ಮೊದಲ ದಿನ ಸಲ್ಮಾನ್ ಖಾನ್, ಕತ್ರಿನಾ ಕೈಫ್ ನಟನೆಯ 'ಟೈಗರ್ 3' ಬಾಚಿಕೊಂಡಿದ್ದೆಷ್ಟು?
ದೀಪಾವಳಿಯ ಶುಭದಿನದಂದು ಬಾಲಿವುಡ್ ಭಾಯ್‌ಜಾನ್ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ನಟನೆಯ ಟೈಗರ್ 3 ಸಿನಿಮಾ ಗ್ರ್ಯಾಂಡ್ ರಿಲೀಸ್ ಆಗಿದೆ. ಈ ಹಿಂದಿನ ಸಲ್ಮಾನ್- ಕತ್ರಿನಾ ನಟನೆಯ ಟೈಗರ್ ಸರಣಿ ಸಿನಿಮಾಗಳು ಸೂಪರ್ ಹಿಟ್ ಆಗಿದ್ದು, ಈ ಸಿನಿಮಾವೂ ಅದರ ಸಾಲಿಗೆ ಸೇರುವಂತೆ ಕಾಣುತ್ತಿದೆ.
ಬಾಲಿವುಡ್‌ನಲ್ಲಿ ಅತೀ ದೊಡ್ಡ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್ ನಿರ್ಮಿಸಿರುವ ಮತ್ತೊಂದು ಆಕ್ಷನ್ ಥ್ರಿಲ್ಲರ್ ಫ್ರಾಂಚೈಸಿ 'ಟೈಗರ್ 3'. ಭಾನುವಾರ ತೆರೆಕಂಡಿರುವ ಈ ಟೈಗರ್ 3 ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಸಕತ್ ಓಪನಿಂಗ್ ಪಡೆಯುವಂತೆ ಕಾಣುತ್ತಿದೆ. ಮಿಂಟ್ ವರದಿ ಮಾಡಿದಂತೆ, ಸ್ಪೈ ಥ್ರಿಲ್ಲರ್ ಭಾನುವಾರ 40 ಕೋಟಿ ರೂಪಾಯಿಗಳನ್ನು ಬಾಚಿಕೊಂಡಿದೆ.

