ವಿಶೇಷ ಫೋಟೋ ಶೇರ್ ಮಾಡಿ ಕತ್ರೀನಾಗೆ ಬರ್ತಡೇ ವಿಶ್ ಮಾಡಿದ ಸಲ್ಮಾನ್ ಖಾನ್
ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಮತ್ತು ಕತ್ರೀನಾ ಕೈಫ್ ಸ್ನೇಹ ಸಂಬಂಧದ ಬಗ್ಗೆ ಈ ಹಿಂದೆ ಸಾಕಷ್ಟು ಸುದ್ದಿಯಾಗಿತ್ತು. ಇಬ್ಬರು ಡೇಟಿಂಗ್ ನಲ್ಲಿದ್ದರು ಎಂದು ಹೇಳಲಾಗುತ್ತಿತ್ತು. ಕೆಲವು ವರ್ಷಗಳ ಹಿಂದೆ ಸಲ್ಮಾನ್ ಖಾನ್ ಗರ್ಲ್ ಫ್ರೆಂಡ್ ಆಂತಾನೆ ಗುರುತಿಸಿಕೊಳ್ಳುತ್ತಿದ್ದ ಕತ್ರೀನಾ ಆ ನಂತರ ಕೊಂಚ ಅಂತರ ಕಾಯ್ದುಕೊಂಡಿದ್ದರು.
Recommended Video
ರಣಬೀರ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದ ಕತ್ರೀನಾ ಸಲ್ಮಾನ್ ಖಾನ್ ಜೊತೆಗಿನ ಸ್ನೇಹ ಮುರಿದುಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ಯಾವಾಗ ರಣಬೀರ್ ಮತ್ತು ಕತ್ರೀನಾ ಕೈಫ್ ನಡುವೆ ಬ್ರೇಕ್ ಆಯ್ತೋ ಬಳಿಕ ಮತ್ತೆ ಸಲ್ಮಾನ್ ಜೊತೆ ಉತ್ತಮ ಸ್ನೇಹ ಬೆಳೆಸಿಕೊಂಡಿದ್ದಾರೆ.
ಈಗ ಇಬ್ಬರು ಉತ್ತಮ ಸ್ನೇಹಿತರಾಗಿದ್ದಾರೆ. ಇಂದು ಕತ್ರೀನಾ ಕೈಫ್ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 37ನೇ ವಸಂತಕ್ಕೆ ಕಾಲಿಟ್ಟ ಕತ್ರೀನಾಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ವಿಶ್ ಮಾಡುತ್ತಿದ್ದಾರೆ. ಅಲಿಯಾ ಭಟ್, ಅನುಷ್ಕಾ ಶರ್ಮಾ, ದೀಪಿಕಾ ಪಡುಕೋಣೆ ಸೇರಿದ್ದಂತೆ ಅನೇಕರು ಶುಭಹಾರೈಸುತ್ತಿದ್ದಾರೆ.

ನಟ ಸಲ್ಮಾನ್ ಖಾನ್ ಸಹ ಹುಟ್ಟುಹಬ್ಬ ಶುಭಾಶಯ ಕೋರಿದ್ದಾರೆ. ಕತ್ರೀನಾ ಜೊತೆಗಿನ ಫೋಟೋವನ್ನು ಶೇರ್ ಮಾಡಿ "ಹುಟ್ಟುಹಬ್ಬ ಶುಭಾಶಯಗಳು ಕತ್ರೀನಾ" ಎಂದು ಬರೆದುಕೊಂಡಿದ್ದಾರೆ.
ಸಲ್ಮಾನ್ ಮತ್ತು ಕತ್ರೀನಾ ಅವರದ್ದು ಹಿಟ್ ಪೇರ್. ಇಬ್ಬರು ಒಟ್ಟಿಗೆ ನಟಿಸಿರುವ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸಕ್ಸಸ್ ಕಾಣುವ ಜೊತೆಗೆ ಇಬ್ಬರ ಜೋಡಿಯೂ ಅಷ್ಟೆ ಖ್ಯಾತಿಗಳಿಸಿದೆ. ಮೈನೆ ಪ್ಯಾರ್ ಕಿಯಾ, ಏಕ್ತಾ ಟೈಗರ್, ಟೈಗರ್ ಜಿಂದಾ ಹೈ, ಭಾರತ್ ಸಿನಿಮಾಗಳಲ್ಲಿ ಸಲ್ಮಾನ್ ಮತ್ತು ಕತ್ರೀನಾ ಅಭಿಮಾನಿಗಳನ್ನು ಮೋಡಿ ಮಾಡಿದ್ದಾರೆ. ಆದರೀಗ ಕತ್ರೀನಾ ಹೆಸರು ನಟ ವಿಕ್ಕಿ ಕೌಸಲ್ ಜೊತೆ ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಇಬ್ಬರು ಎಲ್ಲಿಯೂ ಮಾತನಾಡಿಲ್ಲ.


Click it and Unblock the Notifications











