For Quick Alerts
  ALLOW NOTIFICATIONS  
  For Daily Alerts

  ನಟ ಸಲ್ಮಾನ್ ಖಾನ್ ಗೂ ಕಾದಿಗೆ ಆರು ವರ್ಷ ಜೈಲು

  By Rajendra
  |

  ಬಾಲಿವುಡ್ ನಟ ಸಂಜಯ್ ದತ್ ಗೆ ಜೈಲು ಶಿಕ್ಷೆ ವಿಧಿಸಿದ ಬೆನ್ನಲ್ಲೇ ಮತ್ತೊಬ್ಬ ನಟ ಸಲ್ಮಾನ್ ಖಾನ್ ಕೇಸ್ ಕೋರ್ಟ್ ಕಟಕಟೆಗೆ ಬಂದಿದೆ. ಹದಿನಾಲ್ಕು ವರ್ಷಗಳ ಹಿಂದೆ ರಾಜಸ್ತಾನದಲ್ಲಿ ಕೃಷ್ಣಮೃಗ ಬೇಟೆಯಾಡಿದ ಪ್ರಕರಣದ ವಿಚಾರಣೆ ಜೋಧ್ ಪುರ ಕೋರ್ಟ್ ನಲ್ಲಿ ಶನಿವಾರ (ಮಾ.23) ನಡೆಯಲಿದೆ.

  ನಟ ಸಲ್ಮಾನ್ ಖಾನ್, ಸೈಫ್ ಆಲಿ ಖಾನ್, ಟಬು, ನೀಲಂ ಹಾಗೂ ಸೋನಾಲಿ ಬೇಂದ್ರೆ ಈ ಪ್ರಕರಣದ ಆರೋಪಿಗಳು. ಸಂರಕ್ಷಿತ ಪ್ರಾಣಿ ಕೃಷ್ಣಮೃಗ ಬೇಟೆಯಾಡಿರುವ ಸಲ್ಲು ವಿರುದ್ಧ ವನ್ಯಜೀವಿ ಸಂರಕ್ಷಣೆ ಕಾಯಿದೆ ಅಡಿ ಪ್ರಕರಣ ದಾಖಲಾಗಿದೆ.

  ಆದರೆ ಅವರ ವಿರುದ್ಧ ಶಸ್ತ್ರಾಸ್ತ್ರ ಕಾಯಿದೆ ಅಡಿ ದಾಖಲಾಗಿದ್ದ ಪ್ರಕರಣವನ್ನು ಕೋರ್ಟ್ ಕೈಬಿಟ್ಟಿದೆ. ತಾರೆಗಳಾದ ಸೈಫ್ ಆಲಿ ಖಾನ್, ಟಬು, ನೀಲಂ ಹಾಗೂ ಸೋನಾಲಿ ಬೇಂದ್ರೆ ಅವರು ಸಲ್ಲು ಅವರನ್ನು ಪ್ರಚೋದಿಸಿದ ಕಾರಣ ಅವರ ವಿರುದ್ಧವೂ ವಿಚಾರಣೆ ನಡೆಯಲಿದೆ.

  ಒಂದು ವೇಳೆ ಸಲ್ಲು ವಿರುದ್ಧದ ಆರೋಪ ಸಾಬೀತಾದರೆ ಅವರಿಗೆ 6 ವರ್ಷ ಜೈಲು ಶಿಕ್ಷೆ ತಪ್ಪಿದ್ದಲ್ಲ. ಸದ್ಯಕ್ಕೆ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ಸಲ್ಲು ಅವರು ಯುಎಸ್ ನಲ್ಲಿದ್ದಾರೆ. ಹಾಗಾಗಿ ಅವರಿಗೆ ಕೋರ್ಟ್ ಹಾಜರಾತಿಯಿಂದ ವಿನಾಯಿತಿ ನೀಡಲಾಗಿದೆ.

  1998ರಲ್ಲಿ 'ಹಮ್ ಸಾಥ್ ಸಾಥ್ ಹೈ' ಚಿತ್ರೀಕರಣ ವೇಳೆ ಜೋಧಪುರ ಸಮೀಪದ ಹಳ್ಳಿಯೊಂದರ ಬಳಿ ಕೃಷ್ಣಮೃಗ ಭೇಟಿಯಾಡಿದ್ದ ಆರೋಪ ಸಲ್ಲು ವಿರುದ್ಧ ಇದೆ. ಈ ಪ್ರಕರಣದ ಪ್ರಮುಖ ಸಾಕ್ಷಿ ಜೀಪ್ ಚಾಲಕ. ಏಪ್ರಿಲ್ 27ರಂದು ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ. (ಏಜೆನ್ಸೀಸ್)

  English summary
  Jodhpur court today (23rd March) read out fresh charges against actors Salman Khan, Saif Ali Khan, Tabu, Neelam and Sonali Bendre in a case of hunting of blackbucks in Rajasthan 14 years ago.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X