For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ನನಗೆ ಮೋಸ ಮಾಡಿದ: ಮಾಜಿ ಪ್ರೇಯಸಿ

  |

  ಸಲ್ಮಾನ್ ಖಾನ್‌ರದ್ದು 'ವರ್ಣರಂಜಿತ' ಬದುಕು ಮುಂಚೆಯೂ ಅಷ್ಟೆ, ಈಗಲೂ ಅಷ್ಟೆ. ಹಲವಾರು ಗರ್ಲ್‌ಫ್ರೆಂಡ್‌ಗಳನ್ನು ಬದಲಿಸಿದ್ದಾರೆ ಸಲ್ಮಾನ್ ಖಾನ್. ಆದರೆ ಹೆಚ್ಚು ಸುದ್ದಿಯಾಗಿದ್ದು ಐಶ್ವರ್ಯಾ ರೈ, ಕತ್ರಿನಾ ಕೈಫ್. ಆದರೆ ಸಲ್ಮಾನ್ ಜೊತೆ ಕೈ-ಕೈ ಹಿಡಿದು ಓಡಾಡಿದ ನಟಿಯರ ಪಟ್ಟಿ ದೊಡ್ಡದೇ ಇದೆ.

  1995 ರ ಸುಮಾರಿನಲ್ಲಿ ನಟಿ ಸೋಮಿ ಅಲಿ ಜೊತೆಗೆ ಸಲ್ಮಾನ್ ಖಾನ್ ಹೆಸರು ಜೋರಾಗಿ ಕೇಳಿಬಂದಿತ್ತು. ಇಬ್ಬರೂ ಸುಮಾರು ಎಂಟು ವರ್ಷಗಳ ಕಾಲ ಜೊತೆಯಾಗಿದ್ದರು. ಆದರೆ 1999 ರಲ್ಲಿ ಸಲ್ಮಾನ್ ಖಾನ್ ಹಾಗೂ ಸೋಮಿ ಅಲಿ ಪರಸ್ಪರ ಬೇರಾದರು. ಈ ಬಗ್ಗೆ ಈಗ ಮಾತನಾಡಿದ್ದಾರೆ ಸೋಮಿ ಅಲಿ.

  ಚಿತ್ರರಂಗದಿಂದ ದೂರಾಗಿ ಮಯಾಮಿಯಲ್ಲಿ ನೆಲೆಸಿರುವ ಸೋಮಿ ಅಲಿ, ಸಂದರ್ಶನವೊಂದರಲ್ಲಿ ಮಾತನಾಡಿ, 'ಸಲ್ಮಾನ್ ಖಾನ್ ನನಗೆ ಮೋಸ ಮಾಡಿದ್ದ. ನನ್ನ ಬೆನ್ನ ಹಿಂದೆ ಮತ್ತೊಬ್ಬ ನಟಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದ, ಹಾಗಾಗಿ ನಾವಿಬ್ಬರೂ ದೂರಾದೆವು' ಎಂದಿದ್ದಾರೆ.

  ಸಂಗೀತ ಬಿಜಲಾನಿ-ಸಲ್ಮಾನ್ ದೂರಾಗಲು ನಾನೇ ಕಾರಣ: ಸೋಮಿ

  ಸಂಗೀತ ಬಿಜಲಾನಿ-ಸಲ್ಮಾನ್ ದೂರಾಗಲು ನಾನೇ ಕಾರಣ: ಸೋಮಿ

  ನಾನು ಸಲ್ಮಾನ್ ಖಾನ್ ಅನ್ನು ಮೊದಲು ನೋಡಿದಾಗ ಆತ ಸಂಗೀತ ಬಿಜಲಾನಿ ಜೊತೆ ಸಂಬಂಧದಲ್ಲಿದ್ದ. ಅವರಿಬ್ಬರೂ ಅವರ ಮನೆಯಲ್ಲಿ ಒಟ್ಟಿಗೆ ಇರುತ್ತಿದ್ದರು. ಆದರೆ ಅದು ನನಗೆ ಇಷ್ಟವಾಗುತ್ತಿರಲಿಲ್ಲ, ನಾನು ಸಲ್ಮಾನ್ ಖಾನ್ ಅನ್ನು ಪಡೆಯಬೇಕೆಂದು ಹಠಕ್ಕೆ ಬಿದ್ದೆ, ಸಲ್ಮಾನ್ ಅನ್ನು ಒಲಿಸಿಕೊಂಡೆ. ನನ್ನಿಂದಾಗಿ ಸಲ್ಮಾನ್ ಖಾನ್-ಸಂಗೀತ ಬಿಜಲಾನಿ ದೂರವಾದರು ಎಂದಿದ್ದಾರೆ ಸೋಮಿ ಅಲಿ.

