ವಿಚ್ಛೇದನದ ಕಾರಣ ಬಿಚ್ಚಿಟ್ಟ ಸೋಹೈಲ್ ಖಾನ್ ಮಾಜಿ ಪತ್ನಿ ಸೀಮಾ!
ಬಿಟೌನ್‌ನಲ್ಲಿ ಮದುವೆ ಆಗುವುದು, ವಿಚ್ಛೇದನ ಪಡೆದುಕೊಳ್ಳುವುದು ಹೊಸದೇನೂ ಅಲ್ಲ. ತಾರೆಯರ ವಿಚ್ಛೇದನದ ಸುದ್ದಿ ಸದಾ ಸದ್ದು ಮಾಡುತ್ತಿರುತ್ತದೆ. ಇತ್ತೀಚೆಗೆ ಬೇರಾದ ಮತ್ತೊಂದು ಬಾಲಿವುಡ್ ಜೋಡಿ ಎಂದರೆ ಸಲ್ಮಾನ್ ಖಾನ್ ಸಹೋದರ ಸೋಹೈಲ್ ಖಾನ್ ಮತ್ತು ಸೀಮಾ.
ಇದೇ ವರ್ಷ ಮೇ ತಿಂಗಳಿನಲ್ಲಿ ಈ ಜೋಡಿ ವಿಚ್ಛೇದನ ಪಡೆದು ಪರಸ್ಪರ ದೂರ ಆಗಿರುವ ವಿಚಾರ ಬಯಲಿಗೆ ಬಂತು. 24 ವರ್ಷಗಳ ವಿವಾಹವ ಜೀವನ ನಡೆಸಿದ ಈ ಜೋಡಿ ದೂರ ಆಗುತ್ತಿದೆ ಎನ್ನುವುದು ಕೊಂಚ ಶಾಕಿಂಗ್ ಆಗಿಯೇ ಇತ್ತು.
ವಿಚ್ಛೇದನ ಪಡೆದಿರುವುದರ ಬಗ್ಗೆ ಈ ಜೋಡಿ ಎಲ್ಲೂ ಕೂಡ ಮಾತನಾಡಿರಲಿಲ್ಲ. ಅಥವಾ ಇವರ ವಿಚ್ಛೇದಕ್ಕೆ ಕಾರಣ ಏನು ಎನ್ನುವುದು ಕೂಡ ಗೊತ್ತಾಗಿರಲಿಲ್ಲ. ಈಗ ಈ ವಿಚಾರ ಹೊರ ಬಂದಿದೆ. ಸಂದರ್ಶನದಲ್ಲಿ ಮಾತನಾಡಿರುವ, ಸೀಮಾ ತನ್ನ ಮಾಜಿ ಪತಿಯಿಂದ ದೂರಾದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ.

ನೋವಿನಿಂದ ಬಳಲದೇ ಇರಲು ನಿರ್ಧಾರ!
ಸೋಹೈಲ್ ಖಾನ್ ಕೈ ಹಿಡಿದ ಫ್ಯಾಷನ್ ಡಿಸೈನರ್ ಸೀಮಾ ಸುಮಾರು 24 ವರ್ಷಗಳ ಕಾಲ ಸೊಹೈಲ್ ಜೊತೆಗೆ ಜೀವನ್ ನಡೆಸಿದ್ದಾರೆ. ಆ ಬಳಿಕ ಇವರು ವಿಚ್ಛೇದನ ಪಡೆದಿರುವುದು ಯಾಕೆ ಎನ್ನುವುದನ್ನು ಈಗ ರಿವೀಲ್ ಮಾಡಿದ್ದಾರೆ. ನೋವನ್ನು ಸಹಿಸಿಕೊಳ್ಳುವುಕ್ಕಿಂದ, ಅದನ್ನು ದೂರ ತಳ್ಳುವುದೇ ಉತ್ತಮ ಎಂದು ಭಾವಿಸಿ, ಈ ನಿರ್ಧಾರ ತೆಗೆದುಕೊಂಡೆ ಎಂದು ಸೀಮಾ ಹೇಳಿಕೊಂಡಿದ್ದಾರೆ.

