For Quick Alerts
  ALLOW NOTIFICATIONS  
  For Daily Alerts

  ಕರಣ್ ಜೋಹರ್ ಜೊತೆ ಸಹಾಯಕ ನಿರ್ದೇಶಕನಾಗಿ ಕೆಲಸಕ್ಕೆ ಸೇರಿದ ಸೈಫ್ ಅಲಿ ಖಾನ್ ಪುತ್ರ

  |

  ಸ್ಟಾರ್ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸುವುದರಲ್ಲಿ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ಎತ್ತಿದ ಕೈ. ಈಗಾಗಲೇ ಸಾಕಷ್ಟು ಸ್ಟಾರ್ ಕಿಡ್‌ಗಳನ್ನು ಬಣ್ಣದ ಲೋಕಕ್ಕೆ ಎಂಟ್ರಿ ಕೊಡಿಸಿರುವ ಕರಣ್ ಇದೀಗ ಸೈಫ್ ಅಲಿ ಖಾನ್ ಪುತ್ರನನ್ನು ಬಾಲಿವುಡ್‌ಗೆ ಕರೆತರುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

  ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಸಹ ಇದೇ ಕರಣ್ ಜೋಹರ್. ಅಂದಹಾಗೆ ಸೈಫ್ ಪುತ್ರ ಇಬ್ರಾಹಿಂ ಅಲಿ ಖಾನ್ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಿರುವುದು ನಾಯಕನಾಗಿ ಅಲ್ಲ, ಬದಲಿಗೆ ಸಹಾಯಕ ನಿರ್ದೇಶಕನಾಗಿ. ಬಹುತೇಕರು ನಾಯಕನಾಗಿ ಮಿಂಚಬೇಕು, ಬೆಳ್ಳಿ ಪರದೆ ಮೇಲೆ ರಾರಾಜಿಸಬೇಕು ಎನ್ನುವ ಕನಸು ಕಂಡಿರುತ್ತಾರೆ. ಆದರೆ ಸೈಫ್ ಪುತ್ರ ನಿರ್ದೇಶಕನಾಗುವ ಕನಸನ್ನು ಹೊತ್ತು ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ.

  ಮಗನ ಹೆಸರು ಬದಲಿಸುವ ಬಗ್ಗೆ ಕರೀನಾಗೆ ಪತ್ರ ಬರೆದಿದ್ದ ಸೈಫ್ ಅಲಿ ಖಾನ್ಮಗನ ಹೆಸರು ಬದಲಿಸುವ ಬಗ್ಗೆ ಕರೀನಾಗೆ ಪತ್ರ ಬರೆದಿದ್ದ ಸೈಫ್ ಅಲಿ ಖಾನ್

  ಕರಣ್ ಜೋಹರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾದಲ್ಲಿ ಇಬ್ರಾಹಿಂ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಲಿದ್ದಾರೆ. ಅಂದಹಾಗೆ ಕರಣ್ ಮುಂದಿನ ಸಿನಿಮಾ ರಣ್ವೀರ್ ಸಿಂಗ್ ಮತ್ತು ಅಲಿಯಾ ಭಟ್ ಜೊತೆ ಮಾಡುತ್ತಿದ್ದಾರೆ.

  ಗಲ್ಲಿಬಾಯ್ ಸಿನಿಮಾ ಬಳಿಕ ಅಲಿಯಾ ಮತ್ತು ರಣ್ವೀರ್ ಎರಡನೇ ಬಾರಿ ಒಂದಾಗುತ್ತಿದ್ದಾರೆ. ಗಲ್ಲಿಬಾಯ್ ಸೂಪರ್ ಹಿಟ್ ಆದ ಬಳಿಕ ಈ ಜೋಡಿಯನ್ನು ಮತ್ತೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅಭಿಮಾನಿಗಳ ಆಸೆಯಂತೆ ಅಲಿಯಾ ಮತ್ತು ರಣ್ವೀರ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

  ಕರಣ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಇನ್ನೂ ಹೆಸರಿಡದ ಈ ಚಿತ್ರ ರೊಮ್ಯಾಂಟಿಕ್ ಥ್ರಿಲ್ಲರ್ ಆಗಿದೆಯಂತೆ. ಸದ್ಯ ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿರುವ ಕರಣ್ ಮತ್ತು ತಂಡ ಜೂನ್ ಅಥವ ಜುಲೈನಲ್ಲಿ ಚಿತ್ರೀಕರಣ ಪ್ರಾರಂಭ ಮಾಡಲಿದ್ದಾರೆ.

  ಮದಕರಿ ಸಿನಿಮಾಗೂ ಮುಂಚೆ ಗೋಲ್ಡ್ ರಿಂಗ್ ಮೂಲಕ ತೆರೆಮೇಲೆ ಬರಲಿದ್ದಾರೆ ಡಿ ಬಾಸ್ | Filmibeat Kannada

  ಅದಕ್ಕೂ ಮೊದಲು ವರ್ಕ್ ಶಾಪ್ ಆಯೋಜಿಸಲಿದ್ದು, ರಣ್ವೀರ್ ಮತ್ತು ಅಲಿಯಾ ಜೊತೆಗೆ ಇಬ್ರಾಹಿಂ ಕೂಡ ಭಾಗಿಯಾಗುತ್ತಿದ್ದಾರೆ. ಅಲಿಯಾ ಮತ್ತು ರಣ್ವೀರ್ ಸಿನಿಮಾಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುವ ಮೂಲಕ ಬಣ್ಣದ ಲೋಕದ ಪಯಣ ಪ್ರಾರಂಭಿಸುತ್ತಾರಾ ಎಂದು ಕಾಯುನೋಡಬೇಕು.

  English summary
  Bollywood Actor Saif Ali Khan son Ibrahim Ali Khan joined as assistant director with Karan Johar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X