ಕಲ್ಲೆಸೆದವರ, ಉಗಿದವರ ಮೇಲೆ ಸಿಟ್ಟಾದ ಸಲ್ಮಾನ್ ಖಾನ್
ನಟ ಸಲ್ಮಾನ್ ಖಾನ್ ಇದ್ದಕ್ಕಿದ್ದಂತೆ ತುಂಬಾ ಸಿಟ್ಟಾಗಿದ್ದಾರೆ. ಇಂದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಹಾಕಿರುವ ಸಲ್ಮಾನ್ ಖಾನ್ ಬಹಳ ಸಿಟ್ಟಿನಿಂದಲೇ ಮಾತನಾಡಿದ್ದಾರೆ.
ಸಲ್ಮಾನ್ ಖಾನ್ ಗೆ ಸಿಟ್ಟು ಬೇಗ ಬರುತ್ತದೆ, ಆ ಸಿಟ್ಟಿನಲ್ಲಿ ಅವರು ಮಾಡಿರುವ ಅನಾಹುತಗಳ ಸಾಲೇ ಇದೆ. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಅವರು ಬದಲಾದಂತೆ ಕಂಡಿದ್ದರು. ಆದರೆ ಈಗ ಮತ್ತೆ ಸಿಟ್ಟಾಗಿದ್ದಾರೆ, ಆದರೆ ಈ ಬಾರಿ ಒಳ್ಳೆಯ ಕಾರಣಕ್ಕೆ ಸಿಟ್ಟಾಗಿದ್ದಾರೆ.
ಲಾಕ್‌ಡೌನ್ ನಿಂದಾಗಿ ತಮ್ಮ ಫಾರ್ಮ್ಂ ಹೌಸ್‌ನಲ್ಲಿ ಸಿಕ್ಕಿಹಾಕಿಕೊಂಡಿರುವ ಸಲ್ಮಾನ್ ಖಾನ್ ಅಲ್ಲಿಂದಲೇ ವಿಡಿಯೋ ಒಂದನ್ನು ಇಂದು ಪ್ರಕಟಿಸಿದ್ದಾರೆ. ಸ್ವಲ್ಪ ದೀರ್ಘವೇ ಇರುವ ವಿಡಿಯೋದಲ್ಲಿ ಬಹಳ ವಿಷಯ ಅವರು ಮಾತನಾಡಿದ್ದಾರೆ.

ಜೀವದ ಜೊತೆ ಚೆಲ್ಲಾಟ ಆಡುವವರ ವಿರುದ್ಧ ಸಲ್ಮಾನ್ ಆಕ್ರೋಶ
ಸದಾ ಜಾಲಿ ಮೂಡ್‌ನಲ್ಲಿ ವಿಡಿಯೋ ಮಾಡುತ್ತಿದ್ದ ಸಲ್ಮಾನ್ ಖಾನ್ ಇಂದು ಬಹಳ ಸಿಟ್ಟಿನಿಂದ ವಿಡಿಯೋ ಮಾಡಿದ್ದಾರೆ. ಅವರ ಸಿಟ್ಟು ಕೆಲವು ಬೇಜವಬ್ದಾರಿಯ ನಾಗರೀಕರ ವಿರುದ್ಧ. ಸರ್ಕಾರದ ಆದೇಶಗಳನ್ನು ಪಾಲಿಸದೆ, ಮತ್ತೊಬ್ಬರ ಜೀವದ ಜೊತೆ ಆಟವಾಡುವವರ ವಿರುದ್ಧ.

ಕಲ್ಲೆಸೆದವರ, ಉಗಿದವರ ವಿರುದ್ಧ ಸಲ್ಮಾನ್ ಸಿಟ್ಟು
ಚಿಕಿತ್ಸೆ ಮಾಡಲು ಬಂದ ಆರೋಗ್ಯ ಕಾರ್ಯಕರ್ತರು, ವೈದ್ಯರ ಮೇಲೆ ಕಲ್ಲೆಸೆದು ದಾಂಧಲೆ ಮಾಡಿದವರು, ಚಿಕಿತ್ಸೆ ನೀಡುತ್ತಿರುವವರ ಮೇಲೆ ಉಗಿಯುತ್ತಿರುವವರ ವಿರುದ್ಧ ಅತೀವ ಸಿಟ್ಟನ್ನು ಸಲ್ಮಾನ್ ತಮ್ಮ ವಿಡಿಯೋದಲ್ಲಿ ಹೊರಹಾಕಿದ್ದಾರೆ.

ವೈದ್ಯರು, ಪೊಲೀಸರಿಗೆ ಸಲ್ಮಾನ್ ಶ್ಲಾಘನೆ
ಪೊಲೀಸರು ವೈದ್ಯರು ಮಾಡುತ್ತಿರುವ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿರುವ ಸಲ್ಮಾನ್ ಖಾನ್, ಅವರು ಜೀವದ ಹಂಗು ಬಿಟ್ಟು ನಿಮ್ಮನ್ನು ಬದಕಿಸಲು ನಿಂತಿದ್ದಾರೆ, ಅವರ ವಿರುದ್ಧವೇ ನೀವು ಕಲ್ಲು ಎಸೆಯುತ್ತೀರಾ? ಎಂದು ಪ್ರಶ್ನೆ ಮಾಡಿದ್ದಾರೆ.

ಪೊಲೀಸ್-ವೈದ್ಯರ ಮೇಲೆ ಹಲ್ಲೆ
ಕೆಲವು ಕಡೆಗಳಲ್ಲಿ ವೈದ್ಯರು, ಆರೋಗ್ಯ ಕಾರ್ಯಕರ್ತರ ಮೇಲೆ ಕಲ್ಲೆಸೆಯಲಾಗಿದೆ, ಪಂಜಾಬ್‌ನಲ್ಲಿಯಂತೂ ಪೊಲೀಸ್ ಒಬ್ಬನ ಕೈಯನ್ನೇ ಕತ್ತರಿಸಲಾಗಿದೆ. ಈ ಎಲ್ಲಾ ಘಟನೆಗಳು ಬೆಳಕಿಗೆ ಬಂದ ನಂತರ ಸಲ್ಮಾನ್ ತಮ್ಮ ವಿಡಿಯೋ ಬಿಡುಗಡೆ ಮಾಡಿದ್ದಾರೆ.


Click it and Unblock the Notifications











