ಪರಿಣೀತಿ ಚೋಪ್ರಾ ಲುಕ್ ನೋಡಿ ಸೈನಾ ನೆಹ್ವಾಲ್ ಹೇಳಿದ್ದೇನು?

ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಬಯೋಪಿಕ್ ತಯಾರಾಗುತ್ತಿರುವ ವಿಚಾರ ಹಳೆಯದು. ಸೈನಾ ಪಾತ್ರದಲ್ಲಿ ಬಾಲಿವುಡ್ ಖ್ಯಾತ ನಟಿ ಪರಿಣೀತಿ ಚೋಪ್ರಾ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು, ಪರಿಣೀತಿ ಬ್ಯಾಡ್ಮಿಂಟನ್ ತಾರೆಯಾಗಿ ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ.

ಇದೀಗ ಚಿತ್ರದಿಂದ ಪರಿಣೀತಿ ಲುಕ್ ಲೀಕ್ ಆಗಿದೆ. ಪಾತ್ರಕ್ಕಾಗಿ ಪರಿಣೀತಿ ಭರ್ಜರಿ ಸಿದ್ಧತೆ ನಡೆಸಿದ್ದಾರೆ ಎನ್ನುವುದು ಈ ಲುಕ್ ನೋಡಿದ್ರೆ ಗೊತ್ತಾಗುತ್ತಿದೆ. ಲುಕ್ ನಲ್ಲಿ ಪರಿಣೀತಿ ಥೇಟ್ ಸೈನಾರನ್ನೇ ಹೋಲುತ್ತಿದ್ದಾರೆ. ಈ ಲುಕ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.

'ಸೈನಾ' ಹೆಸರಿನಲ್ಲಿ ಸೈನಾ ನೆಹ್ವಾಲ್ ಬಯೋಪಿಕ್ ಸಿದ್ಧವಾಗುತ್ತಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟರ್ ಬಗ್ಗೆ ಸಿನಿಮಾತಂಡ ಯಾವುದೇ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ. ಆದರೆ ಪರಿಣೀತಿ ಲುಕ್ ನೋಡಿ ಸ್ವತಃ ಸೈನಾ ನೆಹ್ವಾಲ್ ಒಪ್ಪಿಕೊಂಡಿದ್ದಾರೆ.

Saina Nehwal shares Parineeti Chopra Look From Her Biopic

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟರ್ ಗೆ ಕಾಮೆಂಟ್ಸ್ ಮಾಡಿರುವ ಪರಿಣೀತಿ ನನ್ನ ಲುಕ್ ಹಾಗೆ ಕಾಣುತ್ತಿದ್ದಾರೆ ಎಂದು ಒಪ್ಪಿಗೆ ಸೂಚಿಸಿದ್ದಾರೆ. ಸೈನಾ ನೆಹ್ವಾಲ್ ಹಾಗೆ ಹೇರ್ ಕಟ್ ಮಾಡಿಸಿಕೊಂಡು ಭಾರತೀಯ ಜೆರ್ಸಿ ಧರಿಸಿ, ಗಂಭೀರ ಲುಕ್ ಬೀರಿರುವ ಪರಿಣೀತಿ ಪೋಸ್ಟರ್ ಈಗ ವೈರಲ್ ಆಗಿದೆ.

ಅಂದಹಾಗೆ ಈ ಸಿನಿಮಾದಲ್ಲಿ ಮೊದಲು ಶ್ರದ್ಧಾ ಕಪೂರ್ ಕಾಣಿಸಿಕೊಂಡಿದ್ದರು. ಚಿತ್ರದ ಫಸ್ಟ್ ಲುಕ್ ಸಹ ರಿಲೀಸ್ ಆಗಿತ್ತು. ಆದರೆ ಕಾರಣಾಂತರಗಳಿಂದ ಶ್ರದ್ಧಾ ಜಾಗಕ್ಕೆ ಪರಿಣೀತಿ ಚೋಪ್ರಾ ಎಂಟ್ರಿ ಕೊಟ್ಟಿದ್ದಾರೆ. 2018ರಲ್ಲೇ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದೆ.

More from Filmibeat

English summary
Badminton player Saina Nehwal shares Parineeti Chopra look from her biopic.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X