For Quick Alerts
  ALLOW NOTIFICATIONS  
  For Daily Alerts

  'ರಾಧೆ' ಸಿನಿಮಾದ ಚಿತ್ರೀಕರಣದಲ್ಲಿ ಸಲ್ಮಾನ್ ಖಾನ್: ಮೇಕಿಂಗ್ ಪೋಟೋಗಳು ವೈರಲ್

  |

  ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ 7 ತಿಂಗಳ ಬಳಿಕ ಚಿತ್ರೀಕರಣಕ್ಕೆ ಮರಳಿದ್ದಾರೆ. ಕೊರೊನಾ ಲಾಕ್ ಡೌನ್ ನಿಂದ ಚಿತ್ರೀಕರಣ ನಿಲ್ಲಿಸಿದ್ದ ಸಲ್ಮಾನ್ ಖಾನ್ ಇದೀಗ ಮತ್ತೆ ಶೂಟಿಂಗ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸಲ್ಲು ಸದ್ಯ ಬಹುನಿರೀಕ್ಷೆಯ 'ರಾಧೆ' ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

  'ರಾಧೆ' ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಸಲ್ಮಾನ್ ಖಾನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಿವೆ. ಮುನ್ನಚ್ಚರಿಕೆ ಕ್ರಮಗಳೊಂದಿಗೆ ರಾಧೆ ಸಿನಿಮಾತಂಡ ಚಿತ್ರೀಕರಣದಲ್ಲಿ ಭಾಗಿಯಾಗಿದೆ. ಚಿತ್ರದಲ್ಲಿ ಸಲ್ಮಾನ್ ಖಾನ್ ಗೆ ನಾಯಕಿಯಾಗಿ ದಿಶಾ ಪಟಾನಿ ಕಾಣಿಸಿಕೊಳ್ಳುತ್ತಿದ್ದು, ದಿಶಾ ಸಹ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

  ಬಿಗ್‌ಬಾಸ್ ಮನೆಯಲ್ಲಿ ಫುಲ್ ರೊಮ್ಯಾನ್ಸ್‌: ಅತಿಯಾಯ್ತು ಎಂದ ನೆಟ್ಟಿಗರುಬಿಗ್‌ಬಾಸ್ ಮನೆಯಲ್ಲಿ ಫುಲ್ ರೊಮ್ಯಾನ್ಸ್‌: ಅತಿಯಾಯ್ತು ಎಂದ ನೆಟ್ಟಿಗರು

  ಸಲ್ಲು ಜೊತೆಗೆ ಜಾಕಿ ಶ್ರಾಫ್, ರಣದೀಪ್ ಹೂಡ ಸೇರಿದಂತೆ ಅನೇಕರು ರಾಧೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದು ಎಲ್ಲರೂ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಚಿತ್ರೀಕರಣ ಪ್ರಾರಂಭಿಸಿದ ಖುಷಿಯಲ್ಲಿ ಸಿನಿಮಾತಂಡ ಮೇಕಿಂಗ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಸಲ್ಮಾನ್ ಶೂಟಿಂಗ್ ಪ್ರಾರಂಭ ಮಾಡಿದ ಫೋಟೋವನ್ನು ಶೇರ್ ಮಾಡಿದ್ದರು. ಇದೀಗ ಮೇಕಿಂಗ್ ಫೋಟೋಗಳು ವೈರಲ್ ಆಗಿವೆ.

  Salman Khan Back To Radhe Movie Set, Making Photos Goes Viral In Social Media
  Sanjana Ragini :ಇವರಿಬ್ಬರ ಜಗಳ ನೋಡಿ ಪೊಲೀಸರೇ ಶಾಕ್ | Filmibeat Kannada

  ಸಲ್ಮಾನ್ ಖಾನ್ ಸಿನಿಮಾ ಜೊತೆಗೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲೂ ಬ್ಯುಸಿಯಾಗಿದ್ದಾರೆ. ಬಿಗ್ ಬಾಸ್-14 ಪ್ರಾರಂಭವಾಗಿದ್ದು, ಈಗಾಗಲೇ ಪ್ರಸಾರವಾಗುತ್ತಿದೆ. ಸಲ್ಮಾನ್ ಖಾನ್ ಸಿನಿಮಾ ಪ್ರಾರಂಭಿಸುವ ಮೊದಲೆ ಬಿಗ್ ಬಾಸ್ ರಿಯಾಲಿಟಿ ಶೋ ಚಿತ್ರೀಕರಣ ಪ್ರಾರಂಭಮಾಡಿದ್ದಾರೆ. ಸಿನಿಮಾ, ಬಿಗ್ ಬಾಸ್ ಜೊತೆಗೆ ಸಲ್ಮಾನ್ ವೆಬ್ ಸೀರಿಸ್ ಸಹ ನಿರ್ಮಾಣ ಮಾಡುತ್ತಿದ್ದಾರೆ. ಲಾಕ್ ಡೌನ್ ಸಡಿಲಿಕೆ ಆಗುತ್ತಿದ್ದಂತೆ ಸಲ್ಮಾನ್ ಖಾನ್ ಸಖತ್ ಬ್ಯುಸಿಯಾಗಿದ್ದಾರೆ.

  English summary
  Salman Khan back to Radhe movie set. Radhe movie making photos goes viral in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X