ಯಶ್ 'ಟಾಕ್ಸಿಕ್' ಎದುರು ತಮ್ಮ ಸಿನಿಮಾ ಬಿಡುಗಡೆಗೆ ಹೆದರಿದ್ರಾ ಸಲ್ಮಾನ್ ಖಾನ್?

ಬಾಲಿವುಡ್ ಚಿತ್ರರಂಗದಲ್ಲಿ ಹಬ್ಬದ ದಿನಗಳೆಂದರೆ ದೊಡ್ಡ ಸಿನಿಮಾಗಳ ಸಂಭ್ರಮ. ಅದರಲ್ಲೂ ಸಲ್ಮಾನ್ ಖಾನ್ ಅವರ ಸಿನಿಮಾಗಳು ಈದ್ ದಿನದಂದೇ ಬಿಡುಗಡೆಯಾಗುವುದು ದಶಕಗಳ ಪದ್ಧತಿ. ಈ ಸಂಪ್ರದಾಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಆದರೆ ಈ ಬಾರಿ ಅದು ಸಾಧ್ಯವಾಗುತ್ತಿಲ್ಲ.

ದೊಡ್ಡ ಸಿನಿಮಾಗಳು ಮಾತ್ರ ಗೆಲ್ಲುವ ಕಾಲ ಇದು. ಹಾಗಾಗಿ ದೊಡ್ಡ ಹೀರೋಗಳ ಸಿನಿಮಾಗಳು ಮುಖಾಮುಖಿಯಾದರೆ ಬಾಕ್ಸ್ ಆಫೀಸ್ ಗಳಿಕೆಯ ಮೇಲೆ ಹೊಡೆತ ಬೀಳುತ್ತದೆ. ಹೀಗಾಗಿಯೇ ಚಿತ್ರತಂಡಗಳು ಬಹಳ ಯೋಚಿಸಿ ನಿರ್ಧಾರ ಕೈಗೊಳ್ಳುತ್ತವೆ.

Salman Khan Avoids Eid Clash Shifts Battle of Galwan Release Amid Yash toxic release

ಈ ಬಾರಿ ಸಲ್ಮಾನ್ ಖಾನ್ ಒಂದು ಅಚ್ಚರಿಯ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ಸುದ್ದಿಯು ಸದ್ಯ ಬಿ-ಟೌನ್ ಅಂಗಳದಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ. ಚಿತ್ರಪ್ರೇಮಿಗಳು ಈ ಬದಲಾವಣೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

ಕ್ಲ್ಯಾಶ್ ತಪ್ಪಿಸಿದ ಸಲ್ಲು

ಬಾಲಿವುಡ್‌ನಲ್ಲಿ ಕ್ಲ್ಯಾಶ್ ಎಂದರೆ ಅದು ಕೇವಲ ಸಿನಿಮಾಗಳ ನಡುವಿನ ಸ್ಪರ್ಧೆಯಲ್ಲ. ಅದು ಸ್ಟಾರ್ ನಟರ ಪ್ರತಿಷ್ಠೆಯ ಕಣ ಕೂಡ ಹೌದು. ಮುಂಬರುವ ಈದ್ ಹಬ್ಬದಂದು ಸಲ್ಮಾನ್ ಖಾನ್ ಅವರ ಬಹುನಿರೀಕ್ಷಿತ ಚಿತ್ರವೊಂದು ತೆರೆಗೆ ಬರಬೇಕಿತ್ತು. ಆದರೆ ಅದೇ ಸಮಯದಲ್ಲಿ ರಣವೀರ್ ಸಿಂಗ್ ಮತ್ತು ಯಶ್ ಅವರ ಸಿನಿಮಾಗಳು ಕೂಡ ರೆಡಿಯಾಗಿವೆ.

Salman Khan Avoids Eid Clash Shifts Battle of Galwan Release Amid Yash toxic release

ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಮತ್ತು ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾಗಳು ಭಾರಿ ನಿರೀಕ್ಷೆ ಮೂಡಿಸಿವೆ. ಇವೆರಡೂ ಚಿತ್ರಗಳು ಈದ್ ಸಮಯದಲ್ಲಿ ಬರುವುದಕ್ಕೆ ಸಜ್ಜಾಗಿವೆ. ಮಾರ್ಚ್ 19ರಂದು ಸಿನಿಮಾಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಇದನ್ನು ಗಮನಿಸಿದ ಸಲ್ಮಾನ್ ಖಾನ್ ಅನಗತ್ಯ ಪೈಪೋಟಿಯನ್ನು ತಪ್ಪಿಸಲು ಮುಂದಾಗಿದ್ದಾರೆ.

