twitter
    For Quick Alerts
    ALLOW NOTIFICATIONS  
    For Daily Alerts

    ಪ್ರೀತಿಯ ಕುದುರೆ ಜೊತೆ ಸೊಪ್ಪು ತಿಂದ ಸಲ್ಮಾನ್: ವಿಡಿಯೋ ವೈರಲ್

    |

    ಕೊರೊನಾ ಲಾಕ್ ಡೌನ್ ನಿಂದ ಇಡೀ ಭಾರತ ಸ್ತಬ್ಧವಾಗಿದೆ. ಜನರು ಮನೆಯಲ್ಲಿಯೆ ಕಾಲಕಳೆಯುತ್ತಿದ್ದಾರೆ. ಸದಾ ಶೂಟಿಂಗ್ ಅಂತ ಬ್ಯುಸಿಯಾಗಿರುತ್ತಿದ್ದ ಸಿನಿಸೆಲೆಬ್ರಿಟಿಗಳು ಸದ್ಯ ವಿಶ್ರಾಂತಿ ಮೂಡಿನಲ್ಲಿದ್ದಾರೆ. ಹೊಸ ದಿನಚರಿ ಪ್ರಾರಂಭಿಸಿಕೊಂಡಿವ ಸೆಲೆಬ್ರಿಟಿಗಳು ಮನೆಯಲ್ಲಿಯೆ ಇದ್ದಾರೆ.

    ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ತಮ್ಮ ಪನ್ವೆಲ್ ತೋಟದ ಮನೆಯಲ್ಲಿ ಕಾಲಕಳೆಯುತ್ತಿದ್ದಾರೆ. ಸಲ್ಮಾನ್ ಖಾನ್ ತೋಟದ ಮನೆಯಲ್ಲಿದ್ದಾಗಲೆ ಲಾಕ್ ಡೌನ್ ಘೋಷಣೆಯಾದ ಕಾರಣ, ಸಲ್ಲು ಕುಟುಂಬದ ಕೆಲ ಸದಸ್ಯರ ಜೊತೆ ಅಲ್ಲಿಯೆ ಉಳಿದುಕೊಂಡಿದ್ದಾರೆ. ಈ ಸಮಯದಲ್ಲಿ ಸಲ್ಲು ತೋಟದ ಮನೆಯಲ್ಲಿರುವ ಪ್ರಾಣಿಗಳ ಜೊತೆ ಸಮಯ ಕಳೆಯುತ್ತಿದ್ದಾರೆ. ಮುಂದೆ ಓದಿ...

    ಕುದುರೆ ಜೊತೆ ಸೊಪ್ಪು ತಿಂದ ಸಲ್ಮಾನ್

    ಕುದುರೆ ಜೊತೆ ಸೊಪ್ಪು ತಿಂದ ಸಲ್ಮಾನ್

    ಲಾಕ್ ಡೌನಲ್ಲಿ ಮನೆಯಲ್ಲಿರುವ ಸಲ್ಮಾನ್ ಖಾನ್ ಪ್ರೀತಿಯ ಪ್ರಾಣಿ ಜೊತೆ ಸಮಯ ಕಳೆಯುತ್ತಿದ್ದಾರೆ. ವಿಶೇಷ ಅಂದರೆ ತಮ್ಮ ಪ್ರೀತಿಯ ಕಪ್ಪು ಕುದುರೆ ಜೊತೆ ಬೆಳಗ್ಗೆಯ ತಿಂಡಿ ಮುಗಿಸಿದ್ದಾರೆ. ಅಂದ್ಹಾಗೆ ತಿಂಡಿ ಅಂದರೆ ಕುದುರೆ ತಿನ್ನುವ ಸೊಪ್ಪನ್ನೆ ತಿನ್ನುತ್ತಿದ್ದಾರೆ. ಕುದುರೆ ಮತ್ತು ಸಲ್ಲು ಇಬ್ಬರು ಸೊಪ್ಪು ತಿನ್ನುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ ಸಲ್ಲು.

