ಸಲ್ಮಾನ್‌ಗೆ ಕೊರೊನಾ ಪರೀಕ್ಷೆ, ನಿಟ್ಟುಸಿರು ಬಿಟ್ಟ ಖಾನ್ ಕುಟುಂಬ
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರು ಕಾರು ಚಾಲಕ ಮತ್ತು ಸಿಬ್ಬಂದಿಗೆ ಕೊರೊನಾ ವೈರಸ್ ತಗುಲಿದ ಹಿನ್ನೆಲೆ ಸ್ಟಾರ್ ನಟನ ಕುಟುಂಬ ಸದಸ್ಯರಿಗೆ ಭೀತಿ ಎದುರಾಗಿತ್ತು.
ಮುಂಜಾಗ್ರತೆಯಿಂದ ಸಲ್ಮಾನ್ ಖಾನ್ ಮತ್ತು ಕುಟುಂಬದ ಸದಸ್ಯರು ಹೋಮ್ ಕ್ವಾರಂಟೈನ್‌ಗೆ ಒಳಪಟ್ಟಿದ್ದರು. ನಂತರ ಕೊವಿಡ್ ಪರೀಕ್ಷೆ ಮಾಡಿದ ಬಳಿಕ ಎಲ್ಲರಿಗೂ ಕೊರೊನಾ ನೆಗಿಟಿವ್ ಬಂದಿದೆ ಎಂಬ ವರದಿ ಸಿಕ್ಕಿದೆ. ಈ ಸುದ್ದಿಯಿಂದ ಸಲ್ಲು ಕುಟುಂಬ ನಿಟ್ಟುಸಿರು ಬಿಟ್ಟಿದೆ.
ಗುರುವಾರ ಸಲ್ಮಾನ್ ಖಾನ್ ಕಾರ್ ಡ್ರೈವರ್ ಮತ್ತು ಇಬ್ಬರು ಸಿಬ್ಬಂದಿಗೆ ಕೊರೊನಾ ವೈರಸ್ ದೃಢಪಟ್ಟಿತ್ತು. ಸೋಂಕಿತ ಸಿಬ್ಬಂದಿಯನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಲ್ಲು ಮತ್ತು ಕುಟುಂಬ ಸದಸ್ಯರು ಕ್ವಾರಂಟೈನ್ ಆಗಿದ್ದರು.

ಅಂದ್ಹಾಗೆ, ಸಲ್ಲು ಮನೆಯಲ್ಲಿ ವಿವಾಹ ಮಹೋತ್ಸವ ಕಾರ್ಯಕ್ರಮ ನಿಗದಿಯಾಗಿದೆ. ಸಲೀಂ ಖಾನ್ ಮತ್ತು ಸಲ್ಮಾ ಖಾನ್ ಮದುವೆ ನಿಶ್ಚಿಯವಾಗಿದೆ. ಕೊರೊನಾ ಭೀತಿ ಎದುರಾಗಿರುವ ಹಿನ್ನೆಲೆ ಈ ಕಾರ್ಯಕ್ರಮಕ್ಕೆ ಸದ್ಯಕ್ಕೆ ಸ್ಥಗಿತವಾಗಿದೆ ಎಂದು ಹೇಳಲಾಗಿದೆ.
ಇನ್ನು ಪ್ರಭುದೇವ ನಿರ್ದೇಶನದ ರಾಧೇ ಸಿನಿಮಾದಲ್ಲಿ ಸಲ್ಲು ನಟಿಸುತ್ತಿದ್ದಾರೆ. ಈ ಚಿತ್ರವನ್ನು ಸ್ವತಃ ಸಲ್ಮಾನ್ ಖಾನ್ ನಿರ್ಮಾಣ ಮಾಡುತ್ತಿದ್ದಾರೆ. ಸಲ್ಲುಗೆ ಜೋಡಿಯಾಗಿ ದಿಶಾ ಪಟಾನಿ ಕಾಣಿಸಿಕೊಳ್ಳುತ್ತಿದ್ದು, ರಣ್‌ದೀಪ್ ಹೂಡ, ಜಾಕಿ ಶ್ರಾಫ್ ಸಹ ಪ್ರಮುಖ ಪಾತ್ರದಲ್ಲಿ ಇರಲಿದ್ದಾರೆ.


Click it and Unblock the Notifications











