»   » ಮಾಧುರಿ ದೀಕ್ಷಿತ್ ನಿತಂಬಕ್ಕೆ ಸಲ್ಲು ಮತ್ತೆ ಕವಣೆ ಕಲ್ಲು

ಮಾಧುರಿ ದೀಕ್ಷಿತ್ ನಿತಂಬಕ್ಕೆ ಸಲ್ಲು ಮತ್ತೆ ಕವಣೆ ಕಲ್ಲು

By: ಉದಯರವಿ
Subscribe to Filmibeat Kannada

'ಹಮ್ ಆಪ್ ಕೆ ಹೈ ಕೌನ್' (1994) ಚಿತ್ರದಲ್ಲಿ ಸಲ್ಮಾನ್ ಖಾನ್ ಹಾಗೂ ಮಾಧುರಿ ದೀಕ್ಷಿತ್ ಅಮೋಘ ಅಭಿನಯ ನೀಡಿದ್ದರು. ಈ ಚಿತ್ರದ ರೊಮ್ಯಾಂಟಿಕ್ ದೃಶ್ಯಗಳನ್ನು ನೆನೆದರೆ ಪ್ರೇಕ್ಷಕರು ಮತ್ತೆ ಒದ್ದೆಮುದ್ದೆಯಾಗುತ್ತಾರೆ. ಇಬ್ಬರೂ ಅಷ್ಟೊಂದು ಪರಿಣಾಮಕಾರಿಯಾಗಿ, ಲವ್ಲಿಯಾಗಿ ತಮ್ಮ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿದ್ದರು.

ಹಮ್ ಆಪ್ ಕೆ ಹೈ ಕೌನ್ ಚಿತ್ರದ ಹಾಡೊಂದರಲ್ಲಿ ಸಲ್ಲು ಕವಣೆಯಲ್ಲಿ ಮಾಧುರಿ ದೀಕ್ಷಿತ್ ನಿತಂಬಕ್ಕೆ ಕಲ್ಲಿನಲ್ಲಿ ಹೊಡೆಯುವ ದೃಶ್ಯವನ್ನು ಬಹುಶಃ ಕಲಾರಸಿಕರು ಮರೆತಿರಲಿಕ್ಕಿಲ್ಲ. ಈಗ ಸಲ್ಲು ಭಾಯ್ ಮತ್ತೆ ಕವಣೆ ಕೈಗೆತ್ತಿಕೊಂಡಿದ್ದಾರೆ. ಈ ಬಾರಿಯೂ ಅವರ ಗುರಿ ಮಾಧುರಿ ದೀಕ್ಷಿತ್. ಗುರಿ ಖಂಡಿತ ಮಿಸ್ ಆಗಲ್ಲ ಬಿಡಿ.


ಮಾಧುರಿ ದೀಕ್ಷಿತ್ ಸದ್ಯಕ್ಕೆ "ಝಲಕ್ ದಿಖಲಾ ಜಾ" ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ತೀರ್ಪುಗಾರ್ತಿ. ಇನ್ನೊಂದು ಕಡೆ ಸಲ್ಮಾನ್ ಖಾನ್ ಬಿಗ್ ಬಾಸ್ ಸೀಸನ್ 7ಕ್ಕೆ ರೆಡಿಯಾಗಿದ್ದಾರೆ. ಈ ಎರಡೂ ಕಾರ್ಯಕ್ರಮಗಳು ಕಲರ್ಸ್ ವಾಹಿನಿಯ ಮೂಡಿಬರುತ್ತಿವೆ.

ಈಗ ಸಲ್ಲು ತಮ್ಮ ಬಿಗ್ ಬಾಸ್ ಕಾರ್ಯಕ್ರಮದ ಪ್ರಚಾರಕ್ಕಾಗಿ ಮಾಧುರಿ ಅವರ ಝಲಕ್ ದಿಖಲಾ ಜಾ ಶೋನಲ್ಲಿ ಪಾಲ್ಗೊಳ್ಳುತ್ತ್ತಿದ್ದಾರೆ ಎನ್ನಲಾಗಿದೆ. ಇಲ್ಲೂ ಇಬ್ಬರೂ ತಮ್ಮ ಹಿಟ್ ಚಿತ್ರಗಳಿಗೆ ಹೆಜ್ಜೆ ಹಾಕಲಿದ್ದಾರೆ. ಕವಣೆಯಲ್ಲಿ ಮಾಧುರಿ ನಿತಂಬಕ್ಕೆ ಕಲ್ಲು ಹೊಡೆಯಲಿದ್ದಾರೆ. ಪ್ರೇಕ್ಷಕರ ಮನಸ್ಸಿಗೆ ಉಲ್ಲಾಸದ ತಣ್ಣೀರನ್ನು ಎರಚಲಿದ್ದಾರೆ.

English summary
Latest news making rounds is that Salman Khan will be starting his show's promotions on the spectacular dance reality show Jhalak Dikhla Jaa. Salman To Appear On Madhuri's JDJ 6! The actors Salman Khan and Madhuri Dixit are said to perform on their hit classic songs on this episode, but this was already done in the previous season too.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada