For Quick Alerts
  ALLOW NOTIFICATIONS  
  For Daily Alerts

  ಅರಮನೆಯನ್ನೇ ಹೊಂದಿರುವ ಸೈಫ್, ಮನೆ ಬದಲಾಯಿಸುತ್ತಿದ್ದಾರೆ!

  By ಫಿಲ್ಮೀಡೆಸ್ಕ್
  |

  ನಟ ಸೈಫ್ ಅಲಿ ಖಾನ್ ನವಾಬ್ ಕುಟುಂಬದವರು. ಅವರ ಹೆಸರಿನಲ್ಲಿ ಅರಮನೆಗಳೇ ಇವೆ. ಆದರೆ ಸೈಫ್ ಹಾಗೂ ಕರೀನಾ ಮುಂಬೈನಲ್ಲಿ 'ಫಾರ್ಚ್ಯೂನ್ ಹೈಟ್ಸ್' ಹೆಸರಿನ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು. ಈಗ ಅದನ್ನೂ ಬದಲಾಯಿಸುತ್ತಿದ್ದಾರೆ.

  ಆದರೆ ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಈ ದಂಪತಿ 'ಫಾರ್ಚ್ಯೂನ್ ಹೈಟ್ಸ್' ಮನೆ ಬಿಟ್ಟು ಬೇರೆ ಮನೆಗೆ ಹೋಗುತ್ತಿದ್ದಾರೆ. ಫಾರ್ಚ್ಯೂನ್ ಹೈಟ್ಸ್‌ನ ಅಪಾರ್ಟ್‌ಮೆಂಟ್‌ಗಿಂತಲೂ ದೊಡ್ಡದಾದ ಈ ಮನೆಯಲ್ಲಿ ಮಕ್ಕಳಿಗಾಗೆಂದೇ ಹಲವು ಹೊಸ ಸವಲತ್ತುಗಳನ್ನು ಸೇರಿಸಲಾಗಿದೆ.

  ಹೊಸ ಮನೆಯು ಈಗಿರುವ ಫಾರ್ಚ್ಯೂನ್ ಹೈಟ್ಸ್ ಮನೆಯಿಂದ ತುಸುವೇ ದೂರದಲ್ಲಿದೆ. ಹೊಸ ಮನೆಯನ್ನು ಖ್ಯಾತ ಒಳಾಂಗಣ ವಿನ್ಯಾಸಕಿ ದರ್ಶಿಣಿ ಶಾ ವಿನ್ಯಾಸಗೊಳಿಸಿದ್ದಾರೆ. ಈ ಮನೆಯಲ್ಲಿ ಮಕ್ಕಳಿಗಾಗಿ ವಿಶೇಷ ನರ್ಸರಿ ನಿರ್ಮಿಸಲಾಗಿದೆ.

  ಮಕ್ಕಳಿಗೆ ಆಟವಾಡಲು ಸ್ಥಳ, ಮಕ್ಕಳಿಗಾಗಿ ಗೋಡೆಗಳನ್ನು ವಿಶೇಷ ಬಣ್ಣಗಳು, ಚಿತ್ರಗಳಿಂದ ಸಿಂಗರಿಸಲಾಗಿದೆ. ಜೊತೆಗೆ ತೈಮೂರ್‌ ಗಾಗಿಯೆಂದೇ ವಿಶೇಷ ರೂಮ್ ಅನ್ನು ವಿನ್ಯಾಸ ಸಹ ಮಾಡಲಾಗಿದೆ.

  ಇನ್ನು ಸೈಫ್-ಕರೀನಾ ಇಬ್ಬರಿಗೂ ತಮ್ಮ ಹಳೆಯ ಮನೆ ಇಷ್ಟವಾಗಿದ್ದ ಕಾರಣ ಅದೇ ಮನೆಯ ಮಾದರಿಯಲ್ಲಿಯೇ ಹೊಸ ಮನೆಯನ್ನು ವಿನ್ಯಾಸ ಮಾಡಲಾಗಿದೆ. ಹೊಸ ಮನೆಯ ವಿನ್ಯಾಸ ಬ್ರಿಟಿಷ್ ಶೈಲಿಯಲ್ಲಿ ಮಾಡಲಾಗುತ್ತಿದೆ ಎಂದಿದ್ದಾರೆ ವಿನ್ಯಾಸಕಿ ದಿಶಾ.

  BMC ನೋಟೀಸ್ ಗೆ ತಕ್ಕ ಉತ್ತರ ನೀಡ್ತಾರಾ Sonu Sood | Filmibeat Kannada

  ಗರ್ಭಿಣಿ ಕರೀನಾ ಹೊಸ ಮನೆಯ ವಿನ್ಯಾಸದಲ್ಲಿ ಸಾಕಷ್ಟು ಕಾಳಜಿ ವಹಿಸಿದ್ದಾರಂತೆ. ಸೈಫ್, ತಮಗೆ ಗ್ರಂಥಾಲಯ ಹಾಗೂ ಆಂಟಿಕ್ ವಸ್ತುಗಳು ಹಾಗೂ ಚಿತ್ರಗಳನ್ನು ಇಡಲು ಪ್ರತ್ಯೇಕ ಗ್ಯಾಲರಿಯೊಂದರ ಬೇಡಿಕೆ ಇಟ್ಟಿದ್ದಾರಂತೆ.

  English summary
  Saif Ali Khan and Kareena Kapoor moving to new house in Mumbai. New house will have nursery and many other things.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X