ಬಾಲಿವುಡ್ ಚೋಟೆ ನವಾಬ್‌ಗೆ ಭಾರೀ ಆಘಾತ, ₹15,000 ಕೋಟಿ ಕಳೆದುಕೊಂಡ ಸೈಫ್ ಅಲಿ ಖಾನ್ ?

ಹಣ ಕಂಡರೆ ಹೆಣ ಕೂಡ ಬಾಯಿ ಬೀಡುವ ಕಾಲ ಇದು. ಈ ಕಾಲದಲ್ಲಿ ದುಡ್ಡೊಂದಿದ್ದರೆ ಸಾಕು ಎಲ್ಲವನ್ನೂ ಪಡೆದುಕೊಳ್ಳಬಹುದು ಅನ್ನುವ ಮನಸ್ಥಿತಿ ಅನೇಕರದ್ದು. ಇಂಥಾ ಕಾಲದಲ್ಲಿ ಸೈಫ್ ಅಲಿ ಖಾನ್ ಒಂದಲ್ಲ.. ಎರಡಲ್ಲ.. ನೂರಲ್ಲ.. ಇನ್ನೂರಲ್ಲ.. ಬರೋಬ್ಬರಿ ₹15,000 ಕೋಟಿ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ ಎಂದರೆ ನೀವು ನಂಬ್ತೀರಾ. ನಂಬಲೇಬೇಕು ಯಾಕೆಂದರೆ ಇದೇ ಸತ್ಯ.

ಹೌದು.. ಅಸಲಿಗೆ.. ಭೋಪಾಲ್‌ನಲ್ಲಿ ಸೈಫ್ ಅಲಿ ಖಾನ್ ಅವರಿಗೆ ಸೇರಿದ ಭವ್ಯವಾದ ಅರಮನೆ ಇದೆ. ಸೈಫ್ ಅಲಿ ಖಾನ್ ತಮ್ಮ ಬಾಲ್ಯವನ್ನು ಕಳೆದಿದ್ದು ಇದೇ ಅರಮನೆಯಲ್ಲಿ. ₹15,000 ಕೋಟಿ ಮೌಲ್ಯದ ಈ ಅರಮನೆಯನ್ನು 1935ರಲ್ಲಿ ಸೈಫ್ ಅಲಿ ಖಾನ್ ಅವರ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿಯ ತಾಯಿಯ ಅಜ್ಜ ನವಾಬ್ ಹಮೀದುಲ್ಲಾ ಖಾನ್ ನಿರ್ಮಾಣ ಮಾಡಿದ್ದರು.

saif-ali-khans-15-000-cr-bhopal-property-high-court-orders-fresh-enquiry-battle-continues

ಆದರೆ ಈ ಭವ್ಯವಾದ ಅರಮನೆ ಅನೇಕರ ಕಣ್ಣು ಕುಕ್ಕುತ್ತಿದೆ. ಅದರಲ್ಲಿಯೂ ವಿಶೇಷವಾಗಿ ಕೇಂದ್ರ ಸರ್ಕಾರದ ಕಣ್ಣು ಸೈಫ್ ಅಲಿ ಖಾನ್ ಅವರ ಈ ಮನೆಯ ಮೇಲಿದೆ.

ಇದಕ್ಕೆ ಕೈಗನ್ನಡಿ ಎನ್ನುವಂತೆ 2014ರಿಂದ ಕೇಂದ್ರ ಸರ್ಕಾರ ಸೈಫ್ ಅಲಿ ಖಾನ್ ಅವರ ಈ ₹15,000 ಕೋಟಿಯ ಮನೆಯ ಮೇಲೆ ನಿಗಾ ವಹಿಸಿದ್ದು ಸೈಫ್ ಅಲಿ ಖಾನ್ ಅವರಿಗೆ ಸೇರಿದ ಆಸ್ತಿ ಶತ್ರು ರಾಷ್ಟ್ರಕ್ಕೆ ಸೇರಿದ್ದು ಎಂಬ ವಾದವನ್ನು ಮಾಡುತ್ತಿದೆ. ಈ ಪ್ರಕರಣ ಇದೀಗ ಮಹತ್ತರ ತಿರುವು ಪಡೆದಿದ್ದು ಸೈಫ್ ಅಲಿ ಖಾನ್ ಗೆ ಭಾರೀ ಹಿನ್ನೆಡೆಯಾಗಿದೆ.

ಹೌದು, ಭೋಪಾಲ್‌ನಲ್ಲಿರುವ ತಮ್ಮ ₹15,000 ಕೋಟಿ ಆಸ್ತಿಯ ಕುರಿತು ಹೈಕೋರ್ಟ್‌ ಮೆಟ್ಟಿಲೇರಿದ್ದ ಸೈಫ್ ಅಲಿ ಖಾನ್ ಅವರಿಗೆ ಮುಖಭಂಗವಾಗಿದ್ದು, ಸೈಫ್ ಅಲಿ ಖಾನ್ ಮಧ್ಯಪ್ರದೇಶದ ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. 25 ವರ್ಷಗಳ ಹಿಂದೆ ಕೆಳ ನ್ಯಾಯಾಲಯ ನೀಡಿದ್ದ ತೀರ್ಪನ್ನು ಕೂಡ ರದ್ದು ಗೊಳಿಸಿದೆ.

