For Quick Alerts
  ALLOW NOTIFICATIONS  
  For Daily Alerts

  ಗಣೇಶ ಹಬ್ಬ ಸಂಭ್ರಮದಲ್ಲಿ ಸಲ್ಮಾನ್ ಖಾನ್

  By ಜೇಮ್ಸ್ ಮಾರ್ಟಿನ್
  |

  ಸಲ್ಮಾನ್ ಖಾನ್ ಹಲವರ ಪಾಲಿಗೆ ಬ್ಯಾಡ್ ಬಾಯ್ ಆಗಿರಬಹುದು. ಆದರೆ, ಹಬ್ಬ ಹರಿದಿನಗಳಲ್ಲಿ ಸಂಭ್ರಮ ಕಾಣಬೇಕಾದರೆ ಇಡೀ ಬಾಲಿವುಡ್ ಸಲ್ಲೂ ಮನೆಯತ್ತ ನೋಡುತ್ತದೆ. ಭಾವೈಕ್ಯತೆಯ ಸಂಕೇತವಾಗಿ ಗಣೇಶ ಪೂಜೆಯನ್ನು ಹಲವಾರು ವರ್ಷಗಳಿಂದ ಮಾಡಿಕೊಂಡು ಬಂದಿರುವ ಸಲ್ಮಾನ್ ಈ ವರ್ಷ ಕೂಡಾ ಕುಟುಂಬದಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದೆ.

  ಮುಂಬೈನಲ್ಲಿ ಕನಿಷ್ಠವೆಂದರೂ 10 ರಿಂದ 12 ದಿನಗಳ ಕಾಲ ಗಣೇಶ ಮಹೋತ್ಸವ ನಡೆಯುತ್ತದೆ. ಗಣೇಶ ಹಬ್ಬ ಆಚರಣೆ, ಗಣೇಶನ ಬೀಳ್ಕೊಡುಗೆ ಎಲ್ಲವೂ ಸಂಭ್ರಮವನ್ನು ಮುಗಿಲು ಮುಟ್ಟುವಂತೆ ಮಾಡುವ ಕ್ರಿಯೆಗಳಾಗಿವೆ.

  47 ವರ್ಷದ ಸಲ್ಲೂ ಮಿಯಾ ಅವರ ತಾಯಿ ದೊಂಗ್ರಾ ಹಿಂದೂವಾಗಿದ್ದು, ಇಸ್ಲಾಂ ಹಾಗೂ ಹಿಂದೂ ಧರ್ಮ ಎರಡಕ್ಕೂ ಸಮಾನ ಮಹತ್ವ ನೀಡುತ್ತಾ ಬಂದಿದ್ದಾರೆ. ಮಹಾ ಶಿವರಾತ್ರಿ, ಗಣೇಶ ಚತುರ್ಥಿ, ಕೃಷ್ಣ ಜನ್ಮಾಷ್ಟಮಿ ಸಲ್ಮಾನ್ ಮನೆಯಲ್ಲಿ ಸಾಮಾನ್ಯವಾಗಿ ಆಚರಿಸುವ ಹಬ್ಬಗಳಾಗಿವೆ. ಪ್ರೀತಿಯ ತಂಗಿ ಅರ್ಪಿತಾ (ದತ್ತು ಪಡೆದ) ಮನೆಯಲ್ಲಿ ಈ ಬಾರಿ ಗಣೇಶ ಹಬ್ಬ ಆಚರಿಸಲಾಗಿದೆ.. ಚಿತ್ರಗಳು ಇಲ್ಲಿವೆ...

  ತಂಗಿ ಮನೆ ಹಾದಿಯಲ್ಲಿ

  ತಂಗಿ ಮನೆ ಹಾದಿಯಲ್ಲಿ

  ಸಲ್ಮಾನ್ ಖಾನ್ ಅವರು ತಮ್ಮ ಪ್ರೀತಿಯ ತಂಗಿ ಅರ್ಪಿತಾ ಅವರ ಬಾಂದ್ರಾ ಮನೆ ಹಾದಿಯಲ್ಲಿ ಕಾಣಿಸಿದ್ದು ಹೀಗೆ. ಬಾಂದ್ರಾದಲ್ಲಿರುವ ಮತ್ತೊಂದು ಮನೆಯಲ್ಲಿ ಯಾವಾಗಲೂ ಹಬ್ಬ ಆಚರಿಸುತ್ತಿದ್ದ ಸಲ್ಲೂ ಈ ಬಾರಿ ತಂಗಿ ಮನೆ ಕಡೆ ಬಂದಿದ್ದು ವಿಶೇಷ

