ವಾರೆವ್ಹಾ.. ಶಾರುಖ್- ಸಲ್ಲು ಫ್ಯಾನ್ಸ್‌ಗೆ ಗುಡ್‌ನ್ಯೂಸ್; ತೆರೆಮೇಲೆ ಡಬಲ್ ಧಮಾಕ

ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್.. ಬಾಲಿವುಡ್ ಸ್ಟಾರ್ ನಟರು. ಒಟ್ಟೊಟ್ಟಿಗೆ ಚಿತ್ರರಂಗಕ್ಕೆ ಬಂದವರು. ಸೂಪರ್ ಸ್ಟಾರ್‌ಗಳಾಗೆ ನೇಮು, ಫೇಮು ಸಂಪಾದಿಸಿದವರು. ಕೆಲ ವರ್ಷಗಳ ಹಿಂದೆ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿತ್ತು. ಬಳಿಕ ಇಬ್ಬರೂ ಒಂದಾಗಿದ್ದರು.

ಕಳೆದ ವರ್ಷ ಕಿಂಗ್ ಖಾನ್ ನಟಿಸಿದ 'ಪಠಾಣ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. 1000 ಕೋಟಿ ರೂ. ಕಲೆಕ್ಷನ್ ಮಾಡಿತ್ತು. YRF ಸ್ಪೈ ಥ್ರಿಲ್ಲರ್ ಸರಣಿಯ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಗೆಸ್ಟ್ ಅಪಿಯರೆನ್ಸ್ ಮಾಡಿದ್ದರು. ಟೈಗರ್ ರಾಥೋರ್ ಆಗಿ ಅಬ್ಬರಿಸಿದ್ದರು. ಸಲ್ಲು ನಟನೆಯ ಟೈಗರ್ ಸರಣಿ ಚಿತ್ರಗಳು ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಒಂದು ಮಲ್ಟಿಸ್ಟಾರರ್ ಚಿತ್ರದಲ್ಲಿ ಇಬ್ಬರನ್ನು ಒಟ್ಟಿಗೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

Salman Khan and ShahRukh Khan starrer Karan Arjun to re-release on November 22nd

ಅಂದಹಾಗೆ 'ಪಠಾಣ್' ಚಿತ್ರಕ್ಕೂ ಮುನ್ನ 90ರ ದಶಕದಲ್ಲೇ ಸಲ್ಲು- ಶಾರುಖ್ ಒಟ್ಟಿಗೆ ನಟಿಸಿದ್ದರು. 'ಕರಣ್ -ಅರ್ಜುನ್' ಚಿತ್ರದಲ್ಲಿ ಸಹೋದರಾಗಿ ಇಬ್ಬರೂ ನಟಿಸಿದ್ದರು. 1995ರಲ್ಲಿ ಬಂದಿದ್ದ ಈ ಫ್ಯಾಂಟಸಿ ಆಕ್ಷನ್ ಮಸಾಲಾ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಲಿಸ್ಟ್ ಸೇರಿತ್ತು. ಮತ್ತೆ ಈ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲಾಗುತ್ತಿದೆ. ಹೌದು ಹೆಚ್ಚು ಕಮ್ಮಿ 30 ವರ್ಷಗಳ ಬಳಿಕ 'ಕರಣ್ -ಅರ್ಜುನ್' ಸಿನಿಮಾ ರೀ-ರಿಲೀಸ್ ಆಗುತ್ತಿದೆ.

ರಾಕೇಶ್ ರೋಷನ್ ನಿರ್ದೇಶನದ 'ಕರಣ್ -ಅರ್ಜುನ್' ಚಿತ್ರದಲ್ಲಿ ಶಾರುಖ್ ಹಾಗೂ ಸಲ್ಮಾನ್ ಇಬ್ಬರೂ ದ್ವಿಪಾತ್ರದಲ್ಲಿ ನಟಿಸಿದ್ದರು. ರಾಖಿ, ಮಮ್ತಾ ಕುಲಕರ್ಣಿ, ಕಾಜೋಲ್, ಅಮರೀಶ್ ಪುರಿ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದರು. ಅಂದಾಜು 6 ಕೋಟಿ ರೂ. ಬಜೆಟ್ ಸಿನಿಮಾ ಅವತ್ತಿನ ಕಾಲಕ್ಕೆ 45 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು.

Salman Khan and ShahRukh Khan starrer Karan Arjun to re-release on November 22nd

ಸತತ 75 ವಾರಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡು 'ಕರಣ್ -ಅರ್ಜುನ್' ಸಿನಿಮಾ ಸಂಚಲನ ಸೃಷ್ಟಿಸಿತ್ತು. ಸಲ್ಲು-ಶಾರುಖ್ ಮೋಡಿಗೆ ಪ್ರೇಕ್ಷಕರು ಫಿದಾ ಆಗಿದ್ದರು. ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಸಿನಿರಸಿಕರ ಮನಗೆದ್ದಿತ್ತು. ಆ ಬಳಿಕ ಶಾರುಖ್ ಹಾಗೂ ಸಲ್ಮಾನ್ ಇಬ್ಬರೂ ಒಟ್ಟಿಗೆ ನಟಿಸಲೇ ಇಲ್ಲ. ಇಬ್ಬರನ್ನೂ ಒಟ್ಟಿಗೆ ಸೇರಿಸುವ ಪ್ರಯತ್ನ ಸಾಕಷ್ಟು ಬಾರಿ ನಡೆದಿತ್ತು. 'ಪಠಾಣ್' ಚಿತ್ರದಲ್ಲಿ ನಿರ್ದೇಶಕ ಸಿದ್ದಾರ್ಥ್ ಆನಂದ್ ಯಶಸ್ವಿ ಆಗಿದ್ದರು.

ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾಗಿ ಸ್ಟಾರ್ ನಟರ ಚಿತ್ರಗಳು ತೆರೆಗೆ ಬರುವುದು ತಡವಾಗುತ್ತಿದೆ. ಹೊಸಬರ ಚಿತ್ರಗಳನ್ನು ನೋಡಲು ದೊಡ್ಡಮಟ್ಟದಲ್ಲಿ ಜನ ಚಿತ್ರಮಂದಿರಗಳಿಗೆ ಬರ್ತಿಲ್ಲ. ಹಾಗಾಗಿ ಹಳೇ ಹಿಟ್ ಸಿನಿಮಾಗಳನ್ನು ಹೊಸ ರೂಪದಲ್ಲಿ ಮತ್ತೆ ತೆರೆಗೆ ತರುವ ಪ್ರಯತ್ನ ನಡೀತಿದೆ. ತೆಲುಗು, ತಮಿಳು ಹಾಗೂ ಕನ್ನಡದಲ್ಲಿ ಕೂಡ ಹಿಟ್ ಸಿನಿಮಾಗಳನ್ನು ರೀ-ರಿಲೀಸ್ ಮಾಡಲಾಗುತ್ತಿದೆ.

ಇದೀಗ ಬಾಲಿವುಡ್‌ನಲ್ಲಿ ಕೂಡ ಈ ರೀ- ರಿಲೀಸ್ ಟ್ರೆಂಡ್ ಆರಂಭವಾಗುತ್ತಿದೆ. 'ಕರಣ್‌- ಅರ್ಜುನ್' ಚಿತ್ರವನ್ನು ಡಿಜಿಟಲ್ ರೂಪದಲ್ಲಿ ಮತ್ತೆ ಪ್ರೇಕ್ಷಕರ ಮುಂದಿಡುವ ತಯಾರಿ ನಡೆದಿದೆ. ಈಗಾಗಲೇ ಟೀಸರ್ ಸಹ ಬಿಡುಗಡೆ ಆಗಿದೆ. ಶಾರುಖ್- ಅಲ್ಲು ಅಭಿಮಾನಿಗಳು ಈ ಸುದ್ದಿ ಕೇಳಿಯೇ ಥ್ರಿಲ್ ಆಗಿದ್ದಾರೆ. ಇದೇ ನವೆಂಬರ್ 22ಕ್ಕೆ ಈ ಮಲ್ಟಿಸ್ಟಾರರ್ ಸಿನಿಮಾ ಮರು ಬಿಡುಗಡೆ ಆಗಲಿದೆ.

ತಮ್ಮ ತಂದೆಯ ಸಾವಿಗೆ ಸಹೋದರರಾದ ಕರಣ್ ಹಾಗೂ ಅರ್ಜುನ್ ಸೇಡು ತೀರಿಸಿಕೊಳ್ಳುವ ಕಥೆ ಚಿತ್ರದಲ್ಲಿದೆ. ಅಂದಹಾಗೆ ಹೃತಿಕ್ ರೋಷನ್ ತಂದೆ 'ಕರಣ್ -ಅರ್ಜುನ್' ಸಿನಿಮಾ ನಿರ್ದೇಶನ ಮಾಡಿದ್ದರು. ತಂದೆ ಜೊತೆ ಸಹಾಯಕ ನಿರ್ದೇಶಕನಾಗಿ ಹೃತಿಕ್ ಈ ಚಿತ್ರಕ್ಕೆ ಕೆಲಸ ಮಾಡಿದ್ದರು ಎನ್ನುವುದು ವಿಶೇಷ. ಇನ್ನು ಮೊದಲಿಗೆ ಅಜಯ್ ದೇವಗನ್ ಹಾಗೂ ಶಾರುಖ್ ಖಾನ್ ನಟಿಸಬೇಕಿತ್ತಂತೆ. ಬಳಿಕ ಸಲ್ಮಾನ್ ಖಾನ್- ಆಮೀರ್ ಖಾನ್ ನಟಿಸಬೇಕು ಎಂದು ರಾಕೇಶ್ ರೋಷನ್ ಅಂದುಕೊಂಡಿದ್ದರು. ಕೊನೆಗೆ ಅವಕಾಶ ಸಲ್ಲು-ಶಾರುಖ್ ಪಾಲಾಗಿತ್ತು.

More from Filmibeat

English summary
Good news for Salman Khan and Shahrukh Khan fans; Blockbuster Karan Arjun film ready to re- release;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X