For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ 'ರಾಧೆ' ಸಿನಿಮಾದ ಚಿತ್ರೀಕರಣ ಮುಕ್ತಾಯ: ಮುಂದಿನ ಸಿನಿಮಾ ಯಾವುದು?

  |

  ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷೆಯ ರಾಧೆ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಇತ್ತೀಚಿಗಷ್ಟೆ ಚಿತ್ರೀಕರಣದಲ್ಲಿ ಭಾಗಿಯಾದ ಫೋಟೋವನ್ನು ಹಂಚಿಕೊಂಡಿದ್ದ ಸಲ್ಮಾನ್ ಖಾನ್, ಇದೀಗ ಶೂಟಿಂಗ್ ಮುಗಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ.

  ಕೊರೊನಾ ವೈರಸ್ ಲಾಕ್ ಡೌನ್ ಬಳಿಕ ಅಂದರೆ ಸುಮಾರು 7 ತಿಂಗಳ ನಂತರ ಸಲ್ಮಾನ್ ಖಾನ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಚಿತ್ರೀಕರಣಕ್ಕೆ ಮರಳಿದ ಸಂತಸವನ್ನು ಸಲ್ಲು ಹಂಚಿಕೊಂಡಿದ್ದರು. ಅಲ್ಲದೆ ಚಿತ್ರದ ಮೇಕಿಂಗ್ ದೃಶ್ಯಗಳು ಸಹ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆಗಲೇ ಶೂಟಿಂಗ್ ಮುಗಿಸಿದ ಸುದ್ದಿಯನ್ನು ನೀಡಿದ್ದಾರೆ.

  'ರಾಧೆ' ಸಿನಿಮಾದ ಚಿತ್ರೀಕರಣದಲ್ಲಿ ಸಲ್ಮಾನ್ ಖಾನ್: ಮೇಕಿಂಗ್ ಪೋಟೋಗಳು ವೈರಲ್

  ಅಂದುಕೊಂಡಂತೆ ಆಗಿದ್ದಾರೆ ರಾಧೆ ಸಿನಿಮಾ ಈಗಾಗಲೇ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ವೈರಸ್ ಪರಿಣಾಮ ಸಿನಿಮಾ ಚಿತ್ರೀಕರಣ ಬಂದ್ ಆಗಿತ್ತು. ಇದೀಗ ರಿಲೀಸ್ ಸಹ ಮುಂದಕ್ಕೆ ಹೋಗಿದ್ದು, ಮುಂದಿನ ವರ್ಷ ರಾಧೆ ತೆರೆಗೆ ಬರಲಿದೆ.

  ರಾಧೆ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ ಎಂದು ಸಲ್ಮಾನ್ ಖಾನ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಂದ್ಹಾಗೆ ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಗೆ ನಾಯಕಿಯಾಗಿ ದಿಶಾ ಪಟಾನಿ ಕಾಣಿಸಿಕೊಂಡಿದ್ದಾರೆ. ಇನ್ನು ಪ್ರಮುಖ ಪಾತ್ರದಲ್ಲಿ ಜಾಕಿ ಶ್ರಾಫ್, ರಣದೀಪ್ ಹೂಡ ಸೇರಿದಂತೆ ಅನೇಕರು ನಟಿಸಿದ್ದಾರೆ.

  ಸದ್ಯ ರಾಧೆ ಚಿತ್ರೀಕರಣ ಮುಗಿಸಿರುವ ಸಲ್ಲು ಮುಂದಿನ ಸಿನಿಮಾ ಟೈಗರ್ ಆಯೇಗಾ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಮತ್ತೆ ಟೈಗರ್ ಹೆಸರಿನಲ್ಲಿ ಸಿನಿಮಾ ಮಾಡುತ್ತಿದ್ದು, ಸದ್ಯದಲ್ಲೇ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗುವ ಸಾಧ್ಯತೆ ಇದೆ. ಸಿನಿಮಾ ಜೊತೆಗೆ ಸಲ್ಲು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿಯೂ ಬ್ಯುಸಿಯಾಗಿದ್ದಾರೆ.

  English summary
  Salman Khan starrer Radhe: Your Most Wanted Bhai Has Finally Wrapped up the shoot.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X