    ನನ್ನ ಪ್ರೀತಿ ಜೊತೆ ಬ್ರೇಕ್ ಫಸ್ಟ್

    ಸಲ್ಮಾನ್ ಖಾನ್ ಅವರ ಪ್ರೀತಿಯ ಕಪ್ಪು ಕುದುರೆ ಜೊತೆ ತಿಂಡಿ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋಗೆ "ನನ್ನ ಪ್ರೀತಿ ಜೊತೆ ಬೆಳಗ್ಗೆಯ ತಿಂಡಿ" ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    'ಮನೆಯಿಂದ ಹೊರಬರಲು ಭಯವಾಗುತ್ತಿದೆ..'

    ತೋಟದ ಮನೆಯಲ್ಲಿರುವ ಸಲ್ಲು ಮನೆಯಿಂದ ಹೊರಬರಲು ಭಯವಾಗುತ್ತಿದೆ ಎಂದು ವಿಡಿಯೋ ಮಾಡಿ ಶೇರ್ ಮಾಡಿದ್ದರು. ಸಲ್ಮಾನ್ ಸಹೋದರ ಸುಹೈಲ್ ಖಾನ್ ಮಗ ನಿರ್ವಾಣ್ ಖಾನ್ ಜೊತೆ ಇದ್ದು, ಇಬ್ಬರಿಗೂ ಮನೆಯಿಂದ ಹೊರಬರಲು ಭಯವಾಗುತ್ತಿದೆ. ಆದರೆ ಭಯವಾಗುತ್ತಿರುವುದು ಒಳ್ಳೆಯದೆ. ಭಯವಾಗುತ್ತಿರುವುದರಿಂದನೆ ಬದುಕಿದ್ದೀವಿ. ಎಂದಿದ್ದಾರೆ. ಜೊತೆಗೆ ತಂದೆ ಸಲೀಂ ಖಾನ್ ಮನೆಯಲ್ಲಿ ಒಬ್ಬರೆ ಇದ್ದಾರೆ. ಅವರನ್ನು ನೋಡದೆ 3 ವಾರಗಳಾಯಿತು ಎಂದು ವಿಡಿಯೋದಲ್ಲಿ ಅಳಲು ತೋಡಿಕೊಂಡಿದ್ದಾರೆ.

    25 ಸಾವಿರ ಸಿನಿಮಾ ಕಾರ್ಮಿಕರ ನೆರವಿಗೆ ನಿಂತ ಸಲ್ಲು

    25 ಸಾವಿರ ಸಿನಿಮಾ ಕಾರ್ಮಿಕರ ನೆರವಿಗೆ ನಿಂತ ಸಲ್ಲು

    ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಸಿನಿಮಾ ಕಾರ್ಮಿಕರ ನೆರವಿಗೆ ನಿಂತಿದ್ದಾರೆ ಸಲ್ಮಾನ್ ಖಾನ್. ಕಾರ್ಮಿಕರ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ಹಣ ಜಮೆ ಮಾಡುತ್ತಿದ್ದಾರೆ. ಈಗಾಗಲೆ ಮೊದಲ ಹಂತವಾಗಿ ಕಾರ್ಮಿಕ ಬ್ಯಾಂಕ್ ಖಾತೆಗಳಿಗೆ 3 ಸಾವಿರ ರೂಪಾಯಿ ಹಣ ವರ್ಗಾಯಿಸಿದ್ದಾರೆ. ಸ್ವಲ್ಪ ದಿನಗಳ ನಂತರ ಮತ್ತೆ ಹಣ ವರ್ಗಾವಣೆ ಮಾಡಲಿದ್ದು, ಪರಿಸ್ಥಿತಿ ಸುಧಾರಿಸುವ ವರೆಗೂ ಸಹಾಯ ಮಾಡಲು ಸಲ್ಮಾನ್ ಬಯಸಿದ್ದಾರೆ.

    English summary
    Bollywood Actor Salman Khan breakfast with his love horse.
    Friday, April 10, 2020, 13:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X