2017ರಲ್ಲೇ ದೂರ, ದೂರ!
ಇನ್ನು ಈ ಜೋಡಿ 2022ರಲ್ಲಿ ದೂರ ಆಗಿರಬಹುದು. ಆದರೆ ಹಲವು ವರ್ಷಗಳಿಂದಲೇ ಇವರೂ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರಂತೆ. ಈ ಜೋಡಿ ದೂರಾಗಿ 4 ವರ್ಷಗಳ ಬಳಿಕ ಅಧಿಕೃತವಾಗಿ ವಿಚ್ಛೇದನ ಪಡೆದೊಂಡಿದೆ. 2017ರಲ್ಲೇ ಸೋಹೈಲ್ ಖಾನ್ ಮತ್ತು ಸೀಮಾ ದೂರಾಗಿದ್ದಾರೆ. ಈ ವಿಚಾರವನ್ನು ಸೀಮಾ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ.

ಮಕ್ಕಳಿಗಾಗಿ ಈ ನಿರ್ಧಾರ: ಸೀಮಾ!
ವಿಚ್ಛೇದನದ ಬಗ್ಗೆ ಮಾತನಾಡಿರುವ ಸೀಮಾ, "ನಮಗೆ ಗಾಯವಾದರೆ, ಆಳವಾಗಿ ಹೋಗುತ್ತಿದೆ ಎಂದಾದರೆ, ನಾನು ಅದನ್ನು ಬೇಗ ಸರಿಪಡಿಸಿಕೊಳ್ಳುತ್ತೇವೆ. ಹಾಗಾಗಿ ನಾನು ಇನ್ನೊಂದು ಬದಿಯಲ್ಲಿರಲು ಆಯ್ಕೆ ಮಾಡಿಕೊಂಡೆ. ನನ್ನನ್ನು ಉಳಿಸಿಕೊಳ್ಳಲು, ಮಕ್ಕಳಿಗಾಗಿ, ಕುಟುಂಬದ ಸದಸ್ಯರಿಗಾಗಿ, ನನ್ನ ಸಹೋದರ, ಸಹೋದರಿಗಾಗಿ, ಇನ್ನು ಪೋಷಕರಿಗೆ ತಮ್ಮ ಮಗಳು ದುಖಃದಲ್ಲಿ ಇರುವುದನ್ನು ನೋಡಲು ಆಗುವುದಿಲ್ಲ. ನಾನು ದುಖಃದಲ್ಲಿದ್ದರೆ ಅವರು ಈ ಬಗ್ಗೆ ನಿರಂತರವಾಗಿ ಒತ್ತಡದಲ್ಲಿರುತ್ತಾರೆ." ಹಾಗಾಗಿ ನನಗೆ ಇದು ಮುಖ್ಯವಾಗಿತ್ತು.

ನೆಗೆಟಿವಿಟಿ ದೂರತಳ್ಳಲು ನಿರ್ಧಾರ!
"ನಾನು ನನ್ನ ಜೀವನವನ್ನು ಸಂಪೂರ್ಣವಾಗಿ ಧನಾತ್ಮಕ ಕೋನದಿಂದ ನೋಡುತ್ತಿದ್ದೇನೆ. ನಾನು ಋಣಾತ್ಮಕತೆಯನ್ನು ಬಿಟ್ಟುಬಿಟ್ಟಿದ್ದೇನೆ. ಅಲ್ಲದೆ, ನಾನು ಇನ್ನು ಮುಂದೆ ಯಾವುದಕ್ಕು ಚಿಂತಿಸದೇ ಇರುವಂತ ಹಂತವನ್ನು ತಲುಪಿದ್ದೇನೆ ಎಂದು ನಾನು ಭಾವಿಸುತ್ತೇನೆ. ಎಲ್ಲಿಯವರೆಗೆ ನನ್ನ ಕುಟುಂಬ, ನನ್ನ ಪೋಷಕರು ಮತ್ತು ನನ್ನ ಮಕ್ಕಳು ಮತ್ತು ನನ್ನ ಒಡಹುಟ್ಟಿದವರಿಗೆ ನಾನು ಯಾರೆಂದು ತಿಳಿದಿದೆ. ಈಗ ನಾನು ನನ್ನೊಂದಿಗೆ ಪ್ರಾಮಾಣಿಕವಾಗಿ ಉಳಿಯುತ್ತೇನೆ" ಎಂದು ಅವರು ಹೇಳಿಕೊಂಡಿದ್ದಾರೆ.


Click it and Unblock the Notifications











