ಆದಿಪುರುಷ್ ಚಿತ್ರೀಕರಣ ಮುಗಿಸಿದ ಸೈಫ್ ಅಲಿ ಖಾನ್

ಬಾಲಿವುಡ್ ನಟ ಸೈಫ್ ಅಲಿ ಖಾನ್ ಬಹುನಿರೀಕ್ಷೆಯ ಆದಿಪುರುಷ್ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಆದಿಪುರುಷ್ ಶೂಟಿಂಗ್ ಮುಗಿಸಿದ ಹಿನ್ನೆಲೆ ಚಿತ್ರದ ಸೆಟ್‌ನಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಲಾಗಿದೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಓಂ ರಾವತ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಟ್ವಿಟ್ಟರ್‌ನಲ್ಲಿ ಶೂಟಿಂಗ್ ಮುಗಿಸಿದ ಸಂಭ್ರಮಾಚರಣೆಯ ಫೋಟೋಗಳನ್ನು ಶೇರ್ ಮಾಡಿದ್ದಾರೆ. 'ಲಂಕೇಶ್ ಚಿತ್ರೀಕರಣ ಮುಗಿಸಿದೆ, ಸೈಫ್ ಅಲಿ ಖಾನ್ ತುಂಬಾ ಲವಲವಿಕೆಯಿಂದ ಕೆಲಸ ಮಾಡಿದ್ದಾರೆ' ಎಂದು ಪೋಸ್ಟ್ ಹಾಕಿದ್ದಾರೆ.

ಆದಿಪುರುಷ್ ಚಿತ್ರದಲ್ಲಿ ಪ್ರಭಾಸ್ ನಾಯಕನಾಗಿ ನಟಿಸುತ್ತಿದ್ದಾರೆ. ಇದೊಂದು ಪೌರಾಣಿಕ ಕಥಾಹಂದರ ಹೊಂದಿದ್ದು, ಶ್ರೀರಾಮನ ಪಾತ್ರದಲ್ಲಿ ಪ್ರಭಾಸ್ ಹಾಗೂ ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ಅಭಿನಯಿಸುತ್ತಿದ್ದಾರೆ. ಸನ್ನಿ ಸಿಂಗ್ ಲಕ್ಷ್ಮಣನಾಗಿ ಹಾಗೂ ನಟಿ ಕೃತಿ ಸನೂನ್ ಸೀತೆಯಾಗಿ ನಟಿಸುತ್ತಿದ್ದಾರೆ.

Saif Ali Khan Wrap up Adipurush Shooting

ಕೊರೊನಾ ಎರಡನೇ ಲಾಕ್‌ಡೌನ್ ಮುಗಿದ ಮೇಲೆ ಮುಂಬೈನಲ್ಲಿ ಚಿತ್ರೀಕರಣಕ್ಕೆ ಮರುಚಾಲನೆ ಕೊಡಲಾಗಿತ್ತು. ನಟ ಪ್ರಭಾಸ್ ಮತ್ತು ಸೈಫ್ ಅಲಿ ಖಾನ್ ಇಬ್ಬರು ಶೂಟಿಂಗ್‌ನಲ್ಲಿ ಭಾಗವಹಿಸಿದ್ದರು. ಇದೀಗ, ರಾವಣನ ಪಾತ್ರಧಾರಿ ಸೈಫ್ ಅವರ ಸಂಪೂರ್ಣ ಭಾಗದ ಶೂಟಿಂಗ್ ಕೆಲಸ ಮುಗಿಸಿದೆ. ಹಾಗೂ ಪ್ರಭಾಸ್ ಅವರ ಭಾಗದ ಚಿತ್ರೀಕರಣ ಈ ತಿಂಗಳ ಅಂತ್ಯದಲ್ಲಿ ಮುಗಿಸುವ ಯೋಜನೆ ಇದೆಯಂತೆ.

ಆದಿಪುರುಷ್ ಚಿತ್ರತಂಡ ಈಗಾಗಲೇ ರಿಲೀಸ್ ದಿನಾಂಕ ಪ್ರಕಟಿಸಿದೆ. ಆಗಸ್ಟ್ 11, 2022ಕ್ಕೆ ಆದಿಪುರುಷ್ ಸಿನಿಮಾ ಹಲವು ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಟಿ-ಸಿರೀಸ್ ಭೂಷಣ್ ಕುಮಾರ್, ಕೃಷ್ಣನ್ ಕುಮಾರ್, ಓಂ ರಾವತ್, ಪ್ರಸಾದ್ ಸುತಾರ್ ಮತ್ತು ರೆಟ್ರೊಫೈಲ್ಸ್ ನ ರಾಜೇಶ್ ನಾಯರ್ ಈ ಚಿತ್ರವನ್ನು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ 400-450 ಕೋಟಿ ಬಜೆಟ್ ಆಗಲಿದೆ ಎಂದು ಅಂದಾಜಿಸಲಾಗಿದೆ. ಅದರಲ್ಲಿ ಶೇಕಡಾ ಅರ್ಧದಷ್ಟು ಭಾಗ ವಿಎಫ್‌ಎಕ್ಸ್‌ ಮೇಲೆ ಖರ್ಚು ಮಾಡಲಾಗುತ್ತಿದೆ.

Saif Ali Khan Wrap up Adipurush Shooting

ಆದಿಪುರುಷ್ ಎದುರು ಅಕ್ಷಯ್ ಕುಮಾರ್ ಚಿತ್ರ

ಹಿಂದಿ, ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆ ಸೇರಿದಂತೆ 'ಆದಿಪುರುಷ್' ಸಿನಿಮಾ ಪ್ಯಾನ್ ಇಂಡಿಯಾ ಬಿಡುಗಡೆಯಾಗಲಿದೆ. ಇಂತಹ ಮೆಗಾ ಚಿತ್ರದ ಬಿಡುಗಡೆಯಂದೇ ಅಕ್ಷಯ್ ಕುಮಾರ್ ನಟನೆಯ ರಕ್ಷಾ ಬಂಧನ್ ಚಿತ್ರ ರಿಲೀಸ್ ಆಗುತ್ತಿದೆ. ಆಗಸ್ಟ್ 11ಕ್ಕೆ ರಕ್ಷಾ ಬಂಧನ್ ಚಿತ್ರ ಚಿತ್ರಮಂದಿರಕ್ಕೆ ಲಗ್ಗೆಯಿಡಲಿದೆ. ಇದಕ್ಕೂ ಮುಂಚೆ ಈ ಚಿತ್ರ 2021ರ ನವೆಂಬರ್ ತಿಂಗಳಲ್ಲಿ ರಿಲೀಸ್ ಆಗಬೇಕಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಹೊಸ ದಿನಾಂಕ ಕಂಡುಕೊಂಡಿದೆ. ಆನಂದ್ ಎಲ್ ರೈ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಭೂಮಿ ಪಡ್ನೆಕರ್ ನಾಯಕಿಯಾಗಿ ನಟಿಸುತ್ತಿದ್ದಾರೆ.

More from Filmibeat

English summary
As per source, Saif Ali Khan wrap up Adipurush movie shooting. Mostly, Prabhas will also wrap up his entire shoot by this month end.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X