ಈ ಪ್ರಕರಣವನ್ನು ಪುನಃ ವಿಚಾರಣೆಗೆ ಮಧ್ಯ ಪ್ರದೇಶ್ ಹೈಕೋರ್ಟ್ ಕಳುಹಿಸಿದ್ದು, ಒಂದು ವರ್ಷದೊಳಗೆ ಪ್ರಕರಣದ ವಿಚಾರಣೆಯನ್ನು ಮುಗಿಸುವಂತೆ ಕೆಳ ನ್ಯಾಯಾಲಯಕ್ಕೆ ಸೂಚನೆಯನ್ನು ಕೂಡ ಹೈಕೋರ್ಟ್ ನೀಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ.. ಎಬಿಪಿ ನ್ಯೂಸ್.. ಎನ್‌ಡಿಟಿವಿ.. ಇಂಡಿಯಾ ಟುಡೇ ಸೇರಿ ಅನೇಕ ರಾಷ್ಟ್ರೀಯ ಮಾಧ್ಯಮಗಳು ವರದಿಯನ್ನು ಮಾಡಿವೆ.

saif-ali-khans-15-000-cr-bhopal-property-high-court-orders-fresh-enquiry-battle-continues

ಪ್ರಕರಣದ ಹಿನ್ನೆಲೆ

ಭೋಪಾಲ್‌ನಲ್ಲಿ ಸೈಫ್ ಅಲಿ ಖಾನ್ ಅವರಿಗೆ ಸೇರಿದ ಭವ್ಯವಾದ ಅರಮನೆ ಇದ್ದು, ಸೈಫ್ ಅಲಿ ಖಾನ್ ತಮ್ಮ ಬಾಲ್ಯವನ್ನು ಈ ಮನೆಯಲ್ಲಿಯೇ ಕಳೆದಿರುವುದಾಗಿ ಹಿಂದೆ ಅನೇಕ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. 15,000 ಕೋಟಿ ಮೌಲ್ಯದ ಈ ಅರಮನೆಯನ್ನು 1935ರಲ್ಲಿ ಸೈಫ್ ಅಲಿ ಖಾನ್ ಅವರ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿಯ ತಾಯಿಯ ಅಜ್ಜ ನವಾಬ್ ಹಮೀದುಲ್ಲಾ ಖಾನ್ ನಿರ್ಮಾಣ ಮಾಡಿದ್ದರು.

ಆದರೆ, 1947ರ ವಿಭಜನೆಯ ನಂತರ ನವಾಬ್ ಹಮೀದುಲ್ಲಾ ಖಾನ್ ತಮ್ಮ ಈ ಆಸ್ತಿಯನ್ನು ತೊರೆದು ಪಾಕಿಸ್ತಾನಕ್ಕೆ 1950ರಲ್ಲಿ ವಲಸೆ ಹೋದರು.ಈ ಸಮಯದಲ್ಲಿ ನವಾಬ್ ಹಮೀದುಲ್ಲಾ ಖಾನ್ ಅವರ ಮೂವರು ಹೆಣ್ಣು ಮಕ್ಕಳ ಪೈಕಿ ಒಬ್ಬ ಮಗಳಾದ ಅಬಿದಾ ಸುಲ್ತಾನ್ ತಂದೆ ಜೊತೆ ಪಾಕಿಸ್ತಾನಕ್ಕೆ ತೆರಳಿದರೆ ನವಾಬ್ ಇಫ್ತಿಕರ್ ಅಲಿ ಪಟೌಡಿಯನ್ನು ಮದುವೆಯಾಗಿದ್ದ ಎರಡನೇ ಮಗಳು ಸಾಜಿದಾ ಸುಲ್ತಾನ್ ಭಾರತದಲ್ಲಿಯೇ ಉಳಿದುಕೊಂಡರು. ಕಾನೂನು ಬದ್ದವಾಗಿ ಆಸ್ತಿಗಳ ಉತ್ತರಾಧಿಕಾರಿಯಾದರು.

