ಮತ್ತೆ ಜೊತೆಯಾಗುತ್ತಿದ್ದಾರೆ ಶಾರುಖ್ ಖಾನ್-ಸಲ್ಮಾನ್ ಖಾನ್
ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಗೆಳೆತನದಲ್ಲಿ ಹಲವು ಏರಿಳಿತಗಳಿವೆ. ವೃತ್ತಿ ಜೀವನದ ಆರಂಭದಲ್ಲಿ ವಿರೋಧಿಗಳಾಗಿದ್ದವರು. ಆ ನಂತರ ಆತ್ಮೀಯ ಗೆಳೆಯರಾದರು. ಇಬ್ಬರೂ ಸ್ಟಾರ್‌ಗಳಾದ ನಂತರ ಕೆಲ ವರ್ಷದ ಹಿಂದೆ ಜಗಳವಾಡಿ ದೂರಾಗಿದ್ದವರು, ನಂತರ ಮತ್ತೆ ಒಂದಾದರು.
ಇಬ್ಬರೂ ಪರಸ್ಪರರ ಸಿನಿಮಾಗಳಿಗೆ ಬೆಂಬಲ ನೀಡುತ್ತಾರೆ. ಪರಸ್ಪರ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ಸಹ ಕಾಣಿಸಿಕೊಳ್ಳುತ್ತಾರೆ. ಸಲ್ಮಾನ್ ಖಾನ್ ತುಸು ಹೆಚ್ಚಾಗಿಯೇ ಶಾರುಖ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಶಾರುಖ್ ಖಾನ್ ಅವರ ಬಿಡುಗಡೆಯಾದ ಕೊನೆಯ ಸಿನಿಮಾ ಝೀರೋ ನಲ್ಲಿ ಸಲ್ಮಾನ್ ಖಾನ್ ಅತಿಥಿ ಪಾತ್ರ ಮಾಡಲಿದ್ದಾರೆ. ಡಾನ್ಸ್ ಒಂದರಲ್ಲಿ ಕಾಣಿಸಿಕೊಂಡಿದ್ದ ಅವರು ಶಾರುಖ್ ಸಿನಿಮಾಕ್ಕೆ ಬೆಂಬಲ ನೀಡಿದ್ದರು. ಈಗ ಮತ್ತೊಂದು ಸಿನಿಮಾದಲ್ಲಿ ಶಾರುಖ್ ಜೊತೆ ನಟಿಸಲಿದ್ದಾರೆ ಸಲ್ಮಾನ್ ಖಾನ್.

ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ನಟನೆ
ಶಾರುಖ್ ಖಾನ್ ಅವರ ಮುಂಬರುವ ಸಿನಿಮಾ ಒಂದರಲ್ಲಿ ಸಲ್ಮಾನ್ ಖಾನ್ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಮೂಲಕ ಐದನೇ ಬಾರಿಗೆ ಶಾರುಖ್ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಸಲ್ಮಾನ್.

ಪಠಾಣ್ ಹೆಸರಿನ ಸಿನಿಮಾದಲ್ಲಿ ಶಾರುಖ್ ನಟನೆ
ಶಾರುಖ್, ಪಠಾಣ್ ಹೆಸರಿನ ಸಿನಿಮಾದಲ್ಲಿ ನಟಿಸಲಿದ್ದು, ಸಿನಿಮಾದಲ್ಲಿ ಜಾನ್ ಅಬ್ರಹಾಂ ವಿಲನ್ ಆಗಿದ್ದಾರೆ. ದೀಪಿಕಾ ಪಡುಕೋಣೆ ನಾಯಕಿ. ಇದೇ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ನಾಲ್ಕು ಸಿನಿಮಾಗಳಲ್ಲಿ ಅತಿಥಿ ಪಾತ್ರ
ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಕರಣ್-ಅರ್ಜುನ್ ಸಿನಿಮಾದಲ್ಲಿ ಮೊದಲಿಗೆ ಒಟ್ಟಿಗೆ ನಟಿಸಿದ್ದರು. ಆ ನಂತರ ಕುಚ್ ಕುಚ್ ಹೋತಾ ಹೈ ಸಿನಿಮಾದಲ್ಲಿ ನಟಿಸಿದರು. ಆ ಬಳಿಕ ಇಬ್ಬರೂ ಪರಸ್ಪರರ ಸಿನಿಮಾಗಳಲ್ಲಿ ನಾಲ್ಕು ಬಾರಿ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ. ಪಠಾಣ್ ಸಿನಿಮಾದಲ್ಲಿ ನಟಿಸಿದಲ್ಲಿ ಐದನೇ ಬಾರಿ ಸಲ್ಮಾನ್ ಅತಿಥಿ ಪಾತ್ರ ನಿರ್ವಹಿಸಿದಂತಾಗುತ್ತದೆ.

ಸಾಲು-ಸಾಲು ಸಿನಿಮಾಗಳು
ಶಾರುಖ್ ಖಾನ್ ಅವರ ಸಿನಿಮಾವೊಂದು ಬಿಡುಗಡೆಯಾಗಿ ಎರಡು ವರ್ಷವಾಯಿತು. ಆದರೆ ಈಗ ಸಾಲು-ಸಾಲು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಮಿಳಿನ ಅಟ್ಟಿಲಿ ನಿರ್ದೇಶನದ ಸಿನಿಮಾದಲ್ಲಿ ಸಹ ಶಾರುಖ್ ನಟಿಸಲಿದ್ದಾರೆ.


Click it and Unblock the Notifications











