ನಿರ್ದೇಶಕ ಸಾಜಿದ್ ಖಾನ್ ವಿರುದ್ಧ ಗುಡುಗಿದ ಮತ್ತೋರ್ವ ನಟಿ.!
#ಮೀಟೂ ಅಭಿಯಾನದ ಮೂಲಕ ಈಗಾಗಲೇ ಸಾಜಿದ್ ಖಾನ್ ಅಸಲಿಯತ್ತು ಬಹಿರಂಗವಾಗಿದೆ. ಸಾಜಿದ್ ಖಾನ್ ಕರಾಳ ಮುಖವನ್ನ ನಟಿ ಸಲೋನಿ ಛೋಪ್ರಾ, ಪತ್ರಕರ್ತೆ ಕರಿಷ್ಮಾ ಉಪಾಧ್ಯಾಯ ಹಾಗೂ ಮಾಡೆಲ್ ಕಮ್ ನಟಿ ರೇಚಲ್ ವೈಟ್ ಬಯಲು ಮಾಡಿದ್ದಾರೆ.
ಮಹಿಳೆಯರ ಜೊತೆಗೆ ಸಾಜಿದ್ ಖಾನ್ ವರ್ತನೆ ಸರಿಯಿಲ್ಲ ಅಂತ ನಟಿ ಬಿಪಾಶಾ ಬಸು ಕೂಡ ಹೇಳಿಕೆ ಕೊಟ್ಟಿದ್ದರು. ನಿರ್ದೇಶಕ ಸಾಜಿದ್ ಖಾನ್ ವಿರುದ್ಧ ಇಷ್ಟೆಲ್ಲಾ ಆರೋಪಗಳು ಕೇಳಿಬರುತ್ತಿರುವಾಗಲೇ, ನಟಿ ಮಂದನಾ ಕೂಡ ದನಿಗೂಡಿಸಿದ್ದಾರೆ.
2014 ರಲ್ಲಿ 'ಹಮ್ ಶಕಲ್ಸ್' ಚಿತ್ರದ ಕಾಸ್ಟಿಂಗ್ ಸಂದರ್ಭದಲ್ಲಿ ನಟಿ ಮಂದನಾಗೆ 'ಬಟ್ಟೆ ಬಿಚ್ಚು' ಅಂತ ಸಾಜಿದ್ ಖಾನ್ ಹೇಳಿದ್ರಂತೆ. ಆ ಘಟನೆಯನ್ನ ನಟಿ ಮಂದನಾ ಎಳೆಎಳೆಯಾಗಿ ವಿವರಿಸಿದ್ದಾರೆ. ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಬಟ್ಟೆ ಬಿಚ್ಚಲು ಹೇಳಿದ ಸಾಜಿದ್ ಖಾನ್
''ಹಮ್ ಶಕಲ್ಸ್ ಚಿತ್ರದ ಕಾಸ್ಟಿಂಗ್ ಸಂದರ್ಭದಲ್ಲಿ ನಾನು ಹಾಗೂ ನನ್ನ ಮ್ಯಾನೇಜರ್ ಸಾಜಿದ್ ಖಾನ್ ಆಫೀಸ್ ಗೆ ಭೇಟಿ ಕೊಟ್ಟಿದ್ವಿ. ನಿರ್ಮಾಪಕರ ಜೊತೆಗೆ ಮಾತುಕತೆ ನಡೆಸಿದ ಬಳಿಕ, ಸಾಜಿದ್ ಖಾನ್ ಇದ್ದ ಕೊಠಡಿಗೆ ತೆರಳಿದ್ವಿ. ನಾನು ನನ್ನ ಫೋಟೋಗಳನ್ನು ಅವರಿಗೆ ತೋರಿಸಿದೆ. ಆಗ, ''ನೀವು ಬಟ್ಟೆ ಬಿಚ್ಚಬೇಕು. ನನಗೆ ಇಷ್ಟವಾದರೆ ನಿಮಗೆ ಪಾತ್ರ ಸಿಗುತ್ತದೆ'' ಅಂತ ಸಾಜಿದ್ ಖಾನ್ ಹೇಳಿದರು'' ಅಂತಾರೆ ನಟಿ ಮಂದನಾ.

ಅಧಿಕಾರ ದುರುಪಯೋಗ
''ಸಾಜಿದ್ ಖಾನ್ ಮುಂದೆ ಬಟ್ಟೆ ಕಳಚಲು ನಾನು ರೆಡಿ ಇರಲಿಲ್ಲ. ಆತ ದೊಡ್ಡ ನಿರ್ದೇಶಕ ಅಂತ ನನ್ನ ಮ್ಯಾನೇಜರ್ ಹೇಳಿದರು. ಆದ್ರೆ, ನಿರ್ದೇಶಕನಿಗಿರುವ ಅಧಿಕಾರವನ್ನ ಸಾಜಿದ್ ಖಾನ್ ದುರುಪಯೋಗ ಪಡಿಸಿಕೊಳ್ಳಬಾರದು ಅಲ್ವಾ.?'' ಎಂದು ಪ್ರಶ್ನಿಸುತ್ತಾರೆ ನಟಿ ಮಂದನಾ.

ಕ್ಯಾ ಕೂಲ್ ಹೇ ಹಮ್ ನಿರ್ದೇಶಕನ ವಿರುದ್ಧ ಆರೋಪ
ಸಾಜಿದ್ ಖಾನ್ ವಿರುದ್ಧ ಮಾತ್ರ ಅಲ್ಲ. 'ಕ್ಯಾ ಕೂಲ್ ಹೇ ಹಮ್' ಚಿತ್ರದ ನಿರ್ದೇಶಕ ಉಮೇಶ್ ವಿರುದ್ಧವೂ ಮಂದನಾ ಗುಡುಗಿದ್ದಾರೆ. ನಿರ್ದೇಶಕ ಉಮೇಶ್ ಮಂದನಾ ರನ್ನ ಡೇಟಿಂಗ್ ಗೆ ಕರೆದಿದ್ದರಂತೆ. ಅದನ್ನ ಆಕೆ ನಿರಾಕರಿಸಿದ್ಮೇಲೆ, ಕಿರುಕುಳ ನೀಡಿದರು ಎನ್ನುತ್ತಾರೆ ನಟಿ ಮಂದನಾ.

ಮಾನಸಿಕ ಹಿಂಸೆ ಕೊಡುತ್ತಿದ್ದ ನಿರ್ದೇಶಕ
''ಕಿರುಕುಳ ಅಂದ್ರೆ ನಮ್ಮನ್ನ ಮುಟ್ಟಬೇಕು ಅಂತ ಏನೂ ಇಲ್ಲ. ಶೂಟಿಂಗ್ ಸೆಟ್ ನಲ್ಲಿ ಕಡೆ ಕ್ಷಣದ ಬದಲಾವಣೆ ಮಾಡಿ, ಹಾಡಿನ ಸ್ಟೆಪ್ ಗಳನ್ನು ಬದಲಾಯಿಸಿ, ಅವಶ್ಯಕವಿಲ್ಲದ ಬಟ್ಟೆಗಳನ್ನು ಧರಿಸುವಂತೆ ಸೂಚಿಸಿ, ಬೇಕಾಬಿಟ್ಟಿ ನನ್ನನ್ನ ಕಾಯಿಸಿ ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದರು ನಿರ್ದೇಶಕ ಉಮೇಶ್'' - ನಟಿ ಮಂದನಾ


Click it and Unblock the Notifications











