»   » 2.5 ಕೋಟಿ ಪಡೆಯುತ್ತಿದ್ದ ಸಲ್ಲುಗೆ 11ನೇ 'ಬಿಗ್ ಬಾಸ್'ನಲ್ಲಿ ಇಷ್ಟೊಂದು ಕೋಟಿ ಸಂಭಾವನೆನಾ!

2.5 ಕೋಟಿ ಪಡೆಯುತ್ತಿದ್ದ ಸಲ್ಲುಗೆ 11ನೇ 'ಬಿಗ್ ಬಾಸ್'ನಲ್ಲಿ ಇಷ್ಟೊಂದು ಕೋಟಿ ಸಂಭಾವನೆನಾ!

Posted By:
Subscribe to Filmibeat Kannada

ಹಿಂದಿಯ ಖ್ಯಾತ ರಿಯಾಲಿಟಿ ಶೋ 'ಬಿಗ್ ಬಾಸ್' ಯಶಸ್ವಿ 10 ಆವೃತ್ತಿಗಳನ್ನ ಪೂರೈಸಿ, ಈಗ 11ನೇ ಆವೃತ್ತಿ ಆರಂಭಿಸುತ್ತಿದೆ. ಈಗಾಗಲೇ ಬಿಗ್ ಬಾಸ್ 11ನೇ ಆವೃತ್ತಿಗೆ ದಿನಾಂಕ ನಿಗದಿಯಾಗಿದ್ದು, ಅಕ್ಟೋಬರ್ 1 ರಿಂದ ಶುರುವಾಗಲಿದೆ.

ಈ ಬಾರಿಯೂ ಸಲ್ಮಾನ್ ಖಾನ್ ಬಿಗ್ ಬಾಸ್ ನಿರೂಪಣೆ ಮಾಡುತ್ತಿದ್ದು, 7ನೇ ಸಲ ಆಯ್ಕೆ ಆಗಿದ್ದಾರೆ. ಮೊದಲ ಬಿಗ್ ಬಾಸ್ ನಿರೂಪಣೆಯಲ್ಲಿ ಸಲ್ಮಾನ್ ಖಾನ್ ಗೆ ಕೇವಲ 2.5 ಕೋಟಿ ನೀಡಲಾಗುತ್ತಿತ್ತು. ಆದ್ರೀಗ, 11ನೇ ಆವೃತ್ತಿ ವೇಳೆಗೆ ನಾಲ್ಕು ಪಟ್ಟು ಹೆಚ್ಚಾಗಿದೆ.

ಹಾಗಿದ್ರೆ, 11ನೇ 'ಬಿಗ್ ಬಾಸ್'ಗಾಗಿ ಸಲ್ಮಾನ್ ಖಾನ್ ಪಡೆಯುತ್ತಿರುವ ಸಂಬಳ ಎಷ್ಟು? ಮುಂದೆ ಓದಿ.....

7 ನೇ ಬಾರಿ 'ಬಿಗ್ ಬಾಸ್' ನಿರೂಪಣೆ

ನಟ ಸಲ್ಮಾನ್ ಖಾನ್ ಏಳನೇ ಬಾರಿ ಬಿಗ್ ಬಾಸ್ ನಿರೂಪಣೆ ಮಾಡುತ್ತಿದ್ದಾರೆ. ಈಗಾಗಲೇ 6 ಬಾರಿ ಯಶಸ್ವಿ ನಿರೂಪಣೆ ಮಾಡಿರುವ ಸಲ್ಲು, 11ನೇ ಆವೃತ್ತಿಯ ಮೂಲಕ 7 ನೇ ಬಾರಿ ವೇದಿಕೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

'ಬಿಗ್ ಬಾಸ್' ಕಾರ್ಯಕ್ರಮದ ಮೊದಲ ಸ್ಪರ್ಧಿಯ ಫೋಟೋ ಬಹಿರಂಗ.!

ಚೊಚ್ಚಲ ಬಿಗ್ ಬಾಸ್ ನಲ್ಲಿ ಸಲ್ಲು ಸಂಭಾವನೆ ಎಷ್ಟಿತ್ತು?

