ಕೃಷ್ಣಮೃಗ ಭೇಟೆ ಪ್ರಕರಣ: ಕೊರೊನಾ ಕಾರಣ ಹೇಳಿ ನ್ಯಾಯಾಲಯಕ್ಕೆ ಸಲ್ಮಾನ್ ಗೈರು

ಕೃಷ್ಣ ಮೃಗ ಭೇಟೆ ಪ್ರಕರಣದಲ್ಲಿ ಜೋಧಪುರ ನ್ಯಾಯಾಲಯಕ್ಕೆ ಹಾಜರಾಗಬೇಕಿದ್ದ ಸಲ್ಮಾನ್ ಖಾನ್, ಗೈರಾಗಿದ್ದಾರೆ. ಸಲ್ಮಾನ್ ತಾವು ಗೈರಾಗಿದ್ದಕ್ಕೆ ಕೊರೊನಾ ವೈರಸ್‌ ಕಾರಣ ನೀಡಿದ್ದಾರೆ.

1998 ರ ಕೃಷ್ಣಮೃಗ ಭೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್‌ಗೆ ನೀಡಲಾಗಿರುವ ಶಿಕ್ಷೆಯ ವಿರುದ್ಧ ಮೇಲ್ಮನವಿಯನ್ನು ಸಲ್ಮಾನ್ ಸಲ್ಲಿಸಿದ್ದು, ಈ ಪ್ರಕರಣದ ವಿಚಾರಣೆಗೆ ಸಲ್ಮಾನ್ ಖಾನ್ ಜೋಧಪುರ ನ್ಯಾಯಾಲಯಕ್ಕೆ ಬರಬೇಕಿತ್ತು.

ಆದರೆ ಎಲ್ಲೆಡೆ ಕೊರೊನಾ ಇರುವ ಕಾರಣ ಹಾಗೂ ನ್ಯಾಯಾಲಯಕ್ಕೆ ಕೊರೊನಾ ಭೀತಿ ಇರುವ ಕಾರಣ, ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯಿತಿ ನೀಡಬೇಕೆಂದು ಸಲ್ಮಾನ್ ಮನವಿ ಸಲ್ಲಿಸಿದ್ದರು. ಅಂತೆಯೇ ನ್ಯಾಯಾಲಯವು ಸಲ್ಮಾನ್ ಮನವಿಯನ್ನು ಪುರಸ್ಕರಿಸಿದ್ದು, ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯಿತಿ ನೀಡಿದೆ.

Salman Khan Absent To Court Giving Corona Risk As Reason

'ಮುಂಬೈ ಹಾಗೂ ಜೋಧಪುರದಲ್ಲಿ ದಿನೇ-ದಿನೇ ಕೊರೊನಾ ಪ್ರಕರಣ ಹೆಚ್ಚಾಗುತ್ತಿದ್ದು, ಈ ಸಮಯದಲ್ಲಿ ಮುಂಬೈನಿಂದ ಜೋಧಪುರಕ್ಕೆ ಬರುವುದು ಅಪಾಯಕಾರಿ ಆಗಿರಲಿದೆ ಎಂದು ಸಲ್ಮಾನ್ ತಮ್ಮ ಮನವಿ ಪತ್ರದಲ್ಲಿ ಹೇಳಿದ್ದು, ಜೋಧಪುರ ನ್ಯಾಯಾಲಯದ ಸೆಷನ್ಸ್‌ ನ್ಯಾಯಾಧೀಶ ಬ್ರಿಜೆಶ್ ಪನ್ವಾರ್ ಇದನ್ನು ಅನುಮೋದಿಸಿದ್ದಾರೆ ಮತ್ತು ಪ್ರಕರಣದ ಮುಂದಿನ ವಿಚಾರಣೆಯು ಜನವರಿ 16, 2021 ಕ್ಕೆ ಮುಂದೂಡಿದ್ದಾರೆ.

ಕೃಷ್ಣಮೃಗ ಭೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ 2018 ರಲ್ಲಿ ಜೋಧಪುರದ ಟ್ರೈಯಲ್ ನ್ಯಾಯಾಲಯವು, ಸಲ್ಮಾನ್ ಖಾನ್ ಅಪರಾಧಿ ಎಂದು ತೀರ್ಪು ನೀಡಿತ್ತು. 10000 ದಂಡ ಮತ್ತು ಐದು ವರ್ಷಗಳ ಜೈಲು ಶಿಕ್ಷೆಯನ್ನು ಸಲ್ಮಾನ್ ಖಾನ್‌ಗೆ ವಿಧಿಸಲಾಗಿತ್ತು. ಆ ಶಿಕ್ಷೆಯ ಬಗ್ಗೆ ಸಲ್ಮಾನ್ ಮೇಲ್ಮನವಿ ಸಲ್ಲಿಸಿದ್ದಾರೆ.

1998 ರಲ್ಲಿ 'ಹಮ್‌ ಸಾಥ್ ಸಾಥ್ ಹೈ' ಸಿನಿಮಾದ ಚಿತ್ರೀಕರಣದ ವೇಳೆ ಸಲ್ಮಾನ್ ಖಾನ್ ಎರಡು ಕೃಷ್ಣಮೃಗಗಳನ್ನು ಭೇಟೆಯಾಡಿದ್ದರು. ಆ ಆರೋಪ ಸೈಫ್ ಅಲಿ ಖಾನ್, ಟಬು, ಸೋನಾಲಿ ಬೇಂದ್ರೆ ವಿರುದ್ಧವೂ ಇತ್ತು. ಆದರೆ ಈ ಮೂವರನ್ನೂ ಆರೋಪದಿಂದ ಮುಕ್ತ ಮಾಡಿ ನ್ಯಾಯಾಲಯ ಆದೇಶ ಹೊರಡಿಸಿತು.

More from Filmibeat

English summary
Salman Khan absent to court in Blackbuck case. He requested the court that COVID 19 risk is high so can not attend the court.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X