  'ಸಲ್ಮಾನ್ ಖಾನ್ ದೂರಾಗಲು ಐಶ್ವರ್ಯಾ ರೈ ಕಾರಣ'

  'ಸಲ್ಮಾನ್ ಖಾನ್ ದೂರಾಗಲು ಐಶ್ವರ್ಯಾ ರೈ ಕಾರಣ'

  ಆದರೆ ಸಲ್ಮಾನ್ ಖಾನ್ ನನ್ನೊಂದಿಗೆ ದೂರವಾಗಲು ಕಾರಣ ಐಶ್ವರ್ಯಾ ರೈ. ಆಕೆಗಾಗಿ ನನ್ನನ್ನು ಬಿಟ್ಟ ಸಲ್ಮಾನ್ ಖಾನ್. ನಮ್ಮಿಬ್ಬರದ್ದು ಅಷ್ಟೇನೂ ಒಳ್ಳೆಯ ಸಂಬಂಧ ಆಗಿರಲಿಲ್ಲ. 'ದೈಹಿಕ, ಮಾನಸಿಕವಾಗಿ ಆದ ಗಾಯಗಳು ಮಾಯಲೆಂದು ನಾನೀಗ ಈ ಬಗ್ಗೆ ಮಾತನಾಡುತ್ತಿದ್ದೇನೆ' ಎಂದು ಮಾರ್ಮಿಕವಾಗಿ ಹೇಳಿದ್ದಾರೆ ಸೋಮಿ ಅಲಿ.

  ದೈಹಿಕ ಸಂಪರ್ಕ ಬೆಳೆಸಲು ಯತ್ನಿಸಿದ್ದ ನಿರ್ದೇಶಕರು

  ದೈಹಿಕ ಸಂಪರ್ಕ ಬೆಳೆಸಲು ಯತ್ನಿಸಿದ್ದ ನಿರ್ದೇಶಕರು

  ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿರುವ ನಟಿ, 'ಸಣ್ಣ ವಯಸ್ಸಿನಲ್ಲಿ ಪಾಕಿಸ್ತಾನದಲ್ಲಿದ್ದಾಗ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಆಗಿತ್ತು. ನಾನು 14 ನೇ ವಯಸ್ಸಿನಲ್ಲಿದ್ದಾಗಲೂ ನನ್ನ ಮೇಲೆ ಅತ್ಯಾಚಾರ ಮಾಡಲಾಯಿತು. ಕೆಲವು ಸಿನಿಮಾ ನಿರ್ದೇಶಕರು ಸಹ ನನ್ನ ಜೊತೆ ದೈಹಿಕ ಸಂಪರ್ಕ ಬೆಳೆಸಲು ಯತ್ನಿಸಿದ್ದರು' ಎಂದಿದ್ದಾರೆ ನಟಿ ಸೋಮಿ.

  ಯುವರತ್ನ ಸಕ್ಸಸ್ ಪುನೀತ್ ರಾಜ್ ಕುಮಾರ್ ಗೆ ಸಾಥ್ ಕೊಟ್ಟ ಜಗ್ಗೇಶ್ | Filmibeat Kannada
  ನಾನು ಮತ್ತೆ ಬಾಲಿವುಡ್‌ಗೆ ಬರುವುದಿಲ್ಲ: ಸೋಮಿ

  ನಾನು ಮತ್ತೆ ಬಾಲಿವುಡ್‌ಗೆ ಬರುವುದಿಲ್ಲ: ಸೋಮಿ

  ಬ್ರೇಕ್‌ ಅಪ್ ನಂತರ ಭಾರತದಲ್ಲಿ ಇರಬೇಕೆಂದು ಎನಿಸಲಿಲ್ಲ. ಜೊತೆಗೆ ನನ್ನ ಶಿಕ್ಷಣವನ್ನು ಸಹ ನಾನು ಮುಗಿಸಬೇಕಿತ್ತು ಹಾಗಾಗಿ ನಾನು ಮಯಾಮಿಗೆ ಹೊರಟುಬಿಟ್ಟೆ. ಇಲ್ಲಿಯೇ ಎನ್‌ಜಿಓ ನಡೆಸುತ್ತಿದ್ದೇನೆ. ನಾನು ಮತ್ತೆ ಬಾಲಿವುಡ್‌ಗೆ ಪ್ರವೇಶ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು ಸೋಮಿ ಅಲಿ.

  English summary
  Salman Khan's ex girl friend Somi Ali said Salman cheated on her. She said Aishwarya Rai is the reason Salman cheated her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X