ಆಡಿಷನ್ ಅಂತ ಮನೆಗೆ ಕರೆದು ನಟಿಗೆ ಬಟ್ಟೆ ಕಳಚಲು ಹೇಳಿದ್ನಂತೆ ಸಾಜಿದ್ ಖಾನ್.!
ಸಾಜಿದ್ ಖಾನ್ ಓರ್ವ ನಿರೂಪಕ, ನಿರ್ದೇಶಕ ಅನ್ನೋದು ಎಲ್ಲರಿಗೂ ಗೊತ್ತಿತ್ತು. ಆದ್ರೆ, ಸಾಜಿದ್ ಖಾನ್ ಓರ್ವ ಕಾಮುಕ, ಹೆಣ್ಣುಬಾಕ ಎಂಬ ಸಂಗತಿ ಜಗಜ್ಜಾಹೀರಾಗಿದ್ದು #ಮೀಟೂ ಅಭಿಯಾನದ ಮೂಲಕ.
ತಮಗೆ ಸಾಜಿದ್ ಖಾನ್ ನೀಡಿದ ಲೈಂಗಿಕ ಹಾಗೂ ಮಾನಸಿಕ ಕಿರುಕುಳದ ಬಗ್ಗೆ ಸಹಾಯಕ ನಿರ್ದೇಶಕಿ ಸಲೋನಿ ಛೋಪ್ರಾ ಪುಟಗಟ್ಟಲೆ ವಿವರಿಸಿದ್ದಾರೆ. ಇನ್ನೂ ಪತ್ರಕರ್ತೆ ಕರಿಷ್ಮಾ ಉಪಾಧ್ಯಾಯ ಕೂಡ ಸಾಜಿದ್ ಖಾನ್ ಕೊಳಕು ಮನಃಸ್ಥಿತಿಯನ್ನ ಬಯಲು ಮಾಡಿದ್ದಾರೆ.
ಇವರಿಬ್ಬರ ಜೊತೆಗೆ ಮಾಡೆಲ್ ಕಮ್ ನಟಿ ರೇಚಲ್ ವೈಟ್ ಕೂಡ ಸಾಜಿದ್ ಖಾನ್ ಮುಖವಾಡವನ್ನ ಕಳಚಿದ್ದಾರೆ. ''ಸಲೋನಿ ಛೋಪ್ರಾ ಆಡಿರುವ ಮಾತುಗಳಲ್ಲಿ ನಂಬಿಕೆ ಇದೆ'' ಎನ್ನುತ್ತಾ 'ಹಮ್ ಶಕಲ್ಸ್' ಚಿತ್ರದ ಆಡಿಷನ್ ಸಂದರ್ಭದಲ್ಲಿ ನಡೆದ ಘಟನೆಯನ್ನ ರೇಚಲ್ ವೈಟ್ ಬಿಚ್ಚಿಟ್ಟಿದ್ದಾರೆ. ಮುಂದೆ ಓದಿರಿ...

ಸಾಜಿದ್ ಖಾನ್ ಮನೆಯಲ್ಲಿ ಆಡಿಷನ್
''ಹಮ್ ಶಕಲ್ಸ್ ಚಿತ್ರದ ಆಡಿಷನ್ ಗಾಗಿ ಸಾಜಿದ್ ಖಾನ್ ರನ್ನ ಭೇಟಿಯಾಗುವಂತೆ ನನ್ನ ಏಜೆನ್ಸಿ ಸೂಚಿಸಿತು. ಸಾಜಿದ್ ಖಾನ್ ಮನೆಯಲ್ಲೇ ಆಡಷನ್ ನಡೆಯಲಿದೆ ಅಂತ ಮೀಟಿಂಗ್ ಮುಗಿದ ತಕ್ಷಣ ಹೇಳಿದರು. ಮನೆಯಲ್ಲಿ ಭೇಟಿ ಆಗುವುದು ನನಗೆ ಸರಿ ಎನಿಸಲಿಲ್ಲ. ಆಗ, ''ಮನೆಯಲ್ಲಿ ನನ್ನ ತಾಯಿ ಕೂಡ ಜೊತೆಯಲ್ಲಿ ಇದ್ದಾರೆ'' ಎಂಬ ಗ್ಯಾರೆಂಟಿಯನ್ನ ಸಾಜಿದ್ ಖಾನ್ ಕೊಟ್ಟ ಮೇಲೆ ನಾನು ಆತನ ಮನೆಗೆ ತೆರಳಿದೆ'' - ರೇಚಲ್ ವೈಟ್, ನಟಿ

