ಬಿಡುಗಡೆಗೂ ಮುನ್ನವೇ ಶಾರುಖ್ ಖಾನ್ ನಟನೆಯ 'ಡಂಕಿ' ಎದುರು ಸೋಲು ಒಪ್ಪಿಕೊಂಡಿತಾ 'ಸಲಾರ್'!?

ಈ ವರ್ಷಾಂತ್ಯದಲ್ಲಿ ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿದ್ದು, ಅದರಲ್ಲಿ ಒಂದೇ ಸಮಯದಲ್ಲಿ ಬಿಡುಗಡೆಯಾಗುತ್ತಿರುವ 'ಡಂಕಿ' ಮತ್ತು 'ಸಲಾರ್' ನಡುವೆ ನೆಕ್ ಟು ನೆಕ್ ಫೈಟ್ ಆರಂಭವಾಗಿದೆ. ಎರಡು ಸಿನಿಮಾಗಳ ಟ್ರೈಲರ್, ಹಾಡುಗಳು ಬಿಡುಗಡೆಯಾಗಿದ್ದು ಎಲ್ಲದಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿಯೇ ಎರಡು ಚಿತ್ರಗಳಲ್ಲಿ ಯಾವುದಕ್ಕೆ ಜನ ಮನ್ನಣೆ ನೀಡುತ್ತಾರೆ ಎಂಬ ಬಗ್ಗೆ ಹಲವು ವರದಿಗಳು ಹೊರಬರುತ್ತಿವೆ.

ಡಿಸೆಂಬರ್ 21 ರಂದು ಡಂಕಿ ಬಿಡುಗಡೆಯಾಗುತ್ತಿದೆ. ಡಿಸೆಂಬರ್ 22 ರಂದು ಸಲಾರ್ ಬಿಡುಗಡೆಯಾಗಲಿದ್ದು, ರಿಲೀಸ್ ದಿನಾಂಕ ಹತ್ತಿರ ಬರುತ್ತಿದ್ದಂತೆ ಡಂಕಿ ವರ್ಸಸ್ ಸಲಾರ್ ಬಾಕ್ಸ್ ಆಫೀಸ್ ಘರ್ಷಣೆ ನಿಜವಾಗುತ್ತಿದೆ. ಎರಡು ಚಿತ್ರಗಳಿಗೆ ತೆರೆ ಹಂಚಿಕೆ ವಿಚಾರದಲ್ಲಿ ನೆಕ್ ಟು ನೆಕ್ ಪೈಪೋಟಿ ಉಂಟಾಗಿದೆ. ಇದೇ ಕುರಿತ ಇತ್ತೀಚಿನ ವರದಿ ಇಲ್ಲಿದೆ.

 Salaar Vs Dunki: Shah Rukh Khan Dunki bagged Maximum Screens Over Prabhass Salaar

ಡಂಕಿ ವರ್ಸಸ್ ಸಲಾರ್

ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ ತಂಡ ಸೆಪ್ಟಂಬರ್‌ನಿಂದ ಡಿಸೆಂಬರ್‌ಗೆ ಚಿತ್ರಬಿಡುಗಡೆಯನ್ನು ಮುಂದೂಡಿದ ನಂತರ 'ಡಂಕಿ' ವರ್ಸಸ್ 'ಸಲಾರ್' ಈ ವರ್ಷ ಯಾರೂ ನೋಡದ ಬಾಕ್ಸ್ ಆಫೀಸ್ ಘರ್ಷಣೆಗೆ ಸಾಕ್ಷಿಯಾಗುತ್ತಿದೆ. ಎರಡೂ ಚಿತ್ರಗಳ ಗ್ರ್ಯಾಂಡ್ ರಿಲೀಸ್‌ಗೆ ಮುಂಚೆಯೇ ಹೈಪ್ ಕ್ರಿಯೇಟ್ ಮಾಡುತ್ತಿವೆ. ಅದರಲ್ಲೂ ಉತ್ತರದ ಮಾರುಕಟ್ಟೆಯಲ್ಲಿ ಸ್ಕ್ರೀನ್‌ಗಳನ್ನು ತೆಗೆದುಕೊಳ್ಳುವ ವಿಷಯದಲ್ಲಿ 'ಡಂಕಿ' ಅಬ್ಬರಿಸುತ್ತಿದೆ.

ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಮೇಲೆ ಮೊದಲಿನಿಂದಲು ನಂಬಿಕೆ ಹೆಚ್ಚು, ಅತ್ಯುತ್ತಮ ಸಿನಿಮಾಗಳನ್ನು ನೀಡಿರುವ ಅವರು ಮೊದಲ ಬಾರಿಗೆ ಶಾರುಖ್ ಖಾನ್ ಜೊತೆಗೆ ಕೈ ಜೋಡಿಸುತ್ತಿದ್ದಾರೆ. ಹೀಗಾಗಿ ಅವರ ಡಂಕಿ ಮೇಲೆತೂ ನಿರೀಕ್ಷಿ ಹೆಚ್ಚಿದ್ದು, ಹಿಂದಿ ಮಾತನಾಡುವ ಭಾಗಗಳಲ್ಲಿ ಹೆಚ್ಚು ಪರದೆಗಳನ್ನು ಆಕ್ರಮಿಸಿಕೊಳ್ಳುತ್ತಿದೆ.

