For Quick Alerts
  ALLOW NOTIFICATIONS  
  For Daily Alerts

  ನೂರು ಕೋಟಿ ಗಳಿಸಿದ ವರ್ಷದ ಮೊದಲ ಚಿತ್ರ

  By Rajendra
  |

  ನಟ ಸೈಫ್ ಆಲಿ ಖಾನ್ ಅವರ ಚಿತ್ರಗಳಿಗೂ ಈ ಪಾಟಿ ಮಾರುಕಟ್ಟೆ ಇದೆಯಾ? ಎನ್ನುತ್ತಿದ್ದವರಿಗೆ ರೇಸ್ 2 ಚಿತ್ರ ಶಾಕ್ ನೀಡಿದೆ. ಸಸ್ಪೆನ್ಸ್ ಥ್ರಿಲ್ಲರ್ ಆಗಿರುವ ರೇಸ್ 2 ಚಿತ್ರ ಬಾಕ್ಸ್ ಆಫೀಸಲ್ಲಿ ಭಾರಿ ಸದ್ದು ಮಾಡಿದೆ.

  ಈ ಚಿತ್ರ ಇದುವರೆಗೂ ರು.100 ಕೋಟಿ ಕಲೆಕ್ಷನ್ ಮಾಡಿದೆ. ಈ ಮೂಲಕ ನೂರು ಕೋಟಿ ಗಳಿಸಿದ ವರ್ಷದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಭಾರತದ ಬಾಕ್ಸ್ ಆಫೀಸ್ ಒಂದರಲ್ಲೇ ಚಿತ್ರ ನೂರು ಕೋಟಿ ಗಳಿಸಿರುವುದು ವಿಶೇಷ.

  ಜ.25ರಂದು ಬಿಡುಗಡೆಯಾದ 'ರೇಸ್ 2' ಚಿತ್ರಕ್ಕೆ ಹಲವಾರು ಬಾಲಿವುಡ್ ಚಿತ್ರಗಳು ಸವಾಲೊಡ್ಡಿದರೂ ಗಳಿಕೆಯಲ್ಲಿ ಮಾತ್ರ ಹಿಂದೆಬಿದ್ದವು. ರು.60 ಕೋಟಿ ಬಜೆಟ್ ನಲ್ಲಿ ನಿರ್ಮಿಸಿರುವ ಚಿತ್ರ ಇದಾಗಿದೆ. ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ, ಜಾಕ್ವೆಲಿನ್ ಫರ್ನಾಂಡೀಸ್, ಅನಿಲ್ ಕಪೂರ್, ಅಮೀಷಾ ಪಟೇಲ್ ಚಿತ್ರದ ತಾರಾಬಳಗದಲ್ಲಿದ್ದಾರೆ.

  ಅಬ್ಬಾಸ್ ಮುಸ್ತಾನ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರ 2008ರಲ್ಲಿ ಬಿಡುಗಡೆಯಾಗಿದ್ದ ರೇಸ್ ಚಿತ್ರದ ಮುಂದುವರಿದ ಅವತರಣಿಕೆ. ರೇಸ್ 2 ಚಿತ್ರ ಮೊದಲ ವಾರವೇ ರು.76.1 ಕೋಟಿ ಗಳಿಸಿದೆ. ಎರಡನೇ ವಾರದಲ್ಲಿ ರು. 24 ಕೋಟಿ ಗಳಿಸಿದೆ ಎನ್ನುತ್ತವೆ ಬಾಕ್ಸ್ ಆಫೀಸ್ ಮೂಲಗಳು. (ಏಜೆನ್ಸೀಸ್)

  English summary
  Bollywood action thriller Race 2 has become the first film of the year to enter the Rs.100 croreclub. "And #Race2 hits a ton. Crosses ₹100 cr mark in India," trade analyst and film critics Taran Adarsh tweeted on Friday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X