ ಗಲಾಟೆ ನೆನಪಿಸಿಕೊಂಡಿರುವ ಸೈಫ್ ವ್ಯಕ್ತಿಯೊಬ್ಬ ತಲೆಗೆ ಬಾಟಲಿ ಒಡೆದಿದ್ದನ್ನು ನೆನಪಿಸಿಕೊಂಡಿದ್ದಾರೆ.

ನೇಹಾ ದೂಪಿಯಾ ನಡೆಸಿಕೊಡುವ 'ನೋ ಫಿಲ್ಟರ್ ವಿತ್ ನೇಹಾ' ಟಾಕ್‌ ಶೋ ಗಾಗಿ ಬಾರ್‌ನಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದರಂತೆ ಸೈಫ್ ಅಲ್ಲಿಯೇ ಜಗಳವಾಗಿ ತಲೆ ಒಡೆಸಿಕೊಂಡಿದ್ದರಂತೆ.

ನನ್ನ ಪ್ರೇಯಸಿ ಜೊತೆ ಡಾನ್ಸ್ ಮಾಡು ಎಂದು ದುಂಬಾಲು

ನನ್ನ ಪ್ರೇಯಸಿ ಜೊತೆ ಡಾನ್ಸ್ ಮಾಡು ಎಂದು ದುಂಬಾಲು

ಟಾಕ್‌ ಶೋ ಗಾಗಿ ಚಿತ್ರೀಕರಣದಲ್ಲಿ ನಿರತರಾಗಿದ್ದಾಗ ವ್ಯಕ್ತಿಯೊಬ್ಬ ಸೈಫ್ ಬಳಿ ಬಂದು, 'ನನ್ನ ಪ್ರೇಯಸಿ ಜೊತೆ ಡಾನ್ಸ್ ಮಾಡು' ಎಂದು ತಾಕೀತು ಮಾಡಿದನಂತೆ. ಆದರೆ ಇದನ್ನು ಸೌಮ್ಯದಿಂದಲೇ ನಿರಾಕರಿಸಿದರಂತೆ. ಇಂಥಹಾ ಘಟನೆಗಳನ್ನು ಹಲವು ಎದುರಿಸಿದ್ದೇನೆ. ಹಾಗಾಗಿ ಆ ಕ್ಷಣದಲ್ಲಿ ನನಗೆ ಹೆಚ್ಚಿಗೇನು ಅನಿಸಲಿಲ್ಲ ಎಂದು ಅಂದಿನ ದಿನವನ್ನು ನೆನಪಿಸಿಕೊಂಡಿದ್ದಾರೆ ಸೈಫ್.

ವಿಸ್ಕಿ ಗ್ಲಾಸ್‌ನಿಂದ ಸೈಫ್ ತಲೆಗೆ ಹೊಡೆದ ವ್ಯಕ್ತಿ

ವಿಸ್ಕಿ ಗ್ಲಾಸ್‌ನಿಂದ ಸೈಫ್ ತಲೆಗೆ ಹೊಡೆದ ವ್ಯಕ್ತಿ

ನಂತರ ಅದೇ ವ್ಯಕ್ತಿ, 'ನಿನ್ನ ಮುಖ ಬಹಳ ಸುಂದರವಾಗಿದೆ. ಕೋಟಿ ಬೆಲೆ ಬಾಳುವ ಮುಖ ನಿನ್ನದು' ಎಂದನಂತೆ. ಸೈಫ್ ನಗುತ್ತಾ ಥ್ಯಾಂಕ್ಸ್ ಎಂದರಂತೆ, ಇದಕ್ಕೆ ಆ ವ್ಯಕ್ತಿ, 'ಆದರೆ ಈ ನಿನ್ನ ಮುಖವನ್ನು ಚಚ್ಚಿ ಹಾಕುತ್ತೇನೆ' ಎನ್ನುತ್ತಲೇ ಕೈಯಲ್ಲಿದ್ದ ವಿಸ್ಕಿ ಗ್ಲಾಸನ್ನು ಸೈಫ್ ತಲೆಗೆ ಒಡೆದನಂತೆ.

ತಲೆ, ಮುಖದ ಮೇಲೆ ಗಾಯಗಳಾದವಂತೆ

ತಲೆ, ಮುಖದ ಮೇಲೆ ಗಾಯಗಳಾದವಂತೆ

ಅಚಾನಕ್ ದಾಳಿಯಿಂದ ಅವಾಕ್ಕಾದ ಸೈಫ್, ಕೂಡಲೇ ಸಾವರಿಸಿಕೊಂಡು ಆತನ ಮೇಲೆ ಜಗಳಕ್ಕೆ ಹೋದರಂತೆ. ನಂತರ ಅಲ್ಲಿದ್ದವರು ಜಗಳ ಬಿಡಿಸಿದರಂತೆ. ಸೈಫ್ ತಲೆಯಿಂದ ಸಾಕಷ್ಟು ರಕ್ತ ಸುರಿಯುತ್ತಿತ್ತಂತೆ. ಅದನ್ನು ಒರಿಸಿಕೊಳ್ಳಲು ಬಾತ್‌ರೂಂ ಗೆ ಹೋದರಂತೆ ಸೈಫ್.

ಬಾತ್‌ರೂಂ ನಲ್ಲೂ ಹಲ್ಲೆಗೆ ಯತ್ನಿಸಿದನಂತೆ

ಬಾತ್‌ರೂಂ ನಲ್ಲೂ ಹಲ್ಲೆಗೆ ಯತ್ನಿಸಿದನಂತೆ

ಅಲ್ಲಿಗೂ ಬಂದ ಆ ವ್ಯಕ್ತಿಯನ್ನುದ್ದೇಶಿಸಿ, 'ನೋಡು ಎಂಥಹಾ ಕೆಲಸ ಮಾಡಿದ್ದೀಯ? ಎಂದು ಬೈದರಂತೆ ಸೈಫ್. ಆ ವ್ಯಕ್ತಿ ಅಲ್ಲಿಯೂ ಸೈಫ್ ಮೇಲೆ ಜಗಳಕ್ಕೆ ಮುಂದಾಗಿದ್ದಾನೆ. ನೆಲ ಒರೆಸುವ ಕಡ್ಡಿಯಿಂದ ಸೈಫ್ ಮೇಲೆ ಹಲ್ಲೆಗೆ ಯತ್ನಿಸಿದನಂತೆ. ಹೇಗೋ ಪಾರಾಗಿ ಹೊರಬಿದ್ದರಂತೆ ಸೈಫ್. ಆ ವ್ಯಕ್ತಿ ಹುಚ್ಚನಾಗಿಬಿಟ್ಟಿದ್ದ ಅಂದು ನನ್ನನ್ನು ಕೊಂದೇ ಬಿಡುತ್ತಿದ್ದನೋ ಏನೋ ಎಂದಿದ್ದಾರೆ ಸೈಫ್.

More from Filmibeat

English summary
Saif Ali Khan remembers a unknown guy who engaged in fight with Saif in a bar and hit him on the face with whisky glass.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X