Tiger 3: ಮುಂಗಡ ಬುಕ್ಕಿಂಗ್‌ನಲ್ಲಿ ದಾಖಲೆ ಬರೆಯುತ್ತಿದೆ ಸಲ್ಮಾನ್- ಕತ್ರಿನಾ ನಟನೆಯ 'ಟೈಗರ್ 3'!

ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ 'ಟೈಗರ್ 3' ಮುಂಗಡ ಬುಕ್ಕಿಂಗ್ ವಿಂಡೋಗಳಲ್ಲಿ ದಾಖಲೆ ಬರೆಯುತ್ತಿದೆ. ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅಭಿನಯದ ಸ್ಪೈ ಥ್ರಿಲ್ಲರ್ ಈಗಾಗಲೇ ತನ್ನ ಮುಂಗಡ ಬುಕಿಂಗ್‌ನಲ್ಲಿ 10 ಕೋಟಿ ರೂಪಾಯಿ ಮೌಲ್ಯದ ಟಿಕೆಟ್‌ಗಳನ್ನು ಮಾರಾಟ ಮಾಡಿದೆ.

ಫಿಲ್ಮ್ ಟ್ರೇಡ್ ಪೋರ್ಟಲ್ ಸ್ಯಾಕ್‌ನಿಲ್ಕ್‌ನ ಅಧಿಕೃತ ಟ್ವಿಟರ್ ಖಾತೆಯ ಪ್ರಕಾರ ಟೈಗರ್ 3 ಎಲ್ಲಾ ದಿನಗಳ ಮುಂಗಡ ಬುಕಿಂಗ್‌ನಲ್ಲಿ ಈಗಾಗಲೇ 10 ಕೋಟಿ ರೂಪಾಯಿ ದಾಟಿದೆ. ಯಶ್ ರಾಜ್ ಫಿಲ್ಮಂನ ಸ್ಪೈ ಯೂನಿವರ್ಸ್‌ನ ಈ ಚಿತ್ರಕ್ಕೆ ಭಾರಿ ಬೇಡಿಕೆಯಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದೇ ಕಾರಣಕ್ಕೆ ಸಿನಿಮಾ ಬುಕ್ಕಿಂಗ್‌ಗೆ ಹೆಚ್ಚುತ್ತಿದೆ.

Tiger

24x7 ಪ್ರದರ್ಶನವಾಗಲಿದೆ ಟೈಗರ್ 3

ಸಿನಿಮಾಗೆ ಇರುವ ಭಾರಿ ಬೇಡಿಕೆಯ ಕಾರಣದಿಂದ ಟೈಗರ್ 3 ಅಹಮದಾಬಾದ್ ಮತ್ತು ಮಧ್ಯಪ್ರಾಚ್ಯದ ಚಿತ್ರಮಂದಿರಗಳಲ್ಲಿ 24x7 ಪ್ರದರ್ಶನಗಳನ್ನು ಮಾಡಲು ಸಜ್ಜಾಗಿದೆ. ಅಹಮದಾಬಾದ್‌ನ ಸಿನಿಸ್ಟಾರ್ ಮಿನಿಪ್ಲೆಕ್ಸ್‌ನಲ್ಲಿ ದೀಪಾವಳಿ ಹಬ್ಬದಂದು ಬೆಳಗಿನ ಜಾವ 2 ಗಂಟೆಯಿಂದ ಸಿನಿಮಾ ಪ್ರದರ್ಶಿಸಲು ನಿರ್ಧರಿಸಿದೆ.

ಇದರ ಜೊತೆಗೆ ಮಧ್ಯಪ್ರಾಚ್ಯದ ಥಿಯೇಟರ್‌ಗಳು, ದುಬೈನ ಮಿರ್ಡಿಫ್‌ನಲ್ಲಿರುವ ವೋಕ್ಸ್ ಸಿನಿಮಾಸ್‌ನಲ್ಲಿ 12.05 ಕ್ಕೆ ಚಲನಚಿತ್ರ ಪ್ರದರ್ಶಿಸಲಾಗುತ್ತದೆ. ಈ ಪ್ರದೇಶಗಳಲ್ಲಿ ದೀಪಾವಳಿ ಎಫೆಕ್ಟ್ ಇಲ್ಲದ ಕಾರಣ ರಿಯಾದ್, ಸೌದಿ ಅರೇಬಿಯಾದ ನಖೀಲ್ ಮಾಲ್‌ನಲ್ಲಿ 2 ಗಂಟೆಯಿಂದ ಟೈಗರ್ 3 ಪ್ರದರ್ಶನವಾಗಲಿದೆ. ಟೈಗರ್ 3 ಇದೇ ಭಾನುವಾರ, ನವೆಂಬರ್ 12 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Tiger

ಮುಂದಿನ ಕೆಲವು ದಿನಗಳಲ್ಲಿ ಟೈಗರ್ 3 ಗಾಗಿ ದೇಶದಾದ್ಯಂತ ಈ ಬೇಡಿಕೆ ಹೆಚ್ಚಾಗಲಿದೆ ಎಂದು ಹಿಂದೂಸ್ತಾನ್ ಟೈಮ್ಸ್‌ನ ವರದಿ ಬಹಿರಂಗಪಡಿಸಿದೆ. ವರದಿಯ ಪ್ರಕಾರ, ದೀಪಾವಳಿಯ ಲಕ್ಷ್ಮಿ ಪೂಜೆಯ ನಂತರ ನವೆಂಬರ್ 13 ರಿಂದ ದೇಶದಾದ್ಯಂತ ಟೈಗರ್ 3 24x7 ಹೆಚ್ಚು ಲಾಭ ತರಲಿದೆ. ಚಿತ್ರದ ಬಗ್ಗೆ ಇರುವ ಅಪಾರ ನಿರೀಕ್ಷೆಯಿಂದಾಗಿ ದೇಶದ ವಿವಿಧ ಭಾಗಗಳಿಂದ ಹೆಚ್ಚು ಬೇಡಿಕೆಯಿದೆ ಎಂದು ತಿಳಿಸಿದೆ.

"ಅಹಮದಾಬಾದ್ ಚಿತ್ರಮಂದಿರದಲ್ಲಿ ಟೈಗರ್ 3 ಮೊದಲ ಪ್ರದರ್ಶನವಾಗಲಿದೆ. ಮಧ್ಯಪ್ರಾಚ್ಯ ಥಿಯೇಟರ್‌ಗಳು ಭಾನುವಾರದಿಂದ ಪ್ರದರ್ಶನ ಮಾಡುತ್ತಿವೆ. ಜನರು ಉತ್ತಮ ಸಿನಿಮಾವನ್ನು ನೋಡಲು ಬಯಸುತ್ತಿದ್ದು, ಟೈಗರ್ 3 ವರ್ಷದ ಮನರಂಜನೆಯ ಸಿನಿಮಾವಾಗಿದೆ. ಹೀಗಾಗಿ ಸಿನಿಮಾ ನಿರ್ಮಾಣ ಕಂಪನಿಗೂ ಹೆಚ್ಚು ಲಾಭವಾಗಲಿದೆ" ಎಂದು ಮೂಲವೊಂದು ಬಹಿರಂಗಪಡಿಸಿದೆ.

More from Filmibeat

English summary
Tiger 3 advance booking crosses rs 10 crore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X