Just In
Don't Miss!
- News
ಶಿವಮೊಗ್ಗ-ಬೆಂಗಳೂರು ರೈಲು ಪ್ರಯಾಣಿಕರಿಗೆ ಶುಭ ಸುದ್ದಿ
- Sports
ಶ್ರೀಲಂಕಾದಿಂದಲೇ ಟೀಮ್ ಇಂಡಿಯಾಗೆ ಎಚ್ಚರಿಕೆ ರವಾನಿಸಿದ ಜೋ ರೂಟ್
- Finance
"ಟಿಕ್ ಟಾಕ್ ಸೇರಿ ಚೀನಾದ ಕೆಲವು ಆಪ್ ಗಳಿಗೆ ಭಾರತದಲ್ಲಿ ಶಾಶ್ವತ ನಿಷೇಧ"
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಯ್ಯೋ ಈ ಮದುವೆ ಜಾಸ್ತಿ ದಿನ ಉಳಿಯಲ್ಲ ಬಿಡ್ರಿ!
ಇನ್ನೇನು ನೂತನ ದಾಂಪತ್ಯ ಜೀವನಕ್ಕೆ ಅಡಿಯಿಡುತ್ತಿರುವ ಬಾಲಿವುಡ್ ಜೋಡಿ ಕರೀನಾ ಕಪೂರ್ ಹಾಗೂ ಸೈಫ್ ಆಲಿ ಖಾನ್ ಅವರ ಮದುವೆ ಬಗ್ಗೆ ರಾಖಿ ಭವಿಷ್ಯ ನುಡಿದ್ದಾರೆ. ಅಯ್ಯೋ ಈ ಮದುವೆ ಜಾಸ್ತಿ ದಿನ ಉಳಿಯಲ್ಲ ಬಿಡ್ರಿ ಎಂದಿದ್ದಾರೆ. ಬೇಕಿದ್ದರೆ ವಿಡಿಯೋ ನೋಡಿ.
ಇವರಿಬ್ಬರೂ ಮದುವೆಯಾಗುತ್ತಿರುವುದು ರಾಖಿಗೆ ಸ್ವಲ್ಪವೂ ಇಷ್ಟವಿದ್ದಂತಿಲ್ಲ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತಿಗಿಳಿದ ರಾಖಿ, ಸೈಫ್ ಒಬ್ಬ ಸ್ತ್ರೀಲೋಲ. ಆತ ಮಹಿಳೆಯನ್ನು ಟಿಶ್ಯೂ ಪೇಪರ್ ನಂತೆ ಬಳಸಿಕೊಂಡು ಎಸೆಯುತ್ತಾನೆ ಅಷ್ಟೇ ಎಂದಿದ್ದಾರೆ.
ಬಳಿಕ ಆಕೆಯ ಮಾತು ಕರೀನಾ ಕಡೆಗೆ ಹೊರಳಿತು, ಕರೀನಾ ಅಸಾಮಾನ್ಯ ಹೆಣ್ಣುಮಗಳು. ಅವಳನ್ನು ನಾನು ಹೆಚ್ಚಾಗಿ ಇಷ್ಟಪಡ್ತೀನಿ. ಸ್ವಲ್ಪ ನಿಧಾನಿಸಿದ್ದರೆ ಸೈಫ್ ಗಿಂತಲೂ ಅವಳಿಗೆ ಇನ್ನೂ ಯೋಗ್ಯವಾದ ಹುಡುಗ ಸಿಗುತ್ತಿದ್ದ ಎಂದು ಕರೀನಾ, ಸೈಫ್ ಮದುವೆ ಬಗ್ಗೆ ಬೇಸರಿಸಿಕೊಂಡಿದ್ದಾರೆ.
"ಇನ್ನು ಇವರಿಬ್ಬರ ಮದುವೆ ಶಾನೆ ದಿನ ಉಳಿಯಲ್ಲ ಬಿಡ್ರಿ" ಎಂದಿದ್ದಾರೆ. ಈ ಹಿಂದೆಮ್ಮೆ ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್ ಬಾಲಿವುಡ್ ಗೆ ಅಡಿಯಿಟ್ಟಾಗ ಆಕೆಯ ಮೇಲೆ ಸಿಡಿಮಿಡಿಗೊಂಡಿದ್ದರು ರಾಖಿ ಸಾಖಂತ್. ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹಾಗೂ ಅರವಿಂದ್ ಕೇಜ್ರಿವಾಲ್ ಅವರ ಮೇಲೂ ಬುಸುಗುಟ್ಟಿದ್ದರು. (ಏಜೆನ್ಸೀಸ್)