ಆತ್ಮಕತೆ ಬರೆಯುವ ಯೋಜನೆ ಕೈಬಿಟ್ಟ ಸೈಫ್ ಅಲಿ ಖಾನ್: ಕಾರಣವೇನು?

ನಟ ಸೈಫ್ ಅಲಿ ಖಾನ್ ತಮ್ಮ ಆತ್ಮಕತೆ ಬರೆಯುವ ಬಗ್ಗೆ ಈ ಹಿಂದೊಮ್ಮೆ ಹೇಳಿಕೊಂಡಿದ್ದರು. ಆದರೆ ಆ ಯೋಜನೆಯನ್ನು ಕೈಬಿಡುವ ಬಗ್ಗೆ ಯೋಚನೆ ಮಾಡಿದ್ದಾರಂತೆ ಸೈಫ್.

ಜಾಕ್ವೆಲಿನ್ ಫರ್ನಾಂಡೀಸ್ ಹಾಗೂ ಆಮ್ಯಾಂಡಾ ಕೆನ್ರಿ ಜೊತೆಗಿನ ಸಂದರ್ಶನದಲ್ಲಿ ಈ ವಿಷಯದ ಬಗ್ಗೆ ಮಾತನಾಡಿರುವ ಸೈಫ್, 'ನನ್ನ ಆತ್ಮಕತೆ ಬರೆಯುವ ಯೋಜನೆಯನ್ನು ಕೈಬಿಡುವ ಬಗ್ಗೆ ಆಲೋಚಿಸುತ್ತಿದ್ದೇನೆ' ಎಂದಿದ್ದಾರೆ.

ಇದಕ್ಕೆ ಕಾರಣವನ್ನೂ ನೀಡಿರುವ ಸೈಫ್, ಆತ್ಮಕತೆ ಬಿಡುಗಡೆ ನಂತರ ಬರುವ ತೆಗಳಿಕೆಯನ್ನು ಸಹಿಸಿಕೊಳ್ಳಲು ನಾನಿನ್ನೂ ತಯಾರಾಗಿಲ್ಲ, ಹಾಗಾಗಿ ಆತ್ಮಕತೆ ಬರೆಯುವುದು ಬೇಡ ಎಂದುಕೊಂಡಿದ್ದೇನೆ ಎಂದಿದ್ದಾರೆ.

ಬೈಗುಳ ಕೇಳಲು ಮಾನಸಿಕವಾಗಿ ಸಿದ್ಧನಾಗಿಲ್ಲ: ಸೈಫ್

ಬೈಗುಳ ಕೇಳಲು ಮಾನಸಿಕವಾಗಿ ಸಿದ್ಧನಾಗಿಲ್ಲ: ಸೈಫ್

ಆತ್ಮಕತೆ ಬರೆಯುವುದು ಸರಳವಾದ ಕಾರ್ಯವಲ್ಲ, ನೀವು ಸಂಪೂರ್ಣ ಪ್ರಮಾಣಿಕವಾಗಿ 100% ಸತ್ಯವನ್ನೇ ಆತ್ಮಕತೆಯಲ್ಲಿ ದಾಖಲಿಸಬೇಕು. ನಾನು ಅದಕ್ಕೆ ತಯಾರಿದ್ದೇನೆ. ಆದರೆ ಸತ್ಯಗಳನ್ನು ಕೇಳಲು ಹಲವರಿಗೆ ಇಷ್ಟವಿಲ್ಲ. ನಾನು ಹೇಳುವ ಸತ್ಯಗಳು ಕೆಲವರಿಗೆ ಇಷ್ಟವಾಗದೇ ಇರಬಹುದು, ಅವರ ಬೈಗುಳಗಳನ್ನು ಕೇಳಲು ನಾನು ಇನ್ನೂ ಮಾನಸಿಕವಾಗಿ ತಯಾರಾಗಿಲ್ಲ' ಎಂದಿದ್ದಾರೆ ಸೈಫ್ ಅಲಿ ಖಾನ್.