ರಿಲೀಸ್ ಡೇಟ್ ಬದಲು

ಈಗ ಪ್ರಮುಖ ವಿಷಯವೇನೆಂದರೆ ಸಲ್ಮಾನ್ ಖಾನ್ ತಮ್ಮ 'ಬ್ಯಾಟಲ್ ಆಫ್ ಗಲ್ವಾನ್' ಸಿನಿಮಾವನ್ನು ಆಲಿಯಾ ಭಟ್ ನಟನೆಯ 'ಅಲ್ಪಾ' ಸಿನಿಮಾ ನಿಗದಿಯಾಗಿದ್ದ ದಿನಾಂಕಕ್ಕೆ ಶಿಫ್ಟ್ ಮಾಡಿದ್ದಾರೆ. ವೈ ಆರ್ ಎಫ್ ಸ್ಪೈ ಯೂನಿವರ್ಸ್ನ ಈ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿತ್ತು. ಆದರೆ ಈಗ ಆಲಿಯಾ ಭಟ್ ಅವರ ಈ ಆಕ್ಷನ್ ಸಿನಿಮಾದ ದಿನಾಂಕವನ್ನು ಸಲ್ಮಾನ್ ಸಿನಿಮಾ ಪಡೆದುಕೊಂಡಿದೆ ಎನ್ನಲಾಗಿದೆ.

ಇದರಿಂದಾಗಿ ಆಲಿಯಾ ಭಟ್ ಅಭಿಮಾನಿಗಳಿಗೆ ಸ್ವಲ್ಪ ನಿರಾಸೆಯಾಗಿದೆ. ಆದರೆ ಸಲ್ಮಾನ್ ಖಾನ್ ಅವರಂತಹ ದೊಡ್ಡ ನಟನ ಸಿನಿಮಾ ಬರುವಾಗ ಚಿತ್ರಮಂದಿರಗಳ ಹಂಚಿಕೆಯಲ್ಲಿ ಯಾವುದೇ ಗೊಂದಲ ಇರಬಾರದು ಎಂಬುದು ನಿರ್ಮಾಪಕರ ಪ್ಲ್ಯಾನ್. ಈ ಬದಲಾವಣೆಯು ಬಾಲಿವುಡ್ ವ್ಯವಹಾರದಲ್ಲಿ ಹೊಸ ತಿರುವು ನೀಡಲಿದೆ.

ಹೊಸ ಅಪ್ಡೇಟ್...

'ಬ್ಯಾಟಲ್ ಆಫ್ ಗಲ್ವಾನ್' ಚಿತ್ರವು ಭರ್ಜರಿ ಆಕ್ಷನ್ ಕಂಟೆಂಟ್ ಹೊಂದಿದೆ. ಹಬ್ಬದ ಸಂಭ್ರಮದಲ್ಲಿ ಒಟ್ಟೊಟ್ಟಿಗೆ ಸಿನಿಮಾ ರಿಲೀಸ್ ಮಾಡುವುದಕ್ಕಿಂತ, ಬೇರೆ ದಿನಾಂಕದಲ್ಲಿ ಏಕಾಂಗಿಯಾಗಿ ಬಂದು ಅಬ್ಬರಿಸುವುದು ಸಲ್ಲು ಪ್ಲ್ಯಾನ್. ಇದರಿಂದ ಈ ಚಿತ್ರಕ್ಕೆ ಹೆಚ್ಚಿನ ಸ್ಕ್ರೀನ್‌ಗಳು ಸಿಗಲಿವೆ.

ಸದ್ಯಕ್ಕಂತೂ 'ಬ್ಯಾಟಲ್ ಆಫ್ ಗಲ್ವಾನ್' ಸಿನಿಮಾ ಸುದ್ದಿಯು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿಸಿದೆ. ಯಶ್ ಮತ್ತು ರಣವೀರ್ ಸಿಂಗ್ ನಡುವಿನ ಪೈಪೋಟಿ ಈಗ ಹೇಗಿರುತ್ತದೆ ಎಂದು ನೋಡಲು ಸಿನಿಮಾ ಪ್ರೇಮಿಗಳು ಕಾಯುತ್ತಿದ್ದಾರೆ. ಸಲ್ಮಾನ್ ಖಾನ್ ಅವರ ಈ ಚಾಣಾಕ್ಷ ನಡೆಗೆ ಸಿನಿಮಾ ಪಂಡಿತರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಕದನ ಕುತೂಹಲ

ಗೀತು ಮೋಹನ್ ದಾಸ್ ನಿರ್ದೇಶನ 'ಟಾಕ್ಸಿಕ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಮತ್ತೊಂದು ಕಡೆ ರಣ್‌ವೀರ್ ಸಿಂಗ್ ನಟನೆಯ 'ಧುರಂಧರ್' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ. ಪಾರ್ಟ್‌-2 ಸಿನಿಮಾ ಯಶ್ ನಟನೆಯ 'ಟಾಕ್ಸಿಕ್' ಎದುರು ಬರುತ್ತಿರುವುದು ಸಹಜವಾಗಿಯೇ ಕುತೂಹಲ ಹುಟ್ಟಾಕ್ಕಿದೆ.

More from Filmibeat

Read more about: salman khan toxic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X