ಬೆಡ್ ರೂಮ್ ನಲ್ಲಿ ಆಡಿಷನ್
''ಸಾಜಿದ್ ಖಾನ್ ಮನೆಗೆ ತೆರಳಿದ ಮೇಲೆ ಆತ ನನ್ನನ್ನ ಬರಮಾಡಿಕೊಂಡಿದ್ದು ಬೆಡ್ ರೂಮ್ ಗೆ.! ಬೆಡ್ ರೂಮ್ ಮೂಲೆಯಲ್ಲಿ ನಿಂತಿದ್ದ ನನಗೆ ಎಲ್ಲಿ ಕೂರಬೇಕು ಎಂಬುದು ಗೊತ್ತಾಗಲಿಲ್ಲ. ನನ್ನನ್ನ ಸಾಜಿದ್ ಖಾನ್ ಕಣ್ಣು ಮಿಟ್ಟುಕಿಸದಂತೆ ನೋಡುತ್ತಿದ್ದರು'' - ರೇಚಲ್ ವೈಟ್, ನಟಿ

ಬಟ್ಟೆ ಬಿಚ್ಚು.!
''ಇದ್ದಕ್ಕಿದ್ದಂತೆ ನಾನು ತೊಟ್ಟಿದ್ದ ಬಟ್ಟೆಯನ್ನ ಕಳಚುವಂತೆ ಸೂಚಿಸಿದರು. ಯಾಕಂದ್ರೆ, ಸಿನಿಮಾದಲ್ಲಿ ಬಿಕಿನಿ ಸೀನ್ ಗಳಿವೆ. ನಾನು ಹೇಗೆ ಕಾಣುವೆ ಎಂಬುದನ್ನ ಆತ ನೋಡಬೇಕಿತ್ತು'' - ರೇಚಲ್ ವೈಟ್, ನಟಿ

ರೇಚಲ್ ಕೊಟ್ಟ ಖಡಕ್ ಉತ್ತರ
''ನಾನು ಬಿಕಿನಿ ತೊಟ್ಟಿರುವ ಫೋಟೋಗಳನ್ನು ನಿಮಗೆ ಕಳುಹಿಸಿರುವೆ. ಬೇಕಾದರೆ ಅದನ್ನೇ ನೋಡಿ. ನಿಮ್ಮ ಆಫೀಸ್ ಗೆ ಬೇಕಾದರೆ ಬಿಕಿನಿಯಲ್ಲಿ ಬರುವೆ. ಆದ್ರೆ, ನಿಮ್ಮ ಮನೆಯಲ್ಲಿ ಅದು ಸಾಧ್ಯವಿಲ್ಲ ಎಂದು ನಾನು ಹೇಳಿದೆ'' - ರೇಚಲ್ ವೈಟ್, ನಟಿ

ಐದು ನಿಮಿಷ ಮೋಹಿಸಬೇಕು
''ನಾನು ಆತನನ್ನು ಐದು ನಿಮಿಷಗಳ ಕಾಲ ಮೋಹಿಸಿದರೆ, ಪಾತ್ರ ನನ್ನದು ಎಂದು ಹೇಳಿದರು. ಕೊನೆಗೆ ನಾನು ಯಾವುದನ್ನೂ ಮಾಡದೇ ಇದ್ದಾಗ ಮಾನಸಿಕವಾಗಿ ತಯಾರಾಗಿ ಬಂದಿಲ್ಲ ಎಂಬ ಕಾಮೆಂಟ್ ಮಾಡಿದರು. ನಾನು ಅಲ್ಲಿಂದ ಹೊರಟೆ'' - ರೇಚಲ್ ವೈಟ್, ನಟಿ


Click it and Unblock the Notifications











