For Quick Alerts
  ALLOW NOTIFICATIONS  
  For Daily Alerts

  25 ವರ್ಷದ ಬಳಿಕ ಒಂದೆ ಸಿನಿಮಾದಲ್ಲಿ ಶಾರುಖ್-ಸಲ್ಮಾನ್: ಒಟ್ಟಿಗೆ ಕರೆತರುತ್ತಿದ್ದಾರೆ ಬನ್ಸಾಲಿ

  |
  25 ವರ್ಷದ ಬಳಿಕ ಒಂದೆ ಸಿನಿಮಾದಲ್ಲಿ ಶಾರುಖ್-ಸಲ್ಮಾನ್ | SHAHRUK KHAN | SALMAN KHAN | FILMIBEAT KANNADA

  ಬಾಲಿವುಡ್ ನ 'ಕರಣ್ ಅರ್ಜುನ್' ಅಂತಾನೆ ಖ್ಯಾತಿ ಗಳಿಸಿರವ ಜೋಡಿ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್. 25 ವರ್ಷಗಳ ಹಿಂದೆ ಈ ಇಬ್ಬರು ಸ್ಟಾರ್ ನಟರು 'ಕರಣ್ ಅರ್ಜುನ್' ಆಗಿ ಚಿತ್ರಾಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಅದೆ ಮೊದಲು ಅದೆ ಕೊನೆ. ಆ ನಂತರ ಇಬ್ಬರು ಸ್ಟಾರ್ ನಟರು ಒಟ್ಟಿಗೆ ಸಿನಿಮಾ ಮಾಡಿಲ್ಲ.

  ಇತ್ತೀಚಿಗೆ ಇಬ್ಬರು ಗೆಸ್ಟ್ ಪಾತ್ರದ ಮೂಲಕ ಬಿಗ್ ಸ್ಕ್ರೀನ್ ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಸಂಪೂರ್ಣವಾಗಿ ಸಿನಿಮಾದಲ್ಲಿ ಇರಲಿಲ್ಲ. ಆದರೀಗ ಇಬ್ಬರು ಸ್ಟಾರ್ ನಟರನ್ನು ಒಟ್ಟಿಗೆ ಒಂದೆ ಸಿನಿಮಾದಲ್ಲಿ ನೋಡುವ ಅವಕಾಶ ಸಿಕ್ಕಿದೆ. ಹೌದು, ಇಬ್ಬರು ಖಾನ್ ಗಳು ಒಂದೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿವೆ.

  ಅಟ್ಲಿ ಇಲ್ಲ, ಹಿರಾನಿನೂ ಅಲ್ಲ....ಶಾರೂಖ್ ಮುಂದಿನ ಸಿನಿಮಾ ಇವರ ಜೊತೆ!ಅಟ್ಲಿ ಇಲ್ಲ, ಹಿರಾನಿನೂ ಅಲ್ಲ....ಶಾರೂಖ್ ಮುಂದಿನ ಸಿನಿಮಾ ಇವರ ಜೊತೆ!

  ಇಬ್ಬರು ಸ್ಟಾರ್ ನಟರನ್ನು ಒಂದೆ ಸಿನಿಮಾದಲ್ಲಿ ಕರೆ ತರುವ ಸಾಹಸ ಮಾಡುತ್ತಿದ್ದಾರೆ ಬಾಲಿವುಡ್ ನ ಖ್ಯಾತ ನಿರ್ದೇಶಕ ಸಂಜಯ್ ಲೀಲ ಬನ್ಸಾಲಿ. ಇಬ್ಬರು ಸ್ಟಾರ್ ನಟರನ್ನು ಒಂದೆ ಸಿನಿಮಾದಲ್ಲಿ ಕರೆತರುವ ಪ್ರಯತ್ನ ಯಾರು ಇದುವರೆಗೂ ಮಾಡಿರಲಿಲ್ಲ. ಆದರೀಗ ಅಂತಹ ಸಾಹಸಕ್ಕೆ ಕೈ ಹಾಕಿದ್ದಾರೆ ಬನ್ಸಾಲಿ.

  ಅಂದ್ಹಾಗೆ ಬನ್ಸಾಲಿ ಜೊತೆ ಸಲ್ಲು ಇನ್ಶಲ್ಲಾ ಸಿನಿಮಾ ಮಾಡಬೇಕಿತ್ತು. ಅಲಿಯಾ ಭಟ್ ನಾಯಕಿಯಾಗಿ ಆಯ್ಕೆಯಾಗಿದ್ದರು. ಆದರೆ ಸಲ್ಲು ದಿಢೀರನೆ ಸಿನಿಮಾದಿಂದ ಹಿಂದೆ ಸರಿದಿದ್ದರು. ಇನ್ಶಲ್ಲಾ ಪ್ರೊಜೆಕ್ಟ್ ಸಧ್ಯಕ್ಕೆ ಅಲ್ಲಿಗೆ ನಿಂತಿದೆ. ಬನ್ಸಾಲಿ ಅಲಿಯಾ ಜೊತೆ ಬೇರೆ ಸಿನಿಮಾ ಮಾಡುತ್ತಿದ್ದಾರೆ.

  ಇದರ ನಡುವೆ ಈಗ ಬನ್ಸಾಲಿ ಕಡೆಯಿಂದ ಮತ್ತೊಂದು ಸುದ್ದಿ ಕೇಳಿಬರುತ್ತಿರುವುದು ಸಲ್ಲು ಮತ್ತು ಶಾರುಖ್ ಅಭಿಮಾನಿಗಳಿಗೆ ಸಂಭ್ರಮ ಹೆಚ್ಚಾಗಿದೆ. ಬ್ಯಾಕ್ ಟು ಬ್ಯಾಕ್ ಸೋಲಿನಿಂದ ಕಂಗೆಟ್ಟಿರುವ ಶಾರುಖ್ ಇದುವರೆಗೂ ಯಾವುದೆ ಸಿನಿಮಾ ಒಪ್ಪಿಕೊಂಡಿಲ್ಲ. ಹಾಗಾಗಿ ಸಂಜಯ್ ಲೀಲಾ ಬನ್ಸಾಲಿ ಜೊತೆ ಸಿನಿಮಾ ಮಾಡುತ್ತಾರಾ ಎನ್ನುವ ಕುತೂಹಲ ಹೆಚ್ಚಾಗಿದೆ. ಅಲ್ಲದೆ ಸಲ್ಲು ಈ ಸಿನಿಮಾವನ್ನು ಶಾರುಖ್ ಗಾಗಿ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರ ಸಿನಿಮಾ ಯಾವಾಗ ಸೆಟ್ಟೇರುತ್ತೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

  English summary
  Bollywood actors Salman Khan and Shahrukh Khan reunite after 25 years in Sanjay Leela bhansali's next.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X