For Quick Alerts
  ALLOW NOTIFICATIONS  
  For Daily Alerts

  ನಟಿಯ ಪುತ್ರಿಗೆ ಅತ್ಯಾಚಾರ ಬೆದರಿಕೆ: ಯುವತಿಯ ಬಂಧನ

  |

  ಭಾರತ ಹಾಗೂ ಪಾಕಿಸ್ತಾನ ಎರಡೂ ಸಿನಿಮಾ ಉದ್ಯಮಗಳಲ್ಲಿ ನಟಿಯಾಗಿ ಗುರುತಿಸಿಕೊಂಡಿರುವ ಸಲ್ಮಾ ಅಘಾ ಮಗಳಿಗೆ ಅತ್ಯಾಚಾರ ಬೆದರಿಕೆಗಳು ಬಂದಿವೆ.

  ಬ್ರಿಟಿಷ್-ಭಾರತೀಯ ಆಗಿರುವ ಸಲ್ಮಾ ಅಘಾ ಪ್ರಸ್ತುತ ಮುಂಬೈನಲ್ಲಿ ನೆಲೆಸಿದ್ದು. ಸಲ್ಮಾ ರ ಪುತ್ರಿ ಜಾರಾ ಖಾನ್‌ಗೆ ಸಾಮಾಜಿಕ ಜಾಲತಾಣದಲ್ಲಿ ಅತ್ಯಾಚಾರ ಬೆದರಿಕೆ ಸಂದೇಶಗಳು ಬಂದಿವೆ. ಜಾರಾ ಖಾನ್ ಕುಟುಂಬಸ್ತರು ಮುಂಬೈನ ಒಶಿವಾರಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

  ತನಿಖೆ ನಡೆಸಿದ ಪೊಲೀಸರು, ಅತ್ಯಾಚಾರ ಬೆದರಿಕೆ ಸಂದೇಶಗಳು ಯುವತಿಯೊಬ್ಬರಿಂದ ಬಂದಿದೆ ಎಂದು ತಿಳಿಸಿದ್ದು, ಯುವತಿಯನ್ನು ಬಂಧಿಸಲಾಗಿದೆ.

  ಜಾರಾ ಖಾನ್ ಳ ಹಳೆಯ ತರಗತಿ ಸಹಪಾಠಿಯೇ ಜಾರಾ ಗೆ ಇನ್‌ಸ್ಟಾಗ್ರಾಂ ನಲ್ಲಿ ಅತ್ಯಾಚಾರ ಬೆದರಿಕೆ ಸಂದೇಶಗಳನ್ನು ಕಳಿಸಿದ್ದಾರೆ. ಆ ಯುವತಿ ಹೀಗೆ ಮಾಡಿದ್ದು ಏಕೆ ಎಂಬುದು ಇನ್ನೂ ತಿಳಿದು ಬಂದಿಲ್ಲ.

  'ಒಂದು ಇನ್‌ಸ್ಟಾಗ್ರಾಂ ಖಾತೆಯಿಂದ ಕೀಳು ಮಟ್ಟದ ಸಂದೇಶಗಳು, ಕೊಲೆ, ಅತ್ಯಾಚಾರ ಬೆದರಿಕೆಗಳು ಜಾರಾ ಖಾನ್‌ ಇನ್‌ಸ್ಟಾಗ್ರಾಂ ಗೆ ಬರುತ್ತಿತ್ತು. ನಾವು ಇನ್‌ಸ್ಟಾಗ್ರಾಂ ಗೆ ಪತ್ರ ಬರೆದು ಸಹಾಯ ಕೋರಿದೆವು, ಅಂತೆಯೇ ಅವರು ಸಹಾಯ ಮಾಡಿದರು, ಹಾಗಾಗಿ ಕೃತ್ಯ ಎಸಗಿದವರನ್ನು ಹಿಡಿಯುವುದು ಸುಲಭವಾಯಿತು' ಎಂದಿದ್ದಾರೆ ಪೊಲೀಸ್ ಅಧಿಕಾರಿ.

  ನಿಮ್ಮ ಸಪೋರ್ಟ್ ಇದ್ರೇನೆ ನಮಗೆ ಒಂದು ಧೈರ್ಯ | Manasa | Pursothrama |Filmibeat Kannada

  ಬಂಧಿಸಲಾಗಿರುವ ಯುವತಿ ಎಂಬಿಎ ವಿದ್ಯಾರ್ಥಿಯಾಗಿದ್ದು, ಈ ಹಿಂದೆ ಜಾರಾ ಖಾನ್‌ ರ ಸಹಪಾಠಿಯೇ ಆಗಿದ್ದರು. ಯುವತಿಯ ಮಾನಸಿಕ ಸಂತುಲನ ಸರಿಯಿಲ್ಲ ಎನಿಸುತ್ತಿದೆ. ಬಂಧಿಸಲು ಹೋದಾಗ ಆಕೆ ಸಾಮಾನ್ಯರಂತೆ ನಡೆದುಕೊಳ್ಳಲಿಲ್ಲ. ಆಕೆಯ ಆರೋಗ್ಯ ತಪಾಸಣೆ ಮಾಡಬೇಕಿದೆ ಎಂದಿದ್ದಾರೆ ಪೊಲೀಸರು.

  English summary
  Actress, Singer Salma Agha's daughter Zara Khan gets rape threat on social media. Police arrest a young woman in Hyderabad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X