2019ರಲ್ಲಿ ನ್ಯಾಯಾಲಯ ಕೂಡ ಸಾಜಿದಾ ಸುಲ್ತಾನ್ ಅವರೇ ಈ ಆಸ್ತಿಯ ಉತ್ತರಾಧಿಕಾರಿಯೆಂದು ಹೇಳಿತ್ತು. ಆಸ್ತಿಯಲ್ಲಿ ಸೈಫ್ ಅಲಿ ಖಾನ್ ಅವರಿಗೆ ಕೂಡ ಪಾಲನ್ನು ನೀಡಿತ್ತು. ಆದರೆ, ಆ ನಂತರ ಸಾಜಿದಾ ಅವರ ಅಕ್ಕ ಪಾಕಿಸ್ತಾನಕ್ಕೆ ವಲಸೆ ಹೋಗಿದ್ದ ಹಿನ್ನೆಲೆ ಕೇಂದ್ರ ಸರ್ಕಾರ ಚಕಾರವೆತ್ತಿತ್ತು. 1968ರ ಶತ್ರು ಆಸ್ತಿ ಕಾಯ್ದೆ ಅಡಿ ಈ ಆಸ್ತಿ ಬರುತ್ತೆ ಎಂದು ವಾದವನ್ನು ಮಾಡಿತ್ತು. ಈ ಕಾಯ್ದೆಯ ಅಡಿ ಭಾರತ ಮತ್ತು ಪಾಕಿಸ್ಥಾನದ ವಿಭಜನೆಯ ನಂತರ ಭಾರತವನ್ನು ತೊರೆದು ಹೋದವರ ಮೇಲೆ ಸರ್ಕಾರದ ಹಕ್ಕು ಮಾತ್ರ ಇರುತ್ತೆ ಎಂದು ಕೇಂದ್ರ ಸರ್ಕಾರ ಹೇಳಿತ್ತು.

ಈ ಹಿನ್ನೆಲೆ ಮಧ್ಯ ಪ್ರದೇಶ ಕೈಕೋರ್ಟ್‌ಗೆ ಸೈಫ್ ಅಲಿ ಖಾನ್ ಅರ್ಜಿಯನ್ನು ಸಲ್ಲಿಸಿ ತಡೆಯಾಜ್ಞೆ ತಂದಿದ್ದರು. ಆದರೆ ಈ ವರ್ಷದ ಆರಂಭದಲ್ಲಿ ಈ ತಡೆಯಾಜ್ಞೆಯನ್ನು ಹೈಕೋರ್ಟ್‌ನ ನ್ಯಾಯಮೂರ್ತಿ ವಿವೇಕ್ ಅಗರ್ ವಾಲ್ ಅವರ ಏಕ ಸದಸ್ಯ ಪೀಠ ತೆರವುಗೊಳಿಸಿತ್ತು. ಇದರಿಂದ ಹೈರಾಣಾಗಿದ್ದ ಸೈಫ್ ಅಲಿ ಖಾನ್ ತಮ್ಮ ಕುಟುಂಬದ ಪಾರಂಪರಿಕ ಆಸ್ತಿಗಳನ್ನು 'ಶತ್ರು ಆಸ್ತಿ' ಎಂದು ಸರ್ಕಾರ ಘೋಷಿಸಿದ್ದನ್ನು ಪ್ರಶ್ನಿಸಿ ಮತ್ತೆ ಅರ್ಜಿ ಸಲ್ಲಿಸಿದ್ದರು.

saif-ali-khans-15-000-cr-bhopal-property-high-court-orders-fresh-enquiry-battle-continues

ಸೈಫ್ ಅಲಿ ಖಾನ್ ಮುಖ್ಯ ಆಸ್ತಿಗಳು

* ಫ್ಲ್ಯಾಗ್ ಸ್ಟಾಫ್ ಹೌಸ್

* ನೂರ್-ಉಸ್-ಸಬಾ ಪ್ಯಾಲೆಸ್

* ದಾರ್-ಉಸ್-ಸಲಾಮ್

* ಅಹಮದಾಬಾದ್ ಪ್ಯಾಲೆಸ್

* ಕೋಹೆಫಿಜಾ ಪ್ರಾಪರ್ಟಿ ಮತ್ತು ಇತರ ಭೂಮಿಗಳು

ಮುಂದೇನು ?

ಹೈಕೋರ್ಟ್ ನೀಡಿದ ಈ ಆದೇಶದಿಂದ ಇದೀಗ ಸೈಫ್ ಅಲಿ ಖಾನ್ ಮನೆತನಕ್ಕೆ ಸೇರಿದ 15,000 ಕೋಟಿ ಆಸ್ತಿಯ ಮೇಲೀಗ ತೂಗು ಕತ್ತಿ ನೇತಾಡುತ್ತಿದೆ. ಈ ಆಸ್ತಿ ಮುಂಬರುವ ದಿನಗಳಲ್ಲಿ ಸೈಫ್ ಅಲಿ ಖಾನ್ ಅವರ ಕೈಯಿಂದ ಜಾರಿ ಕೇಂದ್ರ ಸರ್ಕಾರದ ಸ್ವಾಧೀನಕ್ಕೆ ಬರುವ ಸಾಧ್ಯತೆ ಕೂಡ ದಟ್ಟವಾಗಿ ಕಂಡು ಬರುತ್ತಿದೆ.

More from Filmibeat

English summary
The battle for Saif Ali Khan's ₹15,000 crore Bhopal inheritance continues. MP High Court rejects a plea but mandates a fresh lower court inquiry into the 'Enemy Property' classification. Follow the unfolding saga
Read more about: saif ali khan property
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X