For Quick Alerts
  ALLOW NOTIFICATIONS  
  For Daily Alerts

  ವಂಚನೆ ಪ್ರಕರಣ: ಸಲ್ಮಾನ್ ಖಾನ್‌ಗೆ ಪೊಲೀಸರಿಂದ ಸಮನ್ಸ್

  |

  ನಟ ಸಲ್ಮಾನ್ ಖಾನ್ ಹಾಗೂ ಸಹೋದರಿ ಅಲ್ವಿರಾ ಖಾನ್ ಅಗ್ನಿಹೋತ್ರಿ ಸೇರಿ ಒಂಬತ್ತು ಮಂದಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂಡೀಗಢ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ.

  ಸಲ್ಮಾನ್ ಖಾನ್ 'ಬೀಯಿಂಗ್ ಹ್ಯೂಮನ್' ಹೆಸರಿನ ಎನ್‌ಜಿಒ ನಡೆಸುತ್ತಿದ್ದು, 'ಬೀಯಿಂಗ್ ಹ್ಯೂಮನ್' ಹೆಸರಿನ ಬ್ರ್ಯಾಂಡ್‌ ಅಡಿಯಲ್ಲಿ ಉತ್ಪನ್ನಗಳ ಮಾರಾಟ ಸಹ ಮಾಡುತ್ತಿದ್ದಾರೆ.

  ಬೀಯಿಂಗ್ ಹ್ಯೂಮನ್ ಕುರಿತಾಗಿಯೇ ಚಂಡೀಗಢದ ಅರುಣ್ ಗುಪ್ತಾ ಎಂಬುವರು, ಸಲ್ಮಾನ್ ಖಾನ್, ಬೀಯಿಂಗ್ ಹ್ಯೂಮನ್ ಸಂಸ್ಥೆಯ ಸಿಇಒ, ಸಲ್ಮಾನ್ ಖಾನ್ ಸಹೋದರಿ ಅಲ್ವಿರಾ ಹಾಗೂ ಇತರ ಕೆಲವು ಸಿಬ್ಬಂದಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

  ದೂರುದಾರ ಅರುಣ್ ಗುಪ್ತಾ ಹೇಳಿರುವಂತೆ, ''ಬೀಯಿಂಗ್ ಹ್ಯೂಮನ್ ಸಂಸ್ಥೆಯ ಕೆಲವು ಸಿಬ್ಬಂದಿ ನನಗೆ ಫ್ರ್ಯಾಂಚೈಸಿ ತೆರೆಯುವಂತೆ ಹೇಳಿದರು. ಅದರಂತೆ ನಾನು ಬಂಡವಾಳ ಹೂಡಿ ಶಾಪ್ ತೆರೆದೆ ದಾಸ್ತಾನಿಗಾಗಿ ಹಣ ಸಹ ಪಾವತಿಸಿದೆ. ಆದರೆ ಯಾವುದೇ ದಾಸ್ತಾನನ್ನು ಬೀಯಿಂಗ್ ಹ್ಯೂಮನ್ ಅವರು ನೀಡದೇ ಮೋಸ ಮಾಡಿದ್ದಾರೆ'' ಎಂದಿದ್ದಾರೆ.

  Dr.ರಾಜ್ ಅಪರೂಪದ ವಿಡಿಯೋ: 100 ಚಿತ್ರ ಪೂರೈಸಿದ್ದಕ್ಕೆ ಸಂಭ್ರಮ | Filmibeat Kannada

  ದೂರು ದಾಖಲಿಸಿಕೊಂಡಿರುವ ಚಂಡೀಗಢ ಪೊಲೀಸರು, ಸಲ್ಮಾನ್ ಖಾನ್, ಸಲ್ಮಾನ್ ಖಾಸ್ ಸಹೋದರಿ ಅಲ್ವಿರಾ ಹಾಗೂ ಇನ್ನೂ ಕೆಲವು ಬೀಯಿಂಗ್ ಹ್ಯೂಮನ್ ಸಿಬ್ಬಂದಿಗೆ ಸಮನ್ಸ್ ಜಾರಿ ಮಾಡಿದ್ದು, ಜುಲೈ 13ರ ಒಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

  English summary
  Salman Khan, sister Alvira Khan and other seven people summoned by Chandigarh police regarding cheating case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X