ಟೈಗರ್ 3 ಮೊದಲ ದಿನದ ಕಲೆಕ್ಷನ್ ವಿವರ
ಟೈಗರ್ 3 ರ ಆರಂಭಿಕ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ 40 ಕೋಟಿಯಾಗಿದೆ. ಅಲಿ ಅಬ್ಬಾಸ್ ಜಾಫರ್ ಅವರ 2019 ರಲ್ಲಿ ಬಿಡುಗಡೆಯಾದ ಭಾರತ್ ಮೊದಲ ದಿನ 42.30 ಕೋಟಿ ಗಳಿಸಿತ್ತು. ಸೂರಜ್ ಬರ್ಜಾತ್ಯಾ ಅವರ 2015 ರ ಕೌಟುಂಬಿಕ ಸಿನಿಮಾ ಪ್ರೇಮ್ ರತನ್ ಧನ್ ಪಾಯೊ 40.35 ಕೋಟಿಗಳನ್ನು ಗಳಿಸಿತ್ತು. ಇವೆರಡೂ ಸಿನಿಮಾಗಳ ನಂತರ ದೀಪಾವಳಿಯ ಸಂದರ್ಭದಲ್ಲಿ ಬಿಡುಗಡೆಯಾಗಿರುವ ಟೈಗರ್ 3 ಈ ಸಾಲಿಗೆ ಸೇರುತ್ತಿದೆ.
ವಿಜಯ್ ಕೃಷ್ಣ ಆಚಾರ್ಯ ಅವರ 2018 ರ ಆಕ್ಷನ್ ಫಿಲ್ಮಂ ಥಗ್ಸ್ ಆಫ್ ಹಿಂದೂಸ್ತಾನ್ 52.25 ಕೋಟಿ ಗಳಿಸಿತ್ತು. ಇದಾದ ನಂತರ ಟೈಗರ್ 3 ಕತ್ರಿನಾಗೆ ಮೂರನೇ ಅತಿ ದೊಡ್ಡ ಓಪನರ್ ಆಗಲಿದೆ. ಟೈಗರ್ 3 ಸಿನಿಮಾವನ್ನು ಆದಿತ್ಯ ಚೋಪ್ರಾ ಅವರ ಯಶ್ ರಾಜ್ ಫಿಲ್ಮ್ಸ್ ಮತ್ತು ಭಾರತ್ ನಿರ್ಮಿಸಿದ್ದಾರೆ.
ಭಾನುವಾರವಾದರೂ ದೀಪಾವಳಿ ದಿನವೇ ಯಾಕೆ ಸಿನಿಮಾ ರಿಲೀಸ್?
ಇಂಡಿಯಾ ಟುಡೆಗೆ ನೀಡಿದ ಸಂದರ್ಶನದಲ್ಲಿ, ಯಶ್ ರಾಜ್ ಫಿಲ್ಮ್ಸ್ ವಿತರಣಾ ಮುಖ್ಯಸ್ಥ ರೋಹನ್ ಮಲ್ಹೋತ್ರಾ ಅವರು ಟೈಗರ್ 3 ಅನ್ನು ದೀಪಾವಳಿ ದಿನದಂದು ಬಿಡುಗಡೆ ಮಾಡುವ ನಿರ್ಮಾಣ ಸಂಸ್ಥೆಯ ನಿರ್ಧಾರವನ್ನು ವಿವರಿಸಿದ್ದರು. "ನಾವು ಸಾಂಪ್ರದಾಯಿಕ ಮಾರ್ಗವನ್ನು ಅನುಸರಿಸಿದರೆ, ಗಣರಾಜ್ಯೋತ್ಸವದಂದು ಚಿತ್ರವನ್ನು ಬಿಡುಗಡೆ ಮಾಡುತ್ತೇವೆ. ಅಲ್ಲಿ ನಮಗೆ ಖಚಿತವಾಗಿ ನಿರ್ದಿಷ್ಟ ಒಂದು ಸಂಖ್ಯೆಯ ಭರವಸೆ ಇತ್ತು. ಆದರೆ ಯಶ್ ರಾಜ್ ಫಿಲ್ಮ್ಸ್ ನಲ್ಲಿ, ನಾವು ಚಿತ್ರ ಎಷ್ಟು ದಿನಗಳವರೆಗೆ ವ್ಯವಹಾರ ಮಾಡಲಿದೆ ಎಂಬ ಲೆಕ್ಕಾಚಾರದ ಮೇಲೆ ಬಿಡುಗಡೆಯನ್ನು ಕೇಂದ್ರೀಕರಿಸಿದ್ದೇವೆ. ನಾವು ಒಂದು ದಿನ ಮುಂಚಿತವಾಗಿ ಭಾನುವಾರವೇ ಸಿನಿಮಾ ಬಿಡುಗಡೆ ಮಾಡಿದ್ದೇವೆ. ಅದು ಸಕತ್ ವರ್ಕ್‌ಔಟ್ ಆಗಿದೆ" ಎಂದು ಹೇಳಿದ್ದಾರೆ.

ಟೈಗರ್ 3
ಟೈಗರ್ 3 ಸಲ್ಮಾನ್ ಮತ್ತು ಕತ್ರಿನಾ ಅವರ ಸ್ಪೈ ಥ್ರಿಲ್ಲರ್ ಫ್ರಾಂಚೈಸ್‌ನಲ್ಲಿ ಮೂರನೇ ಸಿನಿಮಾ. ಇದು ಯಶ್ ರಾಜ್ ಫಿಲ್ಮ್ಸ್ ನಲ್ಲಿ 'ವಾರ್' ಮತ್ತು 'ಪಠಾಣ್' ಬಳಿಕ ಬಂದ ಮತ್ತೊಂದು ಸೂಪರ್ ಆಕ್ಷನ್ ಸಿನಿಮಾ. ಟೈಗರ್ 3 ಚಿತ್ರವನ್ನು ಮನೀಶ್ ಶರ್ಮಾ ನಿರ್ದೇಶಿಸಿದ್ದಾರೆ. ಸಲ್ಮಾನ್ ಖಾನ್, ಕತ್ರಿನಾ ಕೈಫ್, ಇಮ್ರಾನ್ ಹಶ್ಮಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇನ್ನು, ಸಿನಿಮಾದಲ್ಲಿ ಟೈಗರ್‌ಗೆ ಸಾರ್ಥ ನೀಡಲು 'ಪಠಾಣ್' ಅಂದರೆ ಶಾರುಖ್ ಖಾನ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರ ಆಕ್ಷನ್ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿವೆ.


Click it and Unblock the Notifications










