For Quick Alerts
  ALLOW NOTIFICATIONS  
  For Daily Alerts

  ಸೈಫ್ ಅಲಿ ಖಾನ್ ಹೊಸ ಸಿನಿಮಾದ ಪೋಸ್ಟರ್: ಹಿಂದು ಭಾವನೆಗಳಿಗೆ ಧಕ್ಕೆ ಆರೋಪ

  |

  ಸೈಫ್ ಅಲಿ ಖಾನ್ ನಟನೆಯ ಹೊಸ ಸಿನಿಮಾದ ಪೋಸ್ಟರ್ ನಿನ್ನೆಯಷ್ಟೆ ಬಿಡುಗಡೆ ಆಗಿದ್ದು, ಪೋಸ್ಟರ್‌ನಲ್ಲಿ ಸೈಫ್ ಅಲಿ ಖಾನ್‌ನ ಅವತಾರ ಹಿಂದು ಭಾವನೆಗಳಿಗೆ ಧಕ್ಕೆ ತರುವಂತಿದೆ ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ.

  ಸೈಫ್ ಅಲಿ ಖಾನ್ ನಟನೆಯ 'ಭೂತ್ ಪೊಲೀಸ್' ಸಿನಿಮಾದ ಪೋಸ್ಟರ್‌ ಬಿಡುಗಡೆ ಆಗಿದೆ. ಪೋಸ್ಟರ್‌ನಲ್ಲಿ ಕೊರಳಿಗೆ ರುದ್ರಾಕ್ಷಿ ಮಾಲೆ ತೊಟ್ಟಿರುವ ಸೈಫ್, ಕೈಯಲ್ಲಿ ವಿಚಿತ್ರವಾದ ಆಯುಧವೊಂದನ್ನು ಹಿಡಿದು ಅದಕ್ಕೂ ಮಾಲೆಗಳನ್ನು ಧರಿಸಿರುವ ಚಿತ್ರ ಪೋಸ್ಟರ್‌ನಲ್ಲಿದೆ. ಸೈಫ್‌ನ ಹಿಂಭಾಗದಲ್ಲಿ ಸಾಧುವೊಬ್ಬರ ಚಿತ್ರವೂ ಇದೆ.

  ಈ ಚಿತ್ರವು ಹಿಂದು ಭಾವನೆಗಳಿಗೆ ಧಕ್ಕೆ ತರುತ್ತಿದೆ ಎಂದು ಕೆಲವು ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ''ಹಿಂದುಗಳು ಗೌರವದಿಂದ ಕಾಣುವ ಮಾಲೆಗಳನ್ನು ಆಯುಧಕ್ಕೆ ಹಾಕಲಾಗಿದೆ. ಹಿಂಬಂದಿಯಲ್ಲಿ ಸಾಧುವಿನ ಚಿತ್ರವನ್ನು ಬಳಸಲಾಗಿದೆ ಇದು ಹಿಂದುಗಳಿಗೆ ಮಾಡಿರುವ ಅವಮಾನ'' ಎಂದು ವಾದಿಸಿದ್ದಾರೆ.

  ''ಪೋಸ್ಟರ್‌ನಲ್ಲಿ ಸಾಧುವಿನ ಚಿತ್ರವನ್ನಷ್ಟೆ ಏಕೆ ಬಳಸಲಾಗಿದೆ, ಮುಸ್ಲಿಂ ಮುಲ್ಲ ಚಿತ್ರವನ್ನೇಕೆ ಬಳಕೆ ಮಾಡಲಾಗಿಲ್ಲ'' ಎಂದು ಸಹ ಕೆಲವರು ಪ್ರಶ್ನೆ ಮಾಡಿದ್ದಾರೆ. ಕೆಲವು ತಿಂಗಳ ಹಿಂದಷ್ಟೆ ಬಿಡುಗಡೆ ಆಗಿ ವಿವಾದ ಹುಟ್ಟಿಸಿದ್ದ 'ತಾಂಡವ್' ವೆಬ್ ಸರಣಿಯನ್ನು ಉದಾಹರಣೆಯಾಗಿ ನೀಡಿರುವ ನೆಟ್ಟಿಗರು, ''ಸೈಫ್ ಅಲಿ ಖಾನ್, 'ತಾಂಡವ್' ವಿವಾದದಿಂದ ಬುದ್ಧಿ ಕಲಿತಂತಿಲ್ಲ'' ಎಂದಿದ್ದಾರೆ.

  ಸೈಫ್ ಅಲಿ ಖಾನ್‌ ವಿರುದ್ದ ಆಗಾಗ್ಗೆ ಇಂಥಹಾ ಆರೋಪಗಳು ಕೇಳಿ ಬರುತ್ತಲೇ ಇರುತ್ತವೆ. 'ಆದಿಪುರುಷ್' ಸಿನಿಮಾದಲ್ಲಿ ರಾವಣನ ಪಾತ್ರವನ್ನು ಸೈಫ್ ಅಲಿ ಖಾನ್ ಮಾಡುತ್ತಿದ್ದು, ಇದಕ್ಕೂ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದರು. ಸೈಫ್ ನಟನೆಯ 'ತಾಂಡವ್' ವೆಬ್ ಸೀರೀಸ್ ಅಂತೂ ದೊಡ್ಡ ವಿವಾದವನ್ನೇ ಹುಟ್ಟುಹಾಕಿ, ನಿರ್ದೇಶಕ ಪರಾರಿಯಾಗುವಂತೆ ಆಯಿತು. ಇದೀಗ ಈ ವಿವಾದ ಸೈಫ್ ಕೊರಳಿಗೆ ಸುತ್ತಿಕೊಂಡಿದೆ.

  ಚಪ್ಪಲಿಯಲ್ಲಿ ಹೊಡೆದೆ ಅಂತ ಜಗ್ಗೇಶ್ ಅಪಪ್ರಚಾರ ಮಾಡಿ ನನ್ನ ತೇಜೋವಧೆ ಮಾಡಿದ್ರು!! | Filmibeat Kannada

  'ಭೂತ್ ಪೊಲೀಸ್' ಸಿನಿಮಾವು ಹಾರರ್ ಸಿನಿಮಾ ಆಗಿದ್ದು ಸಿನಿಮಾದಲ್ಲಿ ಸೈಫ್ ಅಲಿ ಖಾನ್ ಜೊತೆಗೆ ಅರ್ಜುನ್ ಕಪೂರ್, ಫಾತಿಮಾ ಸನಾ ಶೇಖ್, ಯಾಮಿ ಗುಪ್ತ, ಅಲಿ ಫಜಲ್, ಜಾವೇದ್ ಜೆಫ್ರಿ ನಟಿಸಿದ್ದಾರೆ. ಸಿನಿಮಾವು ಹಾಟ್‌ಸ್ಟಾರ್‌ನಲ್ಲಿ ಸೆಪ್ಟೆಂಬರ್ 10ಕ್ಕೆ ಬಿಡುಗಡೆ ಆಗಲಿದೆ.

  English summary
  Saf Ali Khan's Bhoot Police movie poster released. People said its hurting Hindu sentiments.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X