For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್ ಆಗಿ ಮತ್ತೆ ಬಂದ ಸಲ್ಮಾನ್: ಈ ಬಾರಿ ಡಿಫರೆಂಟ್ ಗುರು

  |

  ಕೊರೊನಾ ಕಾರಣಕ್ಕೆ ಮನೊರಂಜನಾ ಉದ್ಯಮ ಸಂಪೂರ್ಣ ಸ್ತಬ್ಧವಾಗಿತ್ತು. ಆದರೀಗ ನಿಧಾನಕ್ಕೆ ಗರಿಬಿಚ್ಚುತ್ತಿದ್ದು, ಧಾರಾವಾಹಿಗಳ ನಂತರ ರಿಯಾಲಿಟಿ ಶೋಗಳು ಸಹ ಚಿತ್ರೀಕರಣ ಪ್ರಾರಂಭ ಮಾಡಿವೆ.

  Unseen “Nightout” Behind the scene video | Filmibeat Kannada

  ಕಿರುತೆರೆಯ ಸಖತ್ ಜನಪ್ರಿಯ ಶೋ ಬಿಗ್‌ಬಾಸ್ ಸಹ ಪ್ರಾರಂಭವಾಗುತ್ತಿದೆ. ಈಗಾಗಲೇ ತೆಲುಗಿನಲ್ಲಿ ಪ್ರೊಮೋ ಶೂಟ್ ಆಗಿದ್ದು, ಇದೀಗ ಹಿಂದಿಯಲ್ಲಿ ಟೀಸರ್‌ ಸಹ ಬಿಡುಗಡೆ ಆಗಿಬಿಟ್ಟಿದೆ. ಸೆಪ್ಟೆಂಬರ್ 20 ರಿಂದ ಬಿಗ್‌ಬಾಸ್ ಪ್ರಸಾರ ಆರಂಭವಾಗಲಿದೆಯಂತೆ.

  ಬಿಗ್‌ಬಾಸ್ 4 ಪ್ರೋಮೊ ಚಿತ್ರೀಕರಣ: ಮುಂಜಾಗ್ರತೆ ಕ್ರಮ ಹೀಗಿವೆ

  ಸದ್ದಿಲ್ಲದೆ ಸಲ್ಮಾನ್ ಖಾನ್ ಬಿಗ್‌ಬಾಸ್ 2020 ಗೆ ಟೀಸರ್‌ ಚಿತ್ರೀಕರಣ ಮುಗಿಸಿದ್ದು, ಕಲರ್ಸ್ ಚಾನೆಲ್ ಇಂದು ಬಿಡುಗಡೆ ಸಹ ಮಾಡಿದೆ. ಟೀಸರ್‌ನಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಸಲ್ಮಾನ್ ಖಾನ್.

  ಬಿಗ್‌ಬಾಸ್‌ನ 14 ನೇ ಸರಣಿ

  ಬಿಗ್‌ಬಾಸ್‌ನ 14 ನೇ ಸರಣಿ

  ಇದೀಗ 2020 ರಲ್ಲಿ ಪ್ರಸಾರವಾಗುವ ಬಿಗ್‌ಬಾಸ್ 14 ನೇ ಸರಣಿ ಆಗಿದ್ದು, ಈ ಬಾರಿಯೂ ಸಲ್ಮಾನ್ ಖಾನ್ ನಿರೂಪಕರಾಗಿದ್ದಾರೆ. ಟೀಸರ್‌ನಲ್ಲಿ ಸಖತ್ ಡಿಫರೆಂಟ್ ಆಗಿ ಕಾಣುತ್ತಿರುವ ಸಲ್ಮಾನ್, ಈ ಬಾರಿಯ ಬಿಗ್‌ಬಾಸ್ ಸಹ ಡಿಫರೆಂಟ್ ಆಗಿರಲಿದೆ ಎಂದಿದ್ದಾರೆ.

