»   » ಬಿ ಟೌನ್ ಬ್ಯಾಚುಲರ್ ಸಲ್ಮಾನ್ ಖಾನ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ

ಬಿ ಟೌನ್ ಬ್ಯಾಚುಲರ್ ಸಲ್ಮಾನ್ ಖಾನ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ

Posted By:
Subscribe to Filmibeat Kannada

ಬಾಲಿವುಡ್ ಅಂಗಳದಲ್ಲಿ ಇನ್ನೂ ಬ್ಯಾಚುಲರ್ ಆಗಿಯೇ ಉಳಿದುಕೊಂಡಿರುವ ಸಲ್ಮಾನ್ ಖಾನ್ ರಿಗೆ ಹುಟ್ಟುಹಬ್ಬದ ಸಂಭ್ರಮ. 52 ವರ್ಷ ವಯಸ್ಸಾದರೂ ಇನ್ನೂ ಯಂಗ್ ಅಂಡ್ ಎನರ್ಜಿಟಿಕ್ ಆಗಿರುವ ಸಲ್ಮಾನ್ ಅಭಿಮಾನಿಗಳಿಗೆ ಡಬಲ್ ಖುಷಿಯ ಸಂಭ್ರಮ.

ಸಲ್ಮಾನ್ ಬರ್ತಡೇ ಜೊತೆಯಲ್ಲಿ ಟೈಗರ್ ಜಿಂದಾ ಹೈ ಸಿನಿಮಾದ ಸಕ್ಸಸ್ ಎರಡನ್ನೂ ಒಟ್ಟಿಗೆ ಆಚರಣೆ ಮಾಡುತ್ತಿದ್ದಾರೆ ಸಲ್ಲು ಅಭಿಮಾನಿಗಳು. ನಿನ್ನೆ ರಾತ್ರಿಯಿಂದಲೇ ಬಿ ಟೌನ್ ಟೈಗರ್ ಬರ್ತಡೇ ಸಂಭ್ರಮ ಶುರುವಾಗಿದ್ದು ಸಲ್ಮಾನ್ ಹುಟ್ಟುಹಬ್ಬದಲ್ಲಿ ಕತ್ರಿನಾ ಕೂಡ ಭಾಗಿಯಾಗಿದ್ದು ಈ ವರ್ಷದ ಸ್ಪೆಷಲ್. ಸದ್ಯ ಸಲ್ಲು 'ರೇಸ್ 3' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ.

Salman Khan celebrating his 52nd birthday

ಹುಟ್ಟುಹಬ್ಬದ ವಿಶೇಷವಾಗಿ ಸಲ್ಮಾನ್ ಅಭಿನಯದ ಹೊಸ ಸಿನಿಮಾ ಅನೌನ್ಸ್ ಆಗಿದೆ. ಭೂಷಣ್ ಕುಮಾರ್ ಮತ್ತು ಅತುಲ್ ಅಗ್ನಿಹೋತ್ರಿ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದು ಅಲಿ ಅಬ್ಬಾಸ್ ಜಾಫರ್ ಚಿತ್ರವನ್ನ ಡೈರೆಕ್ಟ್ ಮಾಡಲಿದ್ದಾರೆ.

Salman Khan celebrating his 52nd birthday

ಸೋಷಿಯಲ್ ಮೀಡಿಯಾದಲ್ಲಿ ಸಲ್ಮಾನ್ ಖಾನ್ ಅವರಿಗೆ ಹುಟ್ಟುಹಬ್ಬದ ಶುಭಾಷಯಗಳು ಹರಿದು ಬರುತ್ತಿದ್ದು ಟ್ವಿಟ್ಟರ್ ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ ಸಲ್ಮಾನ್ ಖಾನ್.

Salman Khan celebrating his 52nd birthday

English summary
Bollywood actor Salman Khan celebrating his 52nd birthday, A new movie has been announced for Salman's birthday. Salman's Tiger Jinda Hai movie successfully running in theater.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X