For Quick Alerts
  ALLOW NOTIFICATIONS  
  For Daily Alerts

  30 ವರ್ಷ ಚಿಕ್ಕವರಾಗಲಿದ್ದಾರೆ ನಟ ಸಲ್ಮಾನ್ ಖಾನ್

  |

  ನಟ ಸಲ್ಮಾನ್ ಖಾನ್ ಗೆ 55 ವರ್ಷವಾಗಿ ನಾಲ್ಕು ದಿನಗಳಾಗಿವೆ. ಡಿಸೆಂಬರ್ 27 ಕ್ಕೆ ಅವರು ತಮ್ಮ 55ನೇ ಹುಟ್ಟುಹಬ್ಬ ಸರಳವಾಗಿ ಆಚರಿಸಿಕೊಂಡರು.

  ಆದರೆ ನಟ ಸಲ್ಮಾನ್ ಖಾನ್, 30 ವರ್ಷ ಚಿಕ್ಕವರಾಗಲಿದ್ದಾರೆ. ಸಲ್ಮಾನ್ ಖಾನ್ ಮಾತ್ರವಲ್ಲ ನಟ ಶಾರುಖ್ ಖಾನ್ ಸಹ 30 ವರ್ಷ ಚಿಕ್ಕವರಾಗಲಿದ್ದಾರೆ!

  ಅಮೀರ್ ಖಾನ್ ರ ಹೊಸ ಸಿನಿಮಾ 'ಲಾಲ್ ಸಿಂಗ್ ಛಡ್ಡಾ' ದಲ್ಲಿ ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ಇಬ್ಬರೂ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಅತಿಥಿ ಪಾತ್ರಗಳು ಸಾಕಷ್ಟು ವಿಶಿಷ್ಟವಾಗಿರಲಿವೆ.

  30 ವರ್ಷದ ಹಿಂದೆ ಹಮ್ ಆಪ್‌ ಕೆ ಹೈ ಕೋನ್ ನಲ್ಲಿ ಪ್ರೇಮ್ ಆಗಿದ್ದ ಸಲ್ಮಾನ್ ಖಾನ್, ಅದೇ ಪ್ರೇಮ್ ಅವತಾರದಲ್ಲಿ ಅಮೀರ್ ಖಾನ್ ಸಿನಿಮಾದಲ್ಲಿ ನಟಿಸಲಿದ್ದಾರೆ. ಶಾರುಖ್ ಖಾನ್ ಸಹ ದಿಲ್ ವಾಲೆ ದುಲ್ಹನಿಯಾ ಲೇ ಜಾಯೆಂಗೆ ಸಿನಿಮಾದ ರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  ಅಮೀರ್ ಖಾನ್ ರ ಹೊಸ ಸಿನಿಮಾ 30 ವರ್ಷದ ಹಿಂದೆ ನಡೆಯುವ ಕತೆಯಾಗಿದ್ದು, ಆಗ ಪ್ರಸಿದ್ಧಿಯ ಉತ್ತುಂಗದಲ್ಲಿದ್ದ ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಅವರುಗಳನ್ನು ಅವರ ಸಿನಿಮಾದ ಸೆಟ್‌ನಲ್ಲಿ ಅಮೀರ್ ಖಾನ್ ಭೇಟಿ ಮಾಡುವ ದೃಶ್ಯ ಸಿನಿಮಾದಲ್ಲಿ ಇದೆಯಂತೆ. ಅದಕ್ಕಾಗಿಯೇ ಸಲ್ಮಾನ್ ಹಾಗೂ ಶಾರುಖ್ ಮತ್ತೊಮ್ಮೆ ಪ್ರೇಮ್ ಹಾಗೂ ರಾಜ್ ಆಗುತ್ತಿದ್ದಾರೆ.

  ಬಾಯ್ ಫ್ರೆಂಡ್ ಜೊತೆ ರೋಮ್ಯಾಂಟಿಕ್ ಫೋಟೋ ಹಂಚಿಕೊಂಡ ಗೊಗ್ಲಿ ಬೆಡಗಿ | Filmibeat Kannada

  ಅಮೀರ್ ಖಾನ್ ನಟನೆಯ ಲಾಲ್‌ ಸಿಂಗ್ ಛಡ್ಡಾ ಸಿನಿಮಾವು ಆಸ್ಕರ್ ವಿಜೇತ 'ಫಾರೆಸ್ಟ್ ಗಂಫ್' ಸಿನಿಮಾದ ರೀಮೇಕ್ ಆಗಿದೆ. ಸಿನಿಮಾದಲ್ಲಿ ನಾಯಕಿಯಾಗಿ ಕರೀನಾ ಕಪೂರ್ ನಟಿಸಿದ್ದಾರೆ.

  English summary
  Salman Khan and Shah Rukh Khan will act in Aamir Khan's upcoming movie Lal Singh Chadda as Prem and Raj.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X