  ತೋಟದಲ್ಲಿ ಕೆಲಸ ಮಾಡುತ್ತಿರುವ ಸಲ್ಮಾನ್ ಖಾನ್

  ತೋಟದಲ್ಲಿ ಕೆಲಸ ಮಾಡುತ್ತಿರುವ ಸಲ್ಮಾನ್ ಖಾನ್

  ಪ್ರೋಮೋದಲ್ಲಿ ಕಾಣುತ್ತಿರುವಂತೆ, ಸಲ್ಮಾನ್ ಖಾನ್ ತೋಟದಲ್ಲಿ ಭತ್ತ ನೆಡುತ್ತಿದ್ದಾರೆ, ಟ್ರಾಕ್ಟರ್ ಓಡುತ್ತಿದ್ದಾರೆ. ಟೀಸರ್‌ನಲ್ಲಿ ಸಲ್ಮಾನ್ ಹೇಳುವಂತೆ. ಲಾಕ್‌ಡೌನ್ ನಿಂದಾಗಿ ಬಿಡುವು ಪಡೆದುಕೊಂಡು ಕೃಷಿಯಲ್ಲಿ ತೊಡಗಿಕೊಂಡೆ, ಟ್ರಾಕ್ಟರ್ ಓಡಿಸಿದೆ. ಆದರೆ ಈಗ ಮತ್ತೆ ಪರಿಸ್ಥಿತಿ ಬದಲಾಗಿದೆ. ಬಿಗ್‌ಬಾಸ್ ಮತ್ತೆ ಬರುತ್ತಿದೆ' ಎಂದಿದ್ದಾರೆ.

  'ಬಿಗ್ ಬಾಸ್'ಗೆ ಎಂಟ್ರಿ ಕೊಡ್ತಾರೆ ಎಂದಿದ್ದಕ್ಕೆ ಸಿಟ್ಟಾದ ನಟಿ ಶ್ರದ್ಧಾ ಹೇಳಿದ್ದೇನು?

  'ಕೊರೊನಾ ಪರಿಸ್ಥಿತಿಯನ್ನು ಉಲ್ಟಾ ಮಾಡಲಿದೆ ಬಿಗ್‌ಬಾಸ್'

  'ಕೊರೊನಾ ಪರಿಸ್ಥಿತಿಯನ್ನು ಉಲ್ಟಾ ಮಾಡಲಿದೆ ಬಿಗ್‌ಬಾಸ್'

  ಇಷ್ಟು ದಿನ ಕೊರೊನಾ ಕಾರಣದಿಂದ ಇದ್ದ ಪರಿಸ್ಥಿತಿಯನ್ನು ಬಿಗ್‌ಬಾಸ್ ಉಲ್ಟಾ ಮಾಡಿಬಿಡುತ್ತದೆ ಎಂಬರ್ಥದ ಘೋಷವಾಕ್ಯದೊಂದಿಗೆ ಹಿಂದಿ ಬಿಗ್‌ಬಾಸ್ 14 ಪ್ರಾರಂಭವಾಗುತ್ತಿದೆ. ಯಾರ್ಯಾರು ಸ್ಪರ್ಧಾಳುಗಳಾಗಲಿದ್ದಾರೆ ಎಂಬುದು ಇನ್ನೂ ಖಾತ್ರಿಯಾಗಿಲ್ಲ.

  ತೆಲುಗಿನ ಬಿಗ್‌ಬಾಸ್ ಪ್ರಾರಂಭವಾಗಲಿದೆ

  ತೆಲುಗಿನ ಬಿಗ್‌ಬಾಸ್ ಪ್ರಾರಂಭವಾಗಲಿದೆ

  ತೆಲುಗಿನಲ್ಲಿಯೂ ಸಹ ಬಿಗ್‌ಬಾಸ್ 5 ಪ್ರಾರಂಭವಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೆ ಶೋ ನ ನಿರೂಪಕ ನಾಗಾರ್ಜುನ ಅವರು ಟೀಸರ್ ಚಿತ್ರೀಕರಣವನ್ನು ಮುಗಿಸಿದ್ದಾರೆ. ಆದರೆ ಕನ್ನಡ ಬಿಗ್‌ಬಾಸ್‌ ಬಗ್ಗೆ ಈ ವರೆಗೆ ಯಾವುದೇ ಅಪ್‌ಡೇಟ್ ದೊರೆತಿಲ್ಲ.

  ಬಿಗ್‌ಬಾಸ್‌ ವಿರುದ್ಧ ಸರಣಿ ಆರೋಪ ಮಾಡಿದ 'ಕಿರಾತಕ' ನಾಯಕಿ

  English summary
  Salman Khan back again with Bigg Boss 14. Teaser released by the channel on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X