ನನ್ನ ಜೀವನದ ಕತೆ ಹಂಚಿಕೊಳ್ಳಲು ಇದು ಸಕಾಲವಲ್ಲ: ಸೈಫ್

ನನ್ನ ಜೀವನದ ಕತೆ ಹಂಚಿಕೊಳ್ಳಲು ಇದು ಸಕಾಲವಲ್ಲ: ಸೈಫ್

ಭಾರತದಲ್ಲಿ ಒಂದು ವರ್ಗದ ಪ್ರೇಕ್ಷಕರು ಅಥವಾ ಜನ ಬಹಳ ನೆಗೆಟಿವ್ ಆಗಿದ್ದಾರೆ. ಯಾವುದೇ ವಿಷಯದಲ್ಲೂ ಅವರು ತಪ್ಪು ಹುಡುಕಬಲ್ಲರು ಮತ್ತು ಟ್ರೋಲ್ ಮಾಡಬಲ್ಲರು, ಇಂಥಹಾ ಪರಿಸ್ಥಿತಿಯಲ್ಲಿ ನನ್ನ ಜೀವನದ ಕತೆ ಹಂಚಿಕೊಳ್ಳುವುದು ಉತ್ತಮವಲ್ಲ ಎನಿಸುತ್ತದೆ ಎಂದಿದ್ದಾರೆ ಸೈಫ್.

ಕಳೆದ ಆಗಸ್ಟ್‌ನಲ್ಲಿ ಘೊಷಿಸಿದ್ದ ಸೈಫ್ ಅಲಿ ಖಾನ್

ಕಳೆದ ಆಗಸ್ಟ್‌ನಲ್ಲಿ ಘೊಷಿಸಿದ್ದ ಸೈಫ್ ಅಲಿ ಖಾನ್

ಕಳೆದ ಆಗಸ್ಟ್‌ನಲ್ಲಿ ಸೈಫ್ ಅಲಿ ಖಾನ್ ತಮ್ಮ ಆತ್ಮಕತೆ ಬರೆಯುವುದಾಗಿ ಹೇಳಿಕೊಂಡಿದ್ದರು. 2020 ಕ್ಕೆ ಅದು ಬಿಡುಗಡೆ ಆಗುತ್ತದೆ ಎಂದಿದ್ದರು. ಆದರೆ ಸೈಫ್ ಈಗ ಆತ್ಮಕತೆ ಬರೆಯುವ ನಿರ್ಧಾರಕ್ಕೆ ಬಹುತೇಕ ಪೂರ್ಣವಿರಾಮವಿಟ್ಟಿದ್ದಾರೆ. ಪುಸ್ತಕ ಪ್ರೇಮಿ ಸೈಫ್, ಒಳ್ಳೆಯ ಆತ್ಮಕತೆ ಬರೆಯುತ್ತಾರೆ ಎಂದೇ ಎಲ್ಲರೂ ನಿರೀಕ್ಷಿಸಿದ್ದರು.

Recommended Video

Act 1978 : ಮನಸಾರೆ ಒಪ್ಪಿಕೊಳ್ಳಬೇಕು ಮಂಸೋರೆ ಈ ಸಾಹಸ | Act 1978 Review | Filmibeat Kannada
ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್

ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್

ಸೈಫ್ ಅಲಿ ಖಾನ್ ಪ್ರಸ್ತುತ, 'ಬೂತ್ ಪೊಲೀಸ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಆಮಿ ಜಾಕ್ಸನ್ ಸಹ ಇದ್ದಾರೆ. ಸೈಫ್, ಪ್ರಭಾಸ್ ಅಭಿನಯದ ಬಿಗ್ ಬಜೆಟ್ ಸಿನಿಮಾ ಆದಿಪುರುಷ್ ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೈಫ್ ಅನ್ನು ರಾವಣನ ಪಾತ್ರದಿಂದ ತೆಗೆದುಹಾಕುವಂತೆ ಒತ್ತಾಯ ಕೇಳಿಬಂದಿದೆ.

More from Filmibeat

English summary
Saif Ali Khan said he is dropping the idea of writing his autobiography. He said 'i am not prepare for the abuse'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X