For Quick Alerts
  ALLOW NOTIFICATIONS  
  For Daily Alerts

  ನಟ ಸಲ್ಮಾನ್ ಖಾನ್ ಬಾಲ್ಯದ ದೊಡ್ಡ ಗುಟ್ಟು ಬಿಚ್ಚಿಟ್ಟ ತಂದೆ ಸಲೀಂ ಖಾನ್

  |

  ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ತಂದೆ ಮಗನ ಬಾಲ್ಯದ ಒಂದಿಷ್ಟು ಸೀಕ್ರೆಟ್ ಬಹಿರಂಗ ಪಡಿಸಿದ್ದಾರೆ. ಸಲ್ಮಾನ್ ಖಾನ್ ಬಾಲ್ಯದ ಬಗ್ಗೆ ಮಾತನಾಡಿರುವ ಸಲೀಂ ಖಾನ್, ಪ್ರಶ್ನೆ ಪತ್ರಿಕೆ ಲೀಕ್ ಆಗುತ್ತಿದ್ದ ವಿಚಾರವನ್ನು ರಿವೀಲ್ ಮಾಡಿದ್ದಾರೆ.

  ಹೌದು, ಸಲ್ಮಾನ್ ಖಾನ್ ತಂದೆ ಕಳೆದ ವರ್ಷ ಕಪಿಲ್ ಶರ್ಮಾ ಶೋನಲ್ಲಿ ಕಾಣಿಸಿಕೊಂಡಿದ್ದರು. ಈ ಸಮಯದಲ್ಲಿ ಮೂವರು ಮಕ್ಕಳಾದ ಸಲ್ಮಾನ್ ಖಾನ್, ಅರ್ಬಾಜ್ ಖಾನ್ ಮತ್ತು ಸೊಹೈಲ್ ಖಾನ್ ಸಹ ಭಾಗಿಯಾಗಿದ್ದರು. ಈ ವೇಳೆ ಸಲೀಂ ಖಾನ್ ಪುತ್ರ ಸಲ್ಮಾನ್ ಖಾನ್ ಬಾಲ್ಯವನ್ನು ಸ್ಮರಿಸಿದ್ದಾರೆ.

  ಸಲ್ಮಾನ್ ಖಾನ್ ಮನೆಗೆ ಗಣೇಶ್ ಎನ್ನುವ ವ್ಯಕ್ತಿ ಬರುತ್ತಿದ್ದು, ಆ ವ್ಯಕ್ತಿಗೆ ಮನೆಯಲ್ಲಿ ವಿಶೇಷವಾದ ಆತಿಥ್ಯ ನೀಡುತ್ತಿದ್ದ ಬಗ್ಗೆ ಹೇಳಿಕೊಂಡಿದ್ದಾರೆ. ಗಣೇಶ್ ಮನೆಗೆ ಬರುತ್ತಲೇ ಅವರಿಗಾಗಿ ವಿಶೇಷವಾದ ಆಸನ, ವಿಶೇಷ ಚಹಾ ಸೇರಿದಂತೆ ಸತ್ಕಾರಗಳನ್ನು ಸಲ್ಮಾನ್ ಮಾಡುತ್ತಿದ್ದಾರಂತೆ.

  ಸಲ್ಮಾನ್ ಖಾನ್ 'ರಾಧೇ' ಚಿತ್ರದ ಬಗ್ಗೆ ಹೀಗೊಂದು ಸುದ್ದಿ: ಸುಳ್ಳು ಎಂದ ನಿರ್ಮಾಪಕ

  ಸಲ್ಮಾನ್ ಖಾನ್ ತಂದೆಗೆ, ಇದು ತುಂಬಾ ವಿಚಿತ್ರವಾಗಿದೆಯಲ್ಲ, ಖುದ್ದು ನನಗೆ ಇಲ್ಲದ ಈ ರಾಜ ಮರ್ಯಾದೆ ಆತನಿಗೇಕೆ ಎಂದು ತಲೆಕೆಡಿಸಿಕೊಂಡಿದ್ದರಂತೆ. ಬಳಿಕ ಸಲೀಂ ಅವರಿಗೆ ಈ ವಿಚಾರ ತಿಳಿಯಿತಂತೆ. ತಮ್ಮ ಮಕ್ಕಳಿಗೆ ಪ್ರಶ್ನೆ ಪತ್ರಿಕೆಗಳು ಲೀಕ್ ಆದಾಗ ಅವುಗಳನ್ನು ತಂದು ಕೊಡುತ್ತಿದ್ದ ವ್ಯಕ್ತಿ ಎಂದು.

  ಈ ವಿಚಾರ ಹೇಳುತ್ತಿದ್ದಂತೆ ವೇದಿಕೆಯಲ್ಲಿದ್ದರು ಮತ್ತು ಪ್ರೇಕ್ಷಕರು ಜೋರಾಗಿ ನಕ್ಕಿದ್ದಾರೆ. ಕೊನೆಗೆ ಸಲ್ಮಾನ್ ಖಾನ್ ಈ ಕಥೆ ನಂದೇ ಎಂದು ಹೇಳಿದ್ದಾರೆ. ಅಂದಹಾಗೆ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಕಥೆ, ಗೀತರಚನೆಕಾರರಾಗಿ ಸಾಕಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.

  ನಿನ್ನಂತ ಅಪ್ಪ ಸಿಕ್ಕಿದ್ದು ಏಳೇಳು ಜನುಮದ ಪುಣ್ಯ ಅಂದ ನನ್ ಮಗ | Jaggesh about his Son | Filmibeat Kannada

  ಜಾವೇದ್ ಅಕ್ತರ್ ಮತ್ತು ಸಲೀಂ ಖಾನ್ ಇಬ್ಬರು ಜೋಡಿ ಬಾಲಿವುಡ್ ನ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದೆ. ದಿವಾರ್, ಶೋಲೆ, ಡಾನ್, ಮಿಸ್ಟರ್ ಇಂಡಿಯಾ ಸೇರಿದಂತೆ ಅನೇಕ ಯಶಸ್ವಿ ಸಿನಿಮಾ ಗಳಲ್ಲಿ ಕೆಲಸ ಮಾಡಿದ್ದಾರೆ.

  English summary
  Salman Khan Father Salim Khan revealed his son Salman Khan's big secret.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X