»   » ಸಲ್ಲು ನಿಮ್ಮ ಮದುವೆಗೆ ಬರಬೇಕೆ? ಇಲ್ಲಿದೆ ಪ್ಲಾನ್

ಸಲ್ಲು ನಿಮ್ಮ ಮದುವೆಗೆ ಬರಬೇಕೆ? ಇಲ್ಲಿದೆ ಪ್ಲಾನ್

Posted By:
Subscribe to Filmibeat Kannada
ಮದುವೆಯಾಗುತ್ತಿದ್ದೇನೆ. ದುಡ್ಡು ಕಾಸಿಗೇನು ಹಿಂದೆ ಮುಂದೆ ನೋಡಲ್ಲ. ಅದೆಷ್ಟೇ ಖರ್ಚಾಗಲಿ ಪರ್ವಾಗಿಲ್ಲ. ದುಡ್ಡಿನ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎನ್ನುವವರಿಗೆ ಇಲ್ಲಿದೆ ನೋಡಿ ಒಳ್ಳೆ ಐನಾತಿ ಆಫರ್. ಅದೂ ಯಾರು ಕೊಡುತ್ತಿರುವುದು ಗೊತ್ತೆ ಬಾಲಿವುಡ್ ಬಾಕ್ಸ್ ಆಫೀಸ್ ಬಾದ್ ಶಾ ಸಲ್ಮಾನ್ ಖಾನ್.

ಸಲ್ಲು ಅವರನ್ನೂ ಮದುವೆಗೆ ಆಹ್ವಾನಿಸಬಹುದು. ಊಟ ಮಾಡಲಿಕ್ಕಾ ಎಂದು ಕೇಳಬೇಡಿ. ಅವರು ಸುಮ್ಮನೆ ಬಂದು ವಧುವರದ ಜೊತೆ ನಿಂತು, ನೆರದವರತ್ತ ಕೈಬೀಸುತ್ತಾರೆ. ಒಂದು ಕಿರುನಗೆಯನ್ನೂ ಬೀರುತ್ತಾರೆ. ಸ್ವಲ್ಪ ಸಮಯ ನಿಮ್ಮೊಂದಿಗೂ ಹರಟುತ್ತಾರೆ. ಆದರೆ ಇದಕ್ಕೆ ಒಂದಷ್ಟು ಕೋಟಿ ಕೊಡಬೇಕಷ್ಟೇ!

ಎಷ್ಟು ಅಂತೀರಾ? ರು.3.5 ಕೋಟಿ ಕೊಟ್ಟರೆ ಸಾಕು. ನೆನಪಿರಲಿ ಸಲ್ಲು ಬರುವುದು ಬೆಳಗಿನ ಹೊತ್ತಿನ ಮಾಂಗಲ್ಯ ಧಾರಣೆ ಸಮಯದಲ್ಲಲ್ಲ. ಅವರೇನಿದ್ದರೂ ಬರುವುದು ರಾತ್ರಿ ಹೊತ್ತು! ತಪ್ಪು ತಿಳಿಯಬೇಡಿ ಸಲ್ಲು ಬರುವುದು ಆರತಕ್ಷತೆ ಕಾರ್ಯಕ್ರಮಕ್ಕೆ ಮಾತ್ರ.

ಆರತಕ್ಷತೆ ಕಾರ್ಯಕ್ರಮದಲ್ಲಿ ಒಂದಷ್ಟು ಸ್ಟೆಪ್ಸ್ ಬೇಕಿದ್ದರೂ ಹಾಕುತ್ತಾರೆ. ನರದೌರ್ಬಲ್ಯದಿಂದ ಬಳಲುತ್ತಿರುವ ಸಲ್ಮಾನ್ ಖಾನ್ ಯುಎಸ್ ನಲ್ಲಿ ಚಿಕಿತ್ಸೆ ಪಡೆಯಲು ತೆರಳುತ್ತಿದ್ದಾರೆ. ಆದರೆ ಈಗ ಮದುವೆ ಸೀಸನ್ ಆದ ಕಾರಣ ಅವರು ತಮ್ಮ ಯುಎಸ್ ಟ್ರಿಪನ್ನು ಮಾರ್ಚ್ ಗೆ ಮುಂದೂಡಿದ್ದಾರೆ ಎನ್ನುತ್ತವೆ ಬಾಲಿವುಡ್ ಮೂಲಗಳು. (ಏಜೆನ್ಸೀಸ್)

English summary
Bollywood celebrities cash on big amount to perform or to make their presence felt in any high flier wedding. Many celebrities cash on big bucks by performing in any riche rich wedding and next in the row is Salman Khan. Salman who is the ruling Khan of Bollywood has been offered Rs 3.5 crore for a wedding night appearance. 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada