'ಟೈಗರ್ 3': 2023 ಈದ್ ಪ್ರಯುಕ್ತ ತೆರೆಗೆ!

ಸಲ್ಮಾನ್ ಖಾನ್ ಮತ್ತು ಕತ್ರೀನಾ ಕೈಫ್ ಅಭಿನಯ ಬಹುನಿರೀಕ್ಷಿತ ಚಿತ್ರ 'ಟೈಗರ್ 3'ಗಾಗಿ ದೀರ್ಘ ಕಾಲರದಿಂದ ಅಭಿಮಾನಿಗಳು ಸಿನಿಮಾ ಪ್ರೇಕ್ಷಕರು ಕಾಯುತ್ತಿದ್ದಾರೆ. ಲಾಕ್‌ ಡೌನ್ ಬಳಿಕ ಸಾಲು, ಸಾಲು ಸಿನಿಮಾಗಳು ರಿಲೀಸ್ ದಿನಾಂಕವನ್ನು ಪ್ರಕಟ ಮಾಡಿವೆ, ಮಾಡುತ್ತಲೇ ಇವೆ. ಆದರೆ ಸಲ್ಮಾನ್ ಖಾನ್ ಮುಂದಿನ ಚಿತ್ರಕ್ಕಾಗಿ ಕಾಯುತ್ತಿದ್ದವರಿಗೆ ಈಗ ಸಿಹಿ ಸುದ್ದಿ ಸಿಕ್ಕಿದೆ.

ಸದ್ಯ 'ಟೈಗರ್ 3' ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಾಗಿದೆ. ಈ ಚಿತ್ರ ಮುಂದಿನ ವರ್ಷ ಅಂದರೆ 2023ರಲ್ಲಿ ರಿಲೀಸ್ ಆಗುತ್ತಿದೆ. ಏಪ್ರಿಲ್ 21, 2023 ರಂದು ಈದ್ ಸಮಯದಲ್ಲಿ ಟೈಗರ್ 3 ಚಿತ್ರ ಥಿಯೇಟರ್‌ಗಳಿಗೆ ಲಗ್ಗೆ ಇಡಲಿದೆ. ಚಿತ್ರದ ಟೀಸರ್ ರಿಲೀಸ್ ಮಾಡುವ ಮೂಲಕ ಚಿತ್ರದ ಬಿಡುಗಡೆ ದಿನಾಂಕವನ್ನು ಪ್ರಕಟ ಮಾಡಲಾಗಿದೆ. ಈ ಬಗ್ಗೆ ನಟ ಸಲ್ಮಾನ್ ಖಾನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ. "ಹಮ್ ಸಬ್ ಅಪ್ನಾ ಅಪ್ನಾ ಖಯಾಲ್ ರಾಖೇನ್, 'ಟೈಗರ್ 3' 2023 ಈದ್ ಪ್ರಯುಕ್ತ, ಎಲ್ಲರೂ ಇದಕ್ಕೆ ಸಾಕ್ಷಿಯಾಗಿ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ."

ಸಲ್ಮಾನ್ ಖಾನ್ ಮತ್ತು ಕತ್ರೀನಾ ಕೈಫ್ 'ಟೈಗರ್ 3' ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಕೆಲವು ದಿನಗಳ ಹಿಂದೆ, ಚಿತ್ರೀಕರಣ ಒಂದಷ್ಟು ಫೋಟೋ, ವಿಡಿಯೋಗಳನ್ನು ಹರಿಬಿಡಲಾಗಿತ್ತು. ಅದು ಚಿತ್ರದ ಬಹುದೊಡ್ಡ ಫೈಟ್ ದೃಶ್ಯ. ಹಾಗಾಗಿ ರಿವೀಲ್ ಆಗಿದ್ದ ತುಣುಕುಗಳು ಸಿನಿಮಾದ ಮೇಲೆ ನಿರೀಕ್ಷೆ ಹುಟ್ಟು ಹಾಕಿದವು.

Salman Khan And Katrina Kaif Starrer Tiger 3 Gets A Release Date

'ಟೈಗರ್ 3' ಸಿನಿಮಾ 'ಏಕ್ ಥಾ ಟೈಗರ್' ಮತ್ತು 'ಟೈಗರ್ ಜಿಂದಾ ಹೈ' ಚಿತ್ರದ ಮುಂದುವರಿದ ಭಾಗವಾಗಿದೆ. ಈ ಟೈಗರ್ ಸರಣಿಯ ಆರಂಭಿಕ ಎರಡು ಚಿತ್ರಗಳು ಬ್ಲಾಕ್‌ ಬಸ್ಟರ್ ಹಿಟ್ ಆಗಿವೆ. ಈ ಸರಣಿ ಚಿತ್ರಗಳಲ್ಲಿ, ಸಲ್ಮಾನ್ ಭಾರತೀಯ ಗೂಢಚಾರಿ ಅವಿನಾಶ್ ಸಿಂಗ್ 'ಟೈಗರ್' ರಾಥೋಡ್ ಪಾತ್ರವನ್ನು ನಿರ್ವಹಿಸುತ್ತಾರೆ. ನಟಿ ಕತ್ರೀನಾ ಪಾಕಿಸ್ತಾನಿ ಗೂಢಚಾರ ಜೋಯಾ ಹುಮೈಮಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾಳೆ. ಆದರೆ ಇವರ ನಡುವೆ ಪ್ರೀತಿ ಆಗುತ್ತದೆ ಎನ್ನುವುದೇ ವಿಶೇಷ.

ಈ ಹಿಂದೆ ಬಂದ ಎರಡೂ ಚಿತ್ರಗಳನ್ನು ನೋಡಿದ ಪ್ರೇಕ್ಷಕರು ಮುಂದಿನ ಸರಳಿಗಾಗಿ ಕಾಯುತ್ತಿದ್ದಾರೆ. 'ಟೈಗರ್ 3' ಬಹುಶಃ, ಈ ಟೈಗರ್ ಸರಣಿಯ ಕೊನೆಯ ಭಾಗವಾಗಿರಲಿದೆ. ಹಾಗಾಗಿ ಚಿತ್ರದ ಕ್ಲೈಮ್ಯಾಕ್ಸ್ ಮೇಲೆ ಹೆಚ್ಚಿನ ಕುತೂಹಲ ಇದೆ. ಆದರೆ ಮತ್ತೊಂದು ಸರಣಿಗೆ ಚಿತ್ರ ಸಿದ್ಧವಾಗಿದ್ದರೆ. ಅದಕ್ಕೂ ಕ್ಲೈಮ್ಯಾಕ್ಸ್‌ನಲ್ಲೇ ಉತ್ತರ ಸಿಗಲಿದೆ.

ಮೂಲಗಳ ಪ್ರಕಾರ 'ಟೈಗರ್ 3' ಚಿತ್ರದಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅತ್ತ ನಟ ಸಲ್ಮಾನ್ ಕಾನ್ ಕೂಡ ಶಾರುಖ್ ಅಭಿನಯದ 'ಪಠಾಣ್' ಚಿತ್ರದಲ್ಲಿ ಟೈಗರ್ ಆಗಿ ಅತಿಥಿ ಪಾತ್ರವನ್ನು ಮಾಡಲಿದ್ದಾರೆ ಎನ್ನಲಾಗಿದೆ.

More from Filmibeat

English summary
Salman Khan And Katrina Kaif Starrer Tiger 3 Gets A Release Date, Film To Be Out On Eid 2023,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X