2010 ರಲ್ಲಿ ಪ್ರಸಾರವಾದ ಬಿಗ್ ಬಾಸ್ ಸೀಸನ್ 4ರಲ್ಲಿ ಸಲ್ಮಾನ್ ಖಾನ್ ಚೊಚ್ಚಲ ಬಾರಿಗೆ ಬಿಗ್ ಬಾಸ್ ನಿರೂಪಣೆ ಮಾಡಿದ್ದರು. ಆಗ ಅವರು ಪಡೆದುಕೊಂಡ ಸಂಭಾವನೆ ಕೇವಲ 2.5 ಕೋಟಿ.

ಬಿಗ್ ಬಾಸ್ ಸೀಸನ್-7 ಸಂಭಾವನೆ ಡಬಲ್ ಆಗಿತ್ತು

ನಂತರ 5 ನೇ ಆವೃತ್ತಿ ಸಲ್ಮಾನ್ ಮಾಡಲಿಲ್ಲ, ಬದಲಾಗಿ ಸಂಜಯ್ ದತ್ ನಿರೂಪಣೆ ಮಾಡಿದ್ದರು. ಬಿಗ್ ಬಾಸ್ ಸೀಸನ್ ಸೀಸನ್-6 ಮತ್ತು ಸೀಸನ್-7 ರಲ್ಲಿ ಮತ್ತೆ ಸಲ್ಮಾನ್ ಖಾನ್ ನಿರೂಪಣೆ ಮಾಡಿದರು. ಆ ವೇಳೆ ಅವರು ಪಡೆದ ಸಂಭಾವನೆ 5 ಕೋಟಿ.

ಬಿಗ್ ಬಾಸ್ 11ನೇ ಆವೃತ್ತಿಯ ಆರಂಭ ದಿನಾಂಕ ನಿಗದಿ

ಸೀಸನ್ 8-9 ರಲ್ಲಿ ಎಷ್ಟಿತ್ತು?

ಇನ್ನು ಬಿಗ್ ಬಾಸ್ ಸೀಸನ್ 8 ರಲ್ಲಿ 5.5 ಕೋಟಿ ಪಡೆದರೇ, ಸೀಸನ್-9 ರಲ್ಲಿ ಸುಮಾರು 7 ರಿಂದ 8 ಕೋಟಿ ಚಾರ್ಜ್ ಮಾಡಿದ್ದರು ಎಂದು ಎನ್ನಲಾಗಿದೆ.

ಕಳೆದ ಆವೃತ್ತಿಯಲ್ಲಿ ಸಲ್ಲು ಪಡೆದಿದ್ದು ಎಷ್ಟು?

ಇನ್ನು ಕಳೆದ ಆವೃತ್ತಿಯ ಪ್ರತಿ ಎಪಿಸೋಡ್ ಗೆ ಸಲ್ಮಾನ್ ಖಾನ್ ಸುಮಾರು 8 ಕೋಟಿ ಪಡೆದುಕೊಂಡಿದ್ದರು ಎನ್ನಲಾಗಿದೆ.

ಈ ಬಾರಿಯ 'ಬಿಗ್ ಬಾಸ್'ನಲ್ಲಿ ಇವರೆಲ್ಲಾ ಇರ್ತಾರಂತೆ.!

11ನೇ ಬಿಗ್ ಬಾಸ್ ನಲ್ಲಿ ಸಲ್ಲು ಸಂಭಾವನೆ ಎಷ್ಟು?

ಪ್ರತಿ ಎಪಿಸೋಡ್ ಲೆಕ್ಕದಲ್ಲಿ ಸಂಬಳ ಪಡೆಯುವ ಸಲ್ಲು ಈ ಬಾರಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಬಿಗ್ ಬಾಸ್ 11ರಲ್ಲಿ ಪ್ರತಿ ಎಪಿಸೋಡ್ ಗೆ 11 ಕೋಟಿ ಸಂಭಾವನೆ ತೆಗೆದುಕೊಳ್ಳಲಿದ್ದಾರಂತೆ.

English summary
Salman Khan will get Rs. 11 crore per episode for hosting the 11th season of Bigg Boss, reports Bollywood Media.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada