»   » ಸ್ಟುಡಿಯೋ ಸೆಕ್ಯುರಿಟಿ ಬಗ್ಗೆ ಸಲ್ಲೂ ಹೇಳಿದ್ದೇನು?

ಸ್ಟುಡಿಯೋ ಸೆಕ್ಯುರಿಟಿ ಬಗ್ಗೆ ಸಲ್ಲೂ ಹೇಳಿದ್ದೇನು?

Posted By:
Subscribe to Filmibeat Kannada
ಬಾಲಿವುಡ್ ಸೂಪರ್ ಸ್ಟಾರ್ ಗಳಲ್ಲಿ ಒಬ್ಬರಾದ ಸಲ್ಮಾನ್ ಖಾನ್ 'ಯಶ್ ರಾಜ್ ಫಿಲಂ' ಬ್ಯಾನರಿಗೆ ಸೂಚನೆ ನೀಡಿದ್ದಾರೆ. ಮೊದಲ ಬಾರಿಗೆ 'ಏಕ್ ಥಾ ಟೈಗರ್' ಚಿತ್ರದ ಮೂಲಕ ಯಶ್ ರಾಜ್ ಫಿಲಂ ನಲ್ಲಿ ಕೆಲಸ ಮಾಡಿರುವ ಸಲ್ಲೂ, ಸೆಕ್ಯರಿಟಿ ಬಗ್ಗೆ ಅಸಾಮಾಧಾನಗೊಂಡಿದ್ದಾರೆ. ಸ್ಟುಡಿಯೋ ಒಳಗಡೆ ಕೂಡ ಸೆಕ್ಯುರಿಟಿ ನೀಡಬೇಕೆಂದು ಸೂಚಿಸಿರುವ ಸಲ್ಮಾನ್ ಖಾನ್, ಯಶ್ ರಾಜ್ ಬ್ಯಾನರ್ ತಮ್ಮ ಸೆಕ್ಯರಿಟಿ ಏಜೆನ್ಸಿಯನ್ನು ಬದಲಾಯಿಸಬೇಕೆಂಬ ಬೇಡಿಕೆಯಿಟ್ಟಿದ್ದಾರೆ.

ಸುದ್ದಿ ಮೂಲದ ಪ್ರಕಾರ "ತಮ್ಮ ಮೇಕಪ್ ಮ್ಯಾನ್ ಸುದೇಶ್ ನಾಗ್ (ರಾಜು) ಸೆಕ್ಯುರಿಟಿಯನ್ನು ತಮಗೆ ಸ್ಟುಡಿಯೋ ಒಳಗಡೆ ನೀಡಲು ಸೂಚಿಸಿರುವ ಸಲ್ಲೂ ಇಷ್ಟು ದಿನ ಈ ಕೆಲಸ ಮಾಡುತ್ತಿದ್ದ ರೋನಿತ್ ರಾಯ್ ಕಂಪನಿ ಬಗ್ಗೆ ಎಲ್ಲೂ ಕೆಟ್ಟದಾಗಿ ಮಾತನಾಡಿಲ್ಲ. ತಮಗೆ ನೀಡಲಾಗುವ ಸೆಕ್ಯುರಿಟಿ ಬಗ್ಗೆ ಮಾತನಾಡುವ ತಮ್ಮ ಹಕ್ಕನ್ನು ಉಪಯೋಗಿಸಿಕೊಂಡು ಸಲ್ಲೂ ಈ ಮಾತುಗಳನ್ನು ಹೇಳಿದ್ದಾರೆ ಅಷ್ಟೇ!. ಸಲ್ಲೂರ ಸೂಚನೆಯನ್ನು ವೈಆರ್ ಎಫ್ (YRF) ತಕ್ಷಣವೇ ಪಾಲಿಸಿದೆ.

ಸಲ್ಮಾನ್ ಖಾನ್ ಅಭಿನಯದ ಇತ್ತೀಚಿಗೆ ಬಿಡುಗಡೆಯಾಗಿರುವ 'ಏಕ್ ಥಾ ಟೈಗರ್' ಚಿತ್ರವು ರು. 199 ಕೋಟಿ ಗಳಿಸಿ ಸಾಕಷ್ಟು ಸುದ್ದಿ ಮಾಡಿದೆ. ಆದರೆ ಬಾಲಿವುಡ್ ಚಿತ್ರಜಗತ್ತಿನ ಸಾರ್ವಕಾಲಿಕ ದಾಖಲೆಯಾದ ಅಮೀರ್ ಖಾನ್ ಅವರ 'ತ್ರೀ ಈಡಿಯಟ್ಸ್' ದಾಖಲೆಯನ್ನು ಮಾತ್ರ ಮುರಿಯಲು ಸಲ್ಲೂರ ಈ ಚಿತ್ರ ವಿಫಲವಾಗಿದೆ. ಅದೇನೆ ಇರಲಿ, ಸಲ್ಲೂ ಚಿತ್ರವೊಂದು ಈ ಮಟ್ಟಿಗೆ ಸೂಪರ್ ಹಿಟ್ ದಾಖಲಿಸಿರುವುದು ಹೊಸ ಬೆಳವಣಿಗೆಯೇ ಸರಿ.

'ಏಕ್ ಥಾ ಟೈಗರ್' ಚಿತ್ರದಲ್ಲಿ ಸಲ್ಲೂ ಜೋಡಿಯಾಗಿ ಅಭಿನಯಸಿರವ ಕತ್ರಿನಾ ಕೈಫ್ ಈಗ ಬಾಲಿವುಡ್ ನಲ್ಲಿ ಬಹುಬೇಡಿಕೆಯ ತಾರೆಯಾಗಿ ಹೊರಹೊಮ್ಮಿದ್ದಾರೆ. ಈ ಮೊದಲೂ ಅವರಿಗೆ ಸಾಕಷ್ಟು ಬೇಡಿಕೆ ಇತ್ತಾದರೂ ಈ ಮಟ್ಟಿಗೆ ಕತ್ರಿನಾ ಮಿಂಚಿರಲಿಲ್ಲ. ಈ ಚಿತ್ರದ ನಂತರ ಕತ್ರಿನಾ ಬಾಲಿವುಡ್ ನಿರ್ಮಾಪಕರು ಹಾಗೂ ನಿರ್ದೇಶಕರ ಪಾಲಿನ ಹಾಟ್ ಫೇವರೆಟ್! ಒಟ್ಟಿನಲ್ಲಿ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಹಣೆಬರಹ ಬದಲಾದಂತೆ ಯಶ್ ರಾಜ್ ಫಿಲಂ ಬ್ಯಾನರಿನ ಸೆಕ್ಯುರಿಟಿ ಕೂಡ ಬದಲಾಗಿದ್ದು ಅಚ್ಚರಿ. (ಏಜೆನ್ಸೀಸ್)

English summary
Salman Khan recently advised Yash Raj Films to change their security agency and asked them to hire his makeup man Sudesh Naag aka Raju security agency.
 
Please Wait while comments are loading...