For Quick Alerts
  ALLOW NOTIFICATIONS  
  For Daily Alerts

  ಅಯ್ಯೋ ಈ ಮದುವೆ ಜಾಸ್ತಿ ದಿನ ಉಳಿಯಲ್ಲ ಬಿಡ್ರಿ!

  By Rajendra
  |

  ಈ ರೀತಿ ಉದ್ಗಾರ ತೆಗೆದಿರುವುದು ಬೇರಾರು ಅಲ್ಲ ಬಾಲಿವುಡ್ ಐಟಂ ಗರ್ಲ್ ಹಾಗೂ ಡ್ರಾಮಾ ಕ್ವೀನ್ ರಾಖಿ ಸಾವಂತ್. ಇಷ್ಟಕ್ಕೂ ಯಾರ ಬಗ್ಗೆ ಈ ರೀತಿಯ ಸಿಟ್ಟು ಸಿಡುಕು ರಾಖಿ ಸಾವಂತ್ ಗೆ? ರಾಖಿ ಸಾವಂತ್ ಬಾಯಿ ಬಿಟ್ಟರೆ ಆನೆ ಪಟಾಕಿ ಸಿಡಿದಂತೆಯೇ.

  ಇನ್ನೇನು ನೂತನ ದಾಂಪತ್ಯ ಜೀವನಕ್ಕೆ ಅಡಿಯಿಡುತ್ತಿರುವ ಬಾಲಿವುಡ್ ಜೋಡಿ ಕರೀನಾ ಕಪೂರ್ ಹಾಗೂ ಸೈಫ್ ಆಲಿ ಖಾನ್ ಅವರ ಮದುವೆ ಬಗ್ಗೆ ರಾಖಿ ಭವಿಷ್ಯ ನುಡಿದ್ದಾರೆ. ಅಯ್ಯೋ ಈ ಮದುವೆ ಜಾಸ್ತಿ ದಿನ ಉಳಿಯಲ್ಲ ಬಿಡ್ರಿ ಎಂದಿದ್ದಾರೆ. ಬೇಕಿದ್ದರೆ ವಿಡಿಯೋ ನೋಡಿ.

  ಇವರಿಬ್ಬರೂ ಮದುವೆಯಾಗುತ್ತಿರುವುದು ರಾಖಿಗೆ ಸ್ವಲ್ಪವೂ ಇಷ್ಟವಿದ್ದಂತಿಲ್ಲ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತಿಗಿಳಿದ ರಾಖಿ, ಸೈಫ್ ಒಬ್ಬ ಸ್ತ್ರೀಲೋಲ. ಆತ ಮಹಿಳೆಯನ್ನು ಟಿಶ್ಯೂ ಪೇಪರ್ ನಂತೆ ಬಳಸಿಕೊಂಡು ಎಸೆಯುತ್ತಾನೆ ಅಷ್ಟೇ ಎಂದಿದ್ದಾರೆ.

  ಬಳಿಕ ಆಕೆಯ ಮಾತು ಕರೀನಾ ಕಡೆಗೆ ಹೊರಳಿತು, ಕರೀನಾ ಅಸಾಮಾನ್ಯ ಹೆಣ್ಣುಮಗಳು. ಅವಳನ್ನು ನಾನು ಹೆಚ್ಚಾಗಿ ಇಷ್ಟಪಡ್ತೀನಿ. ಸ್ವಲ್ಪ ನಿಧಾನಿಸಿದ್ದರೆ ಸೈಫ್ ಗಿಂತಲೂ ಅವಳಿಗೆ ಇನ್ನೂ ಯೋಗ್ಯವಾದ ಹುಡುಗ ಸಿಗುತ್ತಿದ್ದ ಎಂದು ಕರೀನಾ, ಸೈಫ್ ಮದುವೆ ಬಗ್ಗೆ ಬೇಸರಿಸಿಕೊಂಡಿದ್ದಾರೆ.

  "ಇನ್ನು ಇವರಿಬ್ಬರ ಮದುವೆ ಶಾನೆ ದಿನ ಉಳಿಯಲ್ಲ ಬಿಡ್ರಿ" ಎಂದಿದ್ದಾರೆ. ಈ ಹಿಂದೆಮ್ಮೆ ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್ ಬಾಲಿವುಡ್ ಗೆ ಅಡಿಯಿಟ್ಟಾಗ ಆಕೆಯ ಮೇಲೆ ಸಿಡಿಮಿಡಿಗೊಂಡಿದ್ದರು ರಾಖಿ ಸಾಖಂತ್. ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹಾಗೂ ಅರವಿಂದ್ ಕೇಜ್ರಿವಾಲ್ ಅವರ ಮೇಲೂ ಬುಸುಗುಟ್ಟಿದ್ದರು. (ಏಜೆನ್ಸೀಸ್)

  English summary
  Bollywood's hot item girl Rakhi Sawant is back again. The motor-mouth actress, who doesn't even hesitate a bit before taking dig at the Bollywood's top-notch stars, now goes against Saif Ali Khan, who is all set to marry girlfriend Kareena Kapoor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X