ತೆಲುಗು ಸಿನಿಮಾ ಬಿಡುಗಡೆಗೆ ಮುನ್ನವೇ ರೀಮೇಕ್ ಹಕ್ಕು ಖರೀದಿಸಿದ ಸಲ್ಮಾನ್

ಸಲ್ಮಾನ್ ಖಾನ್‌ ಬಾಲಿವುಡ್‌ನ ಅತಿ ದೊಡ್ಡ ಸ್ಟಾರ್. ಅವರ ಸಿನಿಮಾಗಳು ನೂರಾರು ಕೋಟಿ ಗಳಿಸುತ್ತವೆ. ಆದರೆ ಸಿನಿಮಾದ ಕತೆ ವಿಷಯಕ್ಕೆ ಬಂದರೆ ಬಹಳ ಪೇಲವ.

ಸಲ್ಮಾನ್ ಖಾನ್ ಸಿನಿಮಾಗಳು ಬಹಳ ಪೇಲವ ಅಥವಾ ಕೇವಲ 'ಹೀರೋಗಿರಿ'ಗೆ ಒತ್ತುಕೊಟ್ಟ ಸಿನಿಮಾಗಳಲ್ಲಿ ಮಾತ್ರವೇ ನಟಿಸುತ್ತಾರೆ. ಸಲ್ಲು ಅಭಿಮಾನಿಗಳಿಗೆ ಇದೇ ಇಷ್ಟ. ಆದರೆ ಬಾಲಿವುಡ್‌ನಲ್ಲಿ ಈ ಮಾದರಿಯ ಪಕ್ಕಾ ಮಸಾಲೆ ಸಿನಿಮಾ ನಿರ್ದೇಶಿಸುವವರ ಸಂಖ್ಯೆ ಬಹಳ ಕಡಿಮೆ. ಹಾಗಾಗಿಯೇ ಸಲ್ಮಾನ್ ಸದಾ ರೀಮೇಕ್‌ ಸಿನಿಮಾಗಳ ಮೊರೆ ಹೋಗುತ್ತಾರೆ.

ಸಲ್ಮಾನ್ ತಮ್ಮ ವೃತ್ತಿ ಜೀವನದಲ್ಲಿ ಹಲವಾರು ರೀಮೇಕ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಅತಿ ಹೆಚ್ಚು ಸಿನಿಮಾಗಳನ್ನು ಹೆಕ್ಕಿಕೊಂಡಿರುವುದು ತೆಲುಗು ಸಿನಿಮಾ ರಂಗದಿಂದ. ಹೀಗೆ ತೆಲುಗಿನಲ್ಲಿ ಎತ್ತಿಕೊಂಡ ಬಹುತೇಕ ಸಿನಿಮಾಗಳು ಹಿಟ್ ಆಗಿವೆ. ಹಾಗಾಗಿ ಈಗಲೂ ತೆಲುಗು ಸಿನಿಮಾ ಒಂದರ ರೀಮೇಕ್ ಹಕ್ಕನ್ನು ಅದು ಬಿಡುಗಡೆ ಆಗುವ ಮುನ್ನವೇ ಖರೀದಿಸಿದ್ದಾರೆ ಸಲ್ಮಾನ್ ಖಾನ್.

'ಖಿಲಾಡಿ' ಸಿನಿಮಾದ ರೀಮೇಕ್ ಹಕ್ಕು ಖರೀದಿ

'ಖಿಲಾಡಿ' ಸಿನಿಮಾದ ರೀಮೇಕ್ ಹಕ್ಕು ಖರೀದಿ

ಎಸ್‌ಎಫ್‌ಕೆ (ಸಲ್ಮಾನ್ ಖಾನ್ ಫಿಲಮ್ಸ್) ಹೆಸರಿನ ಸಿನಿಮಾ ನಿರ್ಮಾಣ ಸಂಸ್ಥೆ ಹೊಂದಿರುವ ಸಲ್ಲು ಭಾಯ್, ತೆಲುಗಿನಲ್ಲಿ ರವಿತೇಜ ನಟಿಸಿ ಇನ್ನೂ ಬಿಡುಗಡೆ ಆಗದಿರುವ 'ಖಿಲಾಡಿ' ಸಿನಿಮಾದ ರೀಮೇಕ್ ಹಕ್ಕನ್ನು ಖರೀದಿಸಿದ್ದಾರೆ ಸಲ್ಮಾನ್ ಖಾನ್. 'ಖಿಲಾಡಿ' ತೆಲುಗು ಸಿನಿಮಾ ಲಾಕ್‌ಡೌನ್ ಕಾರಣಕ್ಕೆ ತಡವಾಗಿ ಬಿಡುಗಡೆ ಆಗುತ್ತಿದೆ.

