For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿ ಫೋನ್ ಕಿತ್ತುಕೊಂಡ ಸಲ್ಮಾನ್: ಕ್ಷಮೆ ಕೇಳದಿದ್ದರೆ ಗೋವಾದಿಂದ ನಿಷೇಧ

  |

  ಅಭಿಮಾನಿಗಳಿಗೆ ನೆಚ್ಚಿನ ನಟರನ್ನು ನೋಡುವುದೆ ದೊಡ್ಡ ಸಂಭ್ರಮ. ಅದರಲ್ಲೂ ತಮ್ಮ ಕಣ್ಣ ಮುಂದೆ ಬಂದರೆ ಸುಮ್ಮನಿರುತ್ತಾರಾ. ನೆಚ್ಚಿನ ನಟನ ಜೊತೆ ಸೆಲ್ಫಿಗಾಗಿ ಮುಗಿ ಬೀಳುತ್ತಾರೆ. ಕೆಲವೊಮ್ಮೆ ಇದು ಸ್ಟಾರ್ಸ್ ಗೆ ಕಿರಿ ಕಿರಿ ಉಂಟಾಗಿದ್ದು ಇದೆ. ಸ್ಟಾರ್ ನಟರು ಅಭಿಮಾನಿಗಳ ಮೇಲೆ ಸಿಟ್ಟಾಗುತ್ತಾರೆ. ಇತ್ತೀಚಿಗೆ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ವಿಚಾರದಲ್ಲೂ ಹೀಗೆ ಆಗಿದೆ.

  ಹೌದು, ಗೋವಾ ಏರ್ ಪೋರ್ಟ್ ನಿಂದ ಹೊರಗೆ ಬರುವಾಗ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿ ಮೇಲೆ ಸಿಡಿಮಿಡಿಗೊಂಡಿದ್ದಲ್ಲದೆ, ಅಭಿಮಾನಿಯ ಫೋನ್ ಕಿತ್ತುಕೊಂಡು ಹೋಗಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಘಟನೆ ನೋಡಿ ಅನೇಕರು ಸಲ್ಮಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  ಅಭಿಮಾನಿಯ ಸೆಲ್ಫಿ: ವಿಮಾನ ನಿಲ್ದಾಣದಲ್ಲಿ ಸಲ್ಮಾನ್ ಖಾನ್ ಸಿಡಿಮಿಡಿ.!ಅಭಿಮಾನಿಯ ಸೆಲ್ಫಿ: ವಿಮಾನ ನಿಲ್ದಾಣದಲ್ಲಿ ಸಲ್ಮಾನ್ ಖಾನ್ ಸಿಡಿಮಿಡಿ.!

  ವ್ಯಕ್ತಿಗೆ ಅವಮಾನ ಮಾಡಿದ್ದಾರೆ, ಸಲ್ಮಾನ್ ಖಾನ್ ಬಹಿರಂಗವಾಗಿ ಕ್ಷಮೆಯಾಚಿಸಬೇಕು, ಇಲ್ಲವಾದರೆ ಗೋವಾ ಪ್ರವೇಶಿಸದಂತೆ ಸಲ್ಮಾನ್ ಖಾನ್ ಅನ್ನು ನಿಷೇಧಿಸಬೇಕಂದು ನ್ಯಾಶನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನು ಒತ್ತಾಯಿಸಿದ್ದಾರೆ.

  ಇನ್ನು ಗೋವಾದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಂಸದ ನರೇಂದ್ರ ಸವಾಯ್ಕರ್ ಕೂಡ ಖಾನ್ ವರ್ತನೆ ಖಂಡಿಸಿದ್ದು, ಕ್ಷಮೆಯಾಚಿಸಬೇಕೆಂದು ಹೇಳಿದ್ದಾರೆ. ಅಂದ್ಹಾಗೆ ಸಲ್ಮಾನ್ ಖಾನ್ ಬಳಿ ಸೆಲ್ಫಿ ತೆಗೆದುಕೊಳ್ಳಲು ಬಂದ ವ್ಯಕ್ತಿ ಏರ್ ಪೋರ್ಟ್ ಸಿಬ್ಬಂದಿ.

  ಈ ಬಗ್ಗೆ ಏರ್ ಪೋರ್ಟ್ ನ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದು, "ಈ ಬಗ್ಗೆ ಯಾವುದೆ ದೂರು ದಾಖಲಾಗಿಲ್ಲ. ಆದರೆ ವಿಡಿಯೋ ವೈರಲ್ ಆದ ನಂತರ ನಾವು ಘಟನೆ ಬಗ್ಗೆ ವಿಚಾರಿಸಿ ನೋಡಿ ಅಧಿಕೃತ ಗೊಳಿಸಿದ್ದೀವಿ" ಎಂದು ಹೇಳಿದ್ದಾರೆ.

  English summary
  National Students Union Of India wants salman Khan banned from Goa for Bollywood actor salman khan misbehave with fan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X