For Quick Alerts
  ALLOW NOTIFICATIONS  
  For Daily Alerts

  'ದಬಾಂಗ್' ಬಳಿಕ ಸಲ್ಮಾನ್ ಖಾನ್ ಹೊಸ ಸಿನಿಮಾ 'ರಾಧೇ'

  |

  ಸಲ್ಮಾನ್ ಖಾನ್ ಅಭಿನಯದ ದಬಾಂಗ್-3 ಸಿನಿಮಾ ಇದೇ ಡಿಸೆಂಬರ್ ತಿಂಗಳಲ್ಲಿ ತೆರೆಗೆ ಬರ್ತಿದೆ. ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಚಿತ್ರಮಂದಿರಕ್ಕೆ ಬರಲಿರುವ ಈ ಚಿತ್ರಕ್ಕಾಗಿ ಸಲ್ಲು ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ.

  ಪ್ರಭುದೇವ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಕನ್ನಡದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಖಳನಟನಾಗಿ ನಟಿಸಿದ್ದಾರೆ. ಸೋನಾಕ್ಷಿ ಸಿನ್ಹಾ ನಾಯಕಿಯಾಗಿದ್ದಾರೆ. ಇದೀಗ, ಪ್ರಭುದೇವ ಮತ್ತೊಂದು ಚಿತ್ರವನ್ನ ಸಲ್ಮಾನ್ ಖಾನ್ ಜೊತೆ ಮಾಡುತ್ತಿದ್ದಾರೆ.

  ಸಲ್ಮಾನ್ ಖಾನ್ ಬಾಡಿಗಾರ್ಡ್ ತಿಂಗಳ ಸಂಬಳ ಇಷ್ಟೊಂದಾ..!ಸಲ್ಮಾನ್ ಖಾನ್ ಬಾಡಿಗಾರ್ಡ್ ತಿಂಗಳ ಸಂಬಳ ಇಷ್ಟೊಂದಾ..!

  ಈ ಚಿತ್ರಕ್ಕೆ 'ರಾಧೇ: ಯೂ ಆರ್ ಮೋಸ್ಟ್ ವಾಂಟೆಡ್ ಭಾಯ್' ಎಂದು ಹೆಸರಿಟ್ಟಿದ್ದು, ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ವಾಂಟೆಡ್, ದಬಾಂಗ್ 3 ಸಿನಿಮಾ ಬಳಿಕ ಮೂರನೇ ಸಲ ಈ ಕಾಂಬಿನೇಷನ್ ಒಂದಾಗುತ್ತಿದೆ.

  ಬನ್ಸಾಲಿ ಚಿತ್ರದಿಂದ ಸಲ್ಮಾನ್ ಹೊರಬರಲು ಆಲಿಯಾ ಜೊತೆಗಿನ 'ಆ ಸೀನ್' ಕಾರಣ.!ಬನ್ಸಾಲಿ ಚಿತ್ರದಿಂದ ಸಲ್ಮಾನ್ ಹೊರಬರಲು ಆಲಿಯಾ ಜೊತೆಗಿನ 'ಆ ಸೀನ್' ಕಾರಣ.!

  ರಾಧೇ ಚಿತ್ರದಲ್ಲು ಸಲ್ಲು ಭಾಯ್ ಪೊಲೀಸ್ ಆಗಿ ನಟಿಸಲಿದ್ದಾರೆ ಎನ್ನಲಾಗಿದೆ. ಈ ಸಿನಿಮಾ ಮುಂದಿನ ವರ್ಷ ಈದ್ ಹಬ್ಬಕ್ಕೆ ತೆರೆಗೆ ಬರಲಿದೆ ಎಂದು ಸಲ್ಲು ಅಧಿಕೃತವಾಗಿ ಪ್ರಕಟ ಮಾಡಿದ್ದಾರೆ. ನವೆಂಬರ್ ತಿಂಗಳಿನಿಂದ ಈ ಸಿನಿಮಾ ಆರಂಭವಾಗುತ್ತಿದ್ದು, ಕೊರಿಯನ್ ಚಿತ್ರದ ರೀಮೇಕ್ ಆಗಿದೆ.

  ಸಲ್ಮಾನ್ ಖಾನ್ ಗೆ ಜೋಡಿಯಾಗಿ ಈ ಚಿತ್ರದಲ್ಲಿ ದಿಶಾ ಪಟಾನಿ ನಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

  English summary
  Here's the BIGG announcement. Salman Khan and director Prabhu Deva reunite for the third time, after Wanted and Dabangg3. Titled Radhe.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X