ಡಂಕಿ ಮುಂದೆ ಸೋತ ಸಲಾರ್!?

ಪಿಂಕ್ವಿಲ್ಲಾ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಉತ್ತರ ಭಾರತದ ಮಲ್ಟಿಪ್ಲೆಕ್ಸ್‌ಗಳಲ್ಲಿ ಹೆಚ್ಚು ಸ್ಕ್ರೀನ್ ಕೌಂಟ್ ತೆಗೆದುಕೊಂಡಿರುವುದು ಶಾರುಖ್ ಖಾನ್ ನಟನೆಯ ಡಂಕಿ. ಇದು ಶೇಕಡಾ 46 ರಷ್ಟುಯ ಪರದೆಗಳನ್ನು ಆಕ್ರಮಿಸಿಕೊಂಡಿದೆ. ಇನ್ನು ಪ್ರಭಾಸ್ ನಟನೆಯ ಸಲಾರ್ 20 ಶೇಕಡಾ ಸ್ಕ್ರೀನ್ ಕೌಂಟ್ ತೆಗೆದುಕೊಂಡಿದ.

 Salaar Vs Dunki: Shah Rukh Khan Dunki bagged Maximum Screens Over Prabhass Salaar

ಇನ್ನು, ಹಾಲಿವುಡ್ ಸೂಪರ್‌ಹೀರೋ ಚಿತ್ರ ಅಕ್ವಾಮನ್ 2 ಶೇಕಡಾ 14 ಸ್ಕ್ರೀನ್ ಕೌಂಟ್ ಪಡೆದಿದೆ. ಇತ್ತೀಚೆಗೆ ಬಿಡುಗಡೆಯಾಗಿ ಟೀಕೆಗಳ ನಡುವೆ ಉತ್ತಮ ಪ್ರದರ್ಶನ ನೀಡುತ್ತಿರುವ 'ಅನಿಮಲ್' ಇನ್ನು, ಶೇಕಡಾ 10 ರಷ್ಟು ಸ್ಕ್ರೀನ್ ಕೌಂಟ್ ಪಡೆದಿದ್ದು, ಗಲ್ಲಾ ಪೆಟ್ಟಿಗೆಯಲ್ಲಿ ಡಂಕಿ ಮತ್ತು ಸಲಾರ್‌ಗೆ ಪೈಪೋಟಿ ಕೊಡುವಂತೆ ಕಾಣುತ್ತಿದೆ.

ಸಲಾರ್‌ಗೆ ಹಿನ್ನಡೆ ತಂದಿದೆಯೇ 'ಎ' ಪ್ರಮಾಣಪತ್ರ..?

ಇದು ಇನ್ನೂ ಮಾರುಕಟ್ಟೆಯಲ್ಲಿ ಸಲಾರ್ ಕಡಿಮೆ ಸ್ಕ್ರೀನ್ ಕೌಂಟ್ ಪಡೆಯಲು ಸೆನ್ಸಾರ್ ಬೋರ್ಡ್ ನೀಡಿರುವ ಎ ಪ್ರಮಾಣ ಪತ್ರ ಕೂಡ ಕಾರಣ ಎಂದು ಹೇಳಲಾಗುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್‌ ಟ್ರೈಲರ್‌ನಲ್ಲಿ ತೋರಿಸಿದಂತೆ ಹಿಂಸೆ ಸಿನಿಮಾದ ಅವಿಭಾಜ್ಯ ಅಂಗವಾಗಿದೆ. ಅದಕ್ಕಾಗಿ ಎ ಪ್ರಮಾಣಪತ್ರ ನೀಡಲಾಗಿದೆ. ಹೀಗಾಗಿ ಕುಟುಂಬಗಳು ಸಿನಿಮಾ ಕಡೆ ಬರುವುದು ಅನುಮಾನ ಎಂದು ಪ್ರದರ್ಶನಕರು 'ಡಂಕಿ'ಗೆ ಮೊರೆ ಹೋಗಿದ್ದಾರೆ.

ಆದರೆ, ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಮತ್ತು ಶ್ರುತಿ ಹಾಸನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ಸಲಾರ್, ಮುಂಗಡ ಬುಕ್ಕಿಂಗ್‌ನಲ್ಲಿ ಸಾಗರೋತ್ತರ ಬಾಕ್ಸ್ ಆಫೀಸ್‌ನಲ್ಲಿ 1 ಮಿಲಿಯನ್ ಡಾಲರ್ ಗಡಿ ದಾಟಿದೆ. ಒಟ್ಟಾರೆ, ಎರಡೂ ಚಿತ್ರಗಳು ಪ್ರೇಕ್ಷಕರನ್ನು ಯಶಸ್ವಿಯಾಗಿ ಥಿಯೇಟರ್‌ಗೆ ಸೆಳೆಯುತ್ತಿವೆ. ಈ ಬಾಕ್ಸ್ ಆಫೀಸ್ ಯುದ್ಧದಲ್ಲಿ ಕೊನೆಗೆ ಯಾರು ಗೆಲ್ಲುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.

More from Filmibeat

English summary
Prabhas's Salaar Vs Shah Rukh Khan's Dunki neck-to-neck competition.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X