  ತುಂಬು ಕುಟುಂಬ

  ತುಂಬು ಕುಟುಂಬ

  ಸಲ್ಮಾನ್ ಖಾನ್ ಅವರು ತಂಗಿ ಹಾಗೂ ಪೂರ್ತಿ ಪರಿವಾರದೊಡನೆ

  ಸಂಭ್ರಮದ ತಾಣ ಬದಲು

  ಸಂಭ್ರಮದ ತಾಣ ಬದಲು

  ಮುಂಬೈನ ಪನ್ ವೆಲ್ ನಲ್ಲಿರುವ ತೋಟದ ಮನೆಯಲ್ಲಿ ಹಬ್ಬ ಆಚರಣೆಗೆ ಮುಂದಾಗಿದ್ದ ಸಲ್ಮಾನ್ ಖಾನ್ ಕೊನೆ ಗಳಿಗೆಯಲ್ಲಿ ಬಾಂದ್ರಾ ಕಡೆಗೆ ಬಂದರು

  ಹೆಲೆನ್

  ಹೆಲೆನ್

  ಒಂದು ಕಾಲದಲ್ಲಿ ಹಿಂದಿ ಚಿತ್ರರಂಗದ ಕ್ಲಬ್ ಡ್ಯಾನ್ಸರ್ ಆಗಿ ಮೆರೆದು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಹಿರಿಯ ಕಲಾವಿದೆ ಹೆಲೆನ್ ಅವರು ಸಲ್ಮಾನ್ ಖಾನ್ ಅವರ ಮಲತಾಯಿ

  ಸೂರಜ್ ಪಂಚೋಲಿ

  ಸೂರಜ್ ಪಂಚೋಲಿ

  ಜಿಯಾ ಖಾನ್ ಆತ್ಮಹತ್ಯಾ ಪ್ರಕರಣದ ಆರೋಪಿಯಾಗಿದ್ದ ಸೂರಜ್ ಪಂಚೋಲಿ ಅವರು ತಮ್ಮ ತಾಯಿ ಜತೆ ಸಲ್ಲೂ ಮನೆ ಕಡೆ ಬಂದಿದ್ದು ಹೀಗೆ

  ಮಿನಿ ಮಾಥೂರ್

  ಮಿನಿ ಮಾಥೂರ್

  ನಿರ್ದೇಶಕ ಕಬೀರ್ ಖಾನ್ ಅವರ ಪತ್ನಿ ಮಿನಿ ಮಾಥೂರ್ ಅವರು ಮಕ್ಕಳೊಂದಿಗೆ ಗಣೇಶ ಹಬ್ಬ ಆಚರಣೆಗೆ ಸಲ್ಲೂ ಮನೆ ಕಡೆ ಬಂದಿದ್ದರು.

  ಸಲ್ಲೂ ಕುಟುಂಬ ಪರಿಚಯ

  ಸಲ್ಲೂ ಕುಟುಂಬ ಪರಿಚಯ

  ಎಡ ತುದಿಯಲ್ಲಿ ಅಲ್ವೀರಾ(ಸಲ್ಮಾನ್ ತಂಗಿ) ಪಕ್ಕದಲ್ಲಿ ಹೆಲೆನ್, ಸಲೀಂ ಖಾನ್ (ಸಲ್ಮಾನ್ ಅಪ್ಪ). ಸಲ್ಮಾನ್ ಬಲಕ್ಕೆ ತಾಯಿ ಸುಶೀಲಾ ಚರಕ್, ಎಡಭಾಗದಲ್ಲಿ ಅರ್ಪಿತಾ. ಪುಟ್ಟ ಹುಡುಗ ಅರ್ಬಾಜ್ ಖಾನ್ ಮಗ

  ಗಣೇಶ ಭಜನೆ

  ಗಣೇಶ ಭಜನೆ

  ಗಣೇಶ ಹಬ್ಬದ ಸಂದರ್ಭದಲ್ಲಿ ದೇವರ ಭಜನೆ ನಿರತ ಸಲ್ಮಾನ್ ಖಾನ್

  ದೇವರಿಗೆ ಆರತಿ

  ದೇವರಿಗೆ ಆರತಿ

  ಅಮ್ಮನ ಜತೆ ಸೇರಿ ದೇವರಿಗೆ ಆರತಿ ಬೆಳಗಿದ ಸಲ್ಮಾನ್

  ಬಿಗ್ ಫ್ಯಾಮಿಲಿ

  ಬಿಗ್ ಫ್ಯಾಮಿಲಿ

  ಪೂಜಾ ಮಂದಿರ ತುಂಬಾ ತುಂಬಿಕೊಂಡಿರುವ ಸಲ್ಲೂ ಕುಟುಂಬದ ಸದಸ್ಯರು

  ಹಸನ್ಮುಖಿ ಸಲ್ಲೂ

  ಹಸನ್ಮುಖಿ ಸಲ್ಲೂ

  ಅರ್ಬಾಜ್ ಖಾನ್ ಪುತ್ರನ ಜತೆ ಹಸನ್ಮುಖಿ ಸಲ್ಮಾನ್ ಖಾನ್

  English summary
  Like always, this year too we saw Salman Khan celebrating the Hindu festival Ganesh Chaturthi. Only this year, he celebrated this at a different venue. He welcomed Lord Ganesh at his sister Arpita's apartment in Bandra on September 9, 2013.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X