For Quick Alerts
  ALLOW NOTIFICATIONS  
  For Daily Alerts

  ಮಗನ ಹೆಸರು ಬದಲಿಸುವ ಬಗ್ಗೆ ಕರೀನಾಗೆ ಪತ್ರ ಬರೆದಿದ್ದ ಸೈಫ್ ಅಲಿ ಖಾನ್

  |

  ನಟ ಸೈಫ್ ಅಲಿ ಖಾನ್, ಕರೀನಾ ಕಪೂರ್ ದಂಪತಿ ಎರಡು ದಿನಗಳ ಹಿಂದಷ್ಟೆ ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದ್ದಾರೆ. ಕರೀನಾ ಕಪೂರ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

  ಸೈಫ್-ಕರೀನಾ ರ ಮೊದಲ ಮಗು ತೈಮೂರ್ ವಿಷಯದಲ್ಲಿ ಮಾಡಿದ್ದ ತಪ್ಪನ್ನು ಎರಡನೇ ಮಗುವಿನ ವಿಷಯದಲ್ಲಿ ಮಾಡಬಾರದೆಂದು ನಿರ್ಧಾರ ಮಾಡಿದ್ದಾರೆ ಈ ದಂಪತಿ ಎನ್ನಲಾಗುತ್ತಿದೆ.

  ಮೊದಲ ಮಗುವಿಗೆ ತೈಮೂರ್ ಎಂದು ಹೆಸರಿಟ್ಟಾಗ ಸೈಫ್-ಕರೀನಾ ವಿರುದ್ಧ ಮೂದಲಿಕೆಗಳ ಸುರಿಮಳೆಯೇ ಆಗಿತ್ತು. ಯಾವ ಮಟ್ಟಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತಪಡಿಸಲಾಗಿತ್ತೆಂದರೆ, ಆ ಮಗುಗೆ ಏನಾದರೂ ಆಗಿಬಿಡಲಿ ಎಂದು ಸಹ ಕೆಲವರು ಕಮೆಂಟ್‌ಗಳನ್ನು ಹಾಕಿದ್ದರು.

  ತೈಮೂರ್ ಒಬ್ಬ ದುಷ್ಟ, ರಕ್ತಿಪಿಪಾಸೂ ರಾಜನ ಹೆಸರು. ಆ ದುಷ್ಟ ದೊರೆಯ ಹೆಸರು ಇಟ್ಟಿದ್ದಕ್ಕೆ ಸೈಫ್-ಕರೀನಾ ಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಆದರೆ ಈ ವಿರೋಧವನ್ನು ಸಹಿಸದ ಸೈಫ್, ತಮ್ಮ ಮಗುವಿನ ಹೆಸರು ಬದಲಿಸುವ ಬಗ್ಗೆ ಕರೀನಾ ಗೆ ಪತ್ರ ಬರೆದಿದ್ದರಂತೆ.

  ತೈಮೂರ್ ಹೆಸರು ಬದಲಾಯಿಸುವ ನಿರ್ಧಾರ ಕರೀನಾ ಗೆ ತಿಳಿಸಿದಾಗ ಅವರು ವಿರೋಧಿಸಿದ್ದರಂತೆ. ಆ ನಂತರ ಅವರ ಪಿಆರ್ ತಂಡ ಇನ್ನೂ ಕೆಲವರು ಹೆಸರು ಬದಲಿಸುವಂತೆ ಮನವಿ ಮಾಡಿದಾಗಲೂ ಕರೀನಾ ಬೇಡವೆಂದರಂತೆ.

  ಕೊನೆಗೆ ಸೈಫ್ ಅಲಿ ಖಾನ್ ಪತ್ರವೊಂದನ್ನು ಕರೀನಾ ಗೆ ಬರೆದರಂತೆ. ಆದರೆ ಕೆಲವು ದಿನಗಳ ನಂತರ ಸೈಫ್ ಸಹ ಹೆಸರು ಬದಲಿಸುವುದು ಬೇಡ ಎಂದುಕೊಂಡು ಸುಮ್ಮನಾದರಂತೆ. ಈ ವಿಷಯವನ್ನು ಈ ಹಿಂದೆ ಒಮ್ಮೆ ಸೈಫ್ ಅಲಿ ಖಾನ್ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದರು.

  ಎಲ್ಲರನ್ನೂ ನಗಿಸಿದ್ದ ನಟನಿಗೆ ಇದೆಂತಾ ನೋವು | Filmibeat Kannada

  ಇದೀಗ ಎರಡನೇ ಮಗು ಜನನವಾಗಿದ್ದು, ಈ ಬಾರಿ ಭಾರಿ ಎಚ್ಚರಿಕೆಯಿಂದ ಮಗುವಿಗೆ ಹೆಸರಿಡಲಿದ್ದಾರೆ ಸೈಫ್-ಕರೀನಾ ದಂಪತಿ.

  English summary
  Saif Ali Khan wrote a letter to wife Kareena Kapoor about changing Taimur's name after receiving so much hate about that name.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X