ರವಿತೇಜ ನಟನೆಯ 'ಕಿಕ್' ಸಿನಿಮಾ ರೀಮೇಕ್ ಮಾಡಿದ್ದಾರೆ ಸಲ್ಲು

ರವಿತೇಜ ನಟನೆಯ 'ಕಿಕ್' ಸಿನಿಮಾ ರೀಮೇಕ್ ಮಾಡಿದ್ದಾರೆ ಸಲ್ಲು

ರವಿತೇಜ ನಟನೆಯ 'ಕಿಕ್' ಸಿನಿಮಾವನ್ನು ಈಗಾಗಲೇ ಹಿಂದಿಯಲ್ಲಿ ರೀಮೇಕ್ ಮಾಡಿರುವ ಸಲ್ಮಾನ್ ಖಾನ್ ಈಗ 'ಖಿಲಾಡಿ' ಮೇಲೆ ಕಣ್ಣು ಹಾಕಿದ್ದಾರೆ. ಖಿಲಾಡಿ ಸಿನಿಮಾದಲ್ಲಿ ರವಿತೇಜ ನಟನೆಯ ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಅಲ್ಲು ಅರ್ಜುನ್, ಉನ್ನಿ ಮುಕುಂದನ್ ಸಹ ಇದ್ದಾರೆ. ಈ ಸಿನಿಮಾದಲ್ಲಿ ರವಿತೇಜರದ್ದು ದ್ವಿಪಾತ್ರ ಎನ್ನಲಾಗಿದೆ. 'ಖಿಲಾಡಿ' ಸಿನಿಮಾಕ್ಕೆ ಮೀನಾಕ್ಷಿ ಚೌಧರಿ ಹಾಗೂ ಡಿಂಪಲ್ ಹಯ್ಯಾತಿ ನಾಯಕಿಯರು.

ಹಲವು ತೆಲುಗು ಸಿನಿಮಾ ರೀಮೇಕ್ ಮಾಡಿದ್ದಾರೆ ಸಲ್ಲು

ಹಲವು ತೆಲುಗು ಸಿನಿಮಾ ರೀಮೇಕ್ ಮಾಡಿದ್ದಾರೆ ಸಲ್ಲು

ಸಲ್ಮಾನ್ ಖಾನ್‌ಗೆ ರೀಮೇಕ್‌ ಸಿನಿಮಾಗಳು ತೀರಾ ಸಾಮಾನ್ಯ. ತೆಲುಗಿನ ಪೋಕಿರಿ, ಕಿಕ್, ರೆಡಿ, ಸ್ಟ್ಯಾಲಿನ್, ಹಲೊ ಬ್ರದರ್ ಇನ್ನೂ ಹಲವು ಸಿನಿಮಾಗಳ ರೀಮೇಕ್‌ನಲ್ಲಿ ಸಲ್ಮಾನ್ ನಟಿಸಿದ್ದಾರೆ. ಅದನ್ನು ಹೊರತುಪಡಿಸಿ, ತಮಿಳಿನ 'ಸೇತು', ಮಲಯಾಳಂ ಸಿನಿಮಾವನ್ನು ಬಾಡಿಗಾರ್ಡ್ ಹೆಸರಲ್ಲಿ ರೀಮೇಕ್ ಮಾಡಿದ್ದಾರೆ ಸಲ್ಮಾನ್ ಖಾನ್.

Recommended Video

Darshan ಕೊಟ್ಟ ಒಂದೇ ಕರೆಗೆ ಮೃಗಾಲಯಕ್ಕೆ ಹರಿದುಬಂತು ನೆರವು | Filmibeat Kannada
ತಮಿಳಿನ 'ಮಾಸ್ಟರ್' ರೀಮೇಕ್ ಹಕ್ಕು ಖರೀದಿ

ತಮಿಳಿನ 'ಮಾಸ್ಟರ್' ರೀಮೇಕ್ ಹಕ್ಕು ಖರೀದಿ

ಸಲ್ಮಾನ್ ಖಾನ್ ತೆಲುಗಿನ 'ಖಿಲಾಡಿ' ಸಿನಿಮಾದ ಜೊತೆಗೆ ತಮಿಳಿನ ಸೂಪರ್ ಹಿಟ್ ಸಿನಿಮಾ 'ಮಾಸ್ಟರ್'ನ ರೀಮೇಕ್‌ ಹಕ್ಕುಗಳನ್ನು ಸಹ ಖರೀದಿಸಿದ್ದಾರೆ. ವಿಜಯ್ ಹಾಗೂ ವಿಜಯ್ ಸೇತುಪತಿ ನಟಿಸಿದ್ದ 'ಮಾಸ್ಟರ್' ಸಿನಿಮಾ ಸೂಪರ್ -ಡೂಪರ್ ಹಿಟ್ ಆಗಿತ್ತು.

More from Filmibeat

English summary
Actor Salman Khan acquires 'Khiladi' Telugu movie remake